ಶಿಕ್ಷಣ-ಸಂಗೀತಕ್ಕೆ ಜಾತಿ-ಧರ್ಮವಿಲ್ಲ

| Published : Mar 12 2025, 12:48 AM IST

ಸಾರಾಂಶ

ಎಲ್ಲರು ಜಾತಿ-ಧರ್ಮವೆಂದು ಬಡಿದಾಡಿಕೊಳ್ಳುತ್ತಾರೆ. ಆದರೆ, ಶಿಕ್ಷಣ ಮತ್ತು ಸಂಗೀತ ಕ್ಷೇತ್ರದಲ್ಲಿ ಮಾತ್ರ ಜಾತಿ-ಧರ್ಮ ಎನ್ನದೆ ಸೇವೆ ಸಲ್ಲಿಸುತ್ತಾರೆ. ಸಂಗೀತಕ್ಕೆ ಅಂತಹ ಶಕ್ತಿ ಇದೆ. ಇಲ್ಲಿ ಜಾತಿ ಧರ್ಮ ಎಂದು ಇದ್ದಿದ್ದರೆ, ಒಬ್ಬ ಮಹಾನ್ ತಬಲಾ ವಾದಕ ಪಂಡಿತ್ ಝಾಕೀರ್ ಹುಸೇನ್, ಮಹಾನ್ ಗಾಯಕ ಯೇಸುದಾಸ್, ಕಣ್ಣಿಲ್ಲದೆ ಸಾವಿರಾರು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ ಪುಟ್ಟರಾಜ ಗವಾಯಿಗಳು ಇರುತ್ತಿರಲಿಲ್ಲ.

ಕೊಪ್ಪಳ:

ಇಲ್ಲಿನ ಭಾಗ್ಯನಗರದ ಬಯಲು ವೇದಿಕೆ, ಜನತಾ ಕಾಲನಿಯಲ್ಲಿ ಗಾನಾಮೃತ ಸಂಗೀತ ಪ್ರತಿಷ್ಠಾನದ ವತಿಯಿಂದ ನಾದ ತರಂಗಿಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನ ಭಜಂತ್ರಿ, ಎಲ್ಲರು ಜಾತಿ-ಧರ್ಮವೆಂದು ಬಡಿದಾಡಿಕೊಳ್ಳುತ್ತಾರೆ. ಆದರೆ, ಶಿಕ್ಷಣ ಮತ್ತು ಸಂಗೀತ ಕ್ಷೇತ್ರದಲ್ಲಿ ಮಾತ್ರ ಜಾತಿ-ಧರ್ಮ ಎನ್ನದೆ ಸೇವೆ ಸಲ್ಲಿಸುತ್ತಾರೆ. ಸಂಗೀತಕ್ಕೆ ಅಂತಹ ಶಕ್ತಿ ಇದೆ. ಇಲ್ಲಿ ಜಾತಿ ಧರ್ಮ ಎಂದು ಇದ್ದಿದ್ದರೆ, ಒಬ್ಬ ಮಹಾನ್ ತಬಲಾ ವಾದಕ ಪಂಡಿತ್ ಝಾಕೀರ್ ಹುಸೇನ್, ಮಹಾನ್ ಗಾಯಕ ಯೇಸುದಾಸ್, ಕಣ್ಣಿಲ್ಲದೆ ಸಾವಿರಾರು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ ಪುಟ್ಟರಾಜ ಗವಾಯಿಗಳು ಇರುತ್ತಿರಲಿಲ್ಲ ಎಂದರು.

ಪಪಂ ಉಪಾಧ್ಯಕ್ಷ ಹೊನ್ನೂರು ಸಾಬ್ ಭೈರಾಪುರ ಮಾತನಾಡಿ, ಜೀವನ ಕೇವಲ ಬದುಕುವುದಲ್ಲ, ಉತ್ತಮ ನಾಗರಿಕರಾಗಿ, ಕರ್ತವ್ಯದ ಮೇಲೆ ಆತ್ಮಗೌರವದಿಂದ ಇರುವುದು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿನ ಭಾರ ಕಳೆಯುತ್ತವೆ ಎಂದರು.

ವಿಜಯಲಕ್ಷೀ ಮ್ಯಾಗಡೆ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಮ್ಯಾಗಳಮನಿ, ಪರಶುರಾಮ ದಲಭಂಜನ, ಕೆಂಚ್ಚಪ್ಪ ಮ್ಯಾಗಡೆ ಉಪಸ್ಥಿತರಿದ್ದರು.

ಆನಂತರ ಮಂಗಳವಾದ್ಯ ಶಹನಾಯಿ ವಾದನ ಮಲ್ಲಿಕಾರ್ಜುನ ಭಜಂತ್ರಿ ಗದಗ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಅದಿತಿ ಕುಲಕರ್ಣಿ ಕೊಪ್ಪಳ, ವಚನ ಗಾಯನ ಶಂಕ್ರಯ್ಯ ಗುರುಮಠ ಹುಬ್ಬಳ್ಳಿ, ಹಾರ್ಮೋನಿಯಂ ಸೋಲೋ ರಾಮಚಂದ್ರಪ್ಪ ಉಪ್ಪಾರ, ಜಾನಪದ ಗೀತೆ ಭಾಷಾ ಹಿರೇಮನಿ ಕಿನ್ನಾಳ, ಸುಗಮ ಸಂಗೀತ ಸ್ಪಂದನ ಕೆ.ಎಂ., ಗಂಗಾವತಿ, ಭರತನಾಟ್ಯ ಅಪರ್ಣಾ ಹೆಗಡೆ ಹಾಗೂ ತಂಡದಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೊಳಗಿತು. ವಾದ್ಯವೃಂದದ ಹಾರ್ಮೋನಿಯಂ ರಾಘವೇಂದ್ರ ಕೋಣಿ, ಕೀಬೋರ್ಡನಲ್ಲಿ ಕೆ ಪ್ರಕಾಶ್ ರಾಯದುರ್ಗ, ಬಾನ್ಸೂರಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡ್‌ನಲ್ಲಿ ಸಂಜನ್ ಬೆಲ್ಲದ, ತಾಳವಾದ್ಯ ಕೃಷ್ಣ ಸೊರಟೂರ, ಮೆರುಗು ನೀಡಿದರು.