ಶಾಲೆಗಳ ಮೂಲಕ ಸಿಗುವ ವಿದ್ಯೆ-ಬುದ್ಧಿ, ವಿನಮ್ರತೆ, ಸ್ವಾಭಿಮಾನವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಅವು ಕೇವಲ ಶ್ರದ್ಧೆಯಿಂದ ಮಾತ್ರ ದೊರೆಯಲು ಸಾಧ್ಯ.
ಧಾರವಾಡ:
ಶ್ರದ್ಧೆಯಿಂದ ಮಾತ್ರ ವಿದ್ಯೆ, ಬುದ್ಧಿ, ವಿನಮ್ರತೆ ಲಭಿಸುತ್ತವೆ ಎಂದು ಉಪ್ಪಿನ ಬೆಟಗೇರಿ ಗ್ರಾಪಂ ಅಧ್ಯಕ್ಷ ಬಸೀರ ಮಾಳಗಿಮನಿ ಹೇಳಿದರು.ತಾಲೂಕಿನ ಉಪ್ಪಿನ ಬೆಟಗೇರಿಯ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಗುರುವಾರ ನಡೆದ ಪ್ರಸಕ್ತ ಸಾಲಿನ ಉಪ್ಪಿನಬೆಟಗೇರಿ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ ಆಧಾರಿತ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳ ಮೂಲಕ ಸಿಗುವ ವಿದ್ಯೆ-ಬುದ್ಧಿ, ವಿನಮ್ರತೆ, ಸ್ವಾಭಿಮಾನವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಅವು ಕೇವಲ ಶ್ರದ್ಧೆಯಿಂದ ಮಾತ್ರ ದೊರೆಯಲು ಸಾಧ್ಯ ಎಂದರು..ಕಾಶಪ್ಪ ದೊಡವಾಡ ಮಾತನಾಡಿ, ಮಕ್ಕಳು ಸಂತೋಷದಿಂದ ಕಲಿಕೆಯಲ್ಲಿ ತೊಡಗುವಂತೆ ಮಾಡಲು ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ. ಕಲಿಕೆಯಲ್ಲಿ ಗುಣಾತ್ಮಕ ಬದಲಾವಣೆ ಸಾಧಿಸಲು ಪಾಲಕರು, ಶಿಕ್ಷಕರು ಮತ್ತು ಮಕ್ಕಳ ನಡುವೆ
ಉತ್ತಮ ಬಾಂಧವ್ಯ ಇರಬೇಕೆಂದರು.ಉಪ್ಪಿನ ಬೆಟಗೇರಿ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಯಾದವಾಡ, ಪುಡಕಲಕಟ್ಟಿ ಸೇರಿ 12 ಶಾಲೆಗಳಿಂದ 110 ಮಕ್ಕಳು ಕಲಿಕಾ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮೆಮೋರಿ ಚಟುವಟಿಕೆ, ಚಿತ್ರ ನೋಡಿ ವಿವರಿಸು, ಆರೋಗ್ಯ ಮತ್ತು ಪೋಷ್ಟಿಕಾಂಶ, ಸಂತೋಷದಾಯಕ ಗಣಿತ, ಕಥೆ ಹೇಳುವುದು, ಘಟ್ಟಿ ಓದು, ಪಾಲಕರು ಮತ್ತು ಮತ್ತು ಮಕ್ಕಳ ಸಹ ಸಂಬಂಧ ವಲಯ ಸೇರಿ ಏಳು ಹಂತಗಳಲ್ಲಿ ಮಕ್ಕಳ ಕೌಶಲ ಗುರುತಿಸಲಾಯಿತು.
ಸಿಆರ್‌ಪಿ ಎನ್.ಜಿ ಗುರುಪತ್ರನವರ ಪ್ರಾಸ್ತಾವಿಕ ಮಾತನಾಡಿದರು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಿಜಗುಣಿ ಹೂಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ ಓಂಕಾರಿ, ಪುಡಕಲಕಟ್ಟಿ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಬುಡರಕಟ್ಟಿ, ಶಿಕ್ಷಕರ ಸಂಘಟನೆಯ ಅಜೀತ ದೇಸಾಯಿ, ತಾಲೂಕು ಟೀಚರ್ಸ್ ಸೊಸೈಟಿ ಅಧ್ಯಕ್ಷ ಶಂಕರ ಘಟ್ಟಿ, ಬಿಆರ್‌ಪಿ ಪಡೆಸೂರ, ಛಾಯಾ ಹೆಗಡೆ, ಎಸ್.ಡಿ. ಛಬ್ಬಿ, ಎ.ಎಂ ಮೆಣಸಗಿ, ಸಂತೋಷ ನಾಯ್ಕರ, ಶಿವಾನಂದ ಸವಸುದ್ದಿ, ಎಸ್.ಎಂ. ಬೋಂಗಾಳೆ ಬಸವರಾಜ ಪ. ಬೊಬ್ಬಿ ಸೇರಿದಂತೆ ಹಲವರಿದ್ದರು.