ಸಾರಾಂಶ
Education is the weapon for progress of Valmiki community: Swamiji
-ನಾಗನಟಗಿ ಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ
------ಕನ್ನಡಪ್ರಭ ವಾರ್ತೆ ಶಹಾಪುರ
ಹಿಂದುಳಿದ ವಾಲ್ಮೀಕಿ ನಾಯಕ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ತೀರ ಹಿಂದುಳಿದ ವಾಲ್ಮೀಕಿ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗ ಮಾತ್ರ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಸದೃಢಗೊಳ್ಳುವುದು ಎಂದು ಗೋಲಂಪಲ್ಲಿ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ ತಿಳಿಸಿದರು.ತಾಲೂಕಿನ ನಾಗನಟಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮದಲ್ಲಿ ಅನ್ಯ ಸಮಾಜದ ಜತೆ ಸಹೋದರತ್ವದಿಂದ ಇರಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದರೂ ತಾಳ್ಮೆಯಿಂದ ಬಗೆಹರಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು. ಸಮಾಜ ಜಾಗೃತಿ ಕಾರ್ಯದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯ ನಿರ್ವಹಿಸಿದರೆ ಮಾತ್ರ ಮುಂದೊಂದು ದಿನ ಫಲಿತಾಂಶ ಲಭಿಸುತ್ತದೆ. ಸಂಘಟನೆ ಬರೀ ಜಾತಿಗೆ ಸೀಮಿತವಾಗಿ ಉಳಿಯಬಾರದು. ಎಲ್ಲ ಸಮುದಾಯಗಳ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಬೇಕು ಎಂದರು.ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಮಾತನಾಡಿ, ಯಾವುದೇ ಸಮಾಜವು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಹಾಗೂ ಸರ್ಕಾರದ ಸವಲತ್ತು ಪಡೆಯಲು ಹೋರಾಟ ನಡೆಸಿ, ಪಡೆಯಬೇಕು. ಗ್ರಾಮದಲ್ಲಿ ಸಮ ಸಮಾಜದವರ ಜತೆ ಅನ್ಯೋನ್ಯವಾಗಿ ಇರಬೇಕು. ನಮ್ಮ ಸಮಾಜದ ಶಕ್ತಿಯು ಯಾವಾಗಲು ನಮ್ಮ ಒಳತಿಗಾಗಿ ಸದ್ಭಳಕೆಯಾಗಬೇಕು. ಹಿಂದುಳಿದ ಸಮುದಾಯಗಳು ಒಗ್ಗೂಡಿ ಅಕ್ಷರದ ಬೆಳಕಿನ ಕಡೆ ಸಾಗಿಸಬೇಕು. ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಷಣ ನೀಡುವ ಗುರಿ ಹೊಂದಬೇಕು ಎಂದರು.
ಕುರುಬ ಸಮಾಜದ ಹಿರಿಯ ಮುಖಂಡ ಗಿರೆಪ್ಪಗೌಡ ಬಾಣತಿಹಾಳ, ಮಾನಸಿಂಗ್ ಚವ್ಹಾಣ, ನೀಲಕಂಠ ಬಡಿಗೇರ, ಶಿವಮಹಾಂತ ಚಂದಾಪುರ, ನಾಗಪ್ಪ ಕಾಶಿರಾಜ, ವೆಂಕಣ್ಣ ಮೇಟಿ, ವಾಲ್ಮೀಕಿ ನಾಯಕ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಕಾರ್ಯದರ್ಶಿ ಹಣಮಂತರಾಯ ಟೋಕಾಪುರ, ಶೇಖರ ದೊರೆ, ರವೀಂದ್ರ ಯಕ್ಷಿಂತಿ, ಧರ್ಮರಾಜ ಬಾಣತಿಹಾಳ, ಮಾನಶಪ್ಪ ದೊರೆ, ಅಮರೇಶ, ಪಾಂಡುರಂಗ, ಮುದಕಪ್ಪ ಇದ್ದರು-----
28ವೈಡಿಆರ್1: ಶಹಾಪುರ ತಾಲೂಕಿನ ನಾಗನಟಗಿ ಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.