ಎಸಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗ ಮನವಿ ನೀಡಲಾಗುವುದು. ಆಗಿರುವ ತಪ್ಪನ್ನು ಇಲ್ಲೆ ಸರಿ ಪಡಿಸಿದರೆ ಸರಿ ನಮ್ಮ ಹೋರಾ ಜಿಲ್ಲಾಮಟ್ಟದಲ್ಲೇ ಮುಗಿಯಲಿದೆ. ಒಂದು ವೇಳೆ ವಿಫಲವಾದರೇ ಈ ವಿಷಯವನ್ನು ಅಧಿವೇಶನದಲ್ಲಿ ಬಿಜೆಪಿ ಶಾಸಕರು ಪ್ರಶ್ನಿಸಲಿದ್ದಾರೆ. ಜಿಲ್ಲೆಯ ಮಾಜಿ ಶಾಸಕರ ನಿಯೋಗ ಶಿಕ್ಷಣ ಇಲಾಖೆ ಪ್ರಿನ್ಸಿಪಾಲ್ ಸೆಕ್ರಟರಿ ಭೇಟಿ ಮಾಡಿ ದೂರು ನೀಡಲಿದೆ.
ಕನ್ನಡಪ್ರಭ ವಾರ್ತೆ ಮಾಲೂರು
ಶಾಲೆಗಾಗಿ ಅಗಲಕೋಟೆ ಗ್ರಾಮದಲ್ಲಿ 1959ರಲ್ಲಿ ದಾನಿಗಳು ನೀಡಿರುವ 50 ಎಕರೆ ಜಮೀನು ಪರಭಾರೆಯಾಗಿದ್ದು, ಅದನ್ನು ಉಳಿಸುವ ಪ್ರಯತ್ನವಾಗಿ ಹೋರಾಟ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಹೇಳಿದರು.ಇಲ್ಲಿನ ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚೆನ್ನೈ ಕಾರಿಡಾರ್ ಪಕ್ಕದಲ್ಲಿರುವ ಈ 50 ಕೋಟಿ ಮೌಲ್ಯದ 50 ಎಕರೆ ಜಮೀನು ತಾಲೂಕಿನ ಜನತೆಗೆ ಉಳಿಸಲು ನನ್ನ ಹೋರಾಟ. ಹಾಲಿ ಶಾಸಕರು ಸರ್ಕಾರದ ಜಮೀನು ಉಳಿಸಲು ಮುಂದಾಗಲಿ. ಅವರೊಂದೊಂದಿಗೆ ನಾವು ಇರುತ್ತೇವೆ ಎಂದು ತಿಳಿಸಿದರು.
ಅದೇ ಜಾಗದಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ನಿರ್ಮಿಸಬಹುದಾಗಿದೆ. ದಾನಿ ಶ್ರೀನಿವಾಸಲು 1959 ರಲ್ಲಿ ಮೈಸೂರು ಆಸ್ಥಾನಕ್ಕೆ ಬರೆದುಕೊಟ್ಟ ದಾನ ಪತ್ರ ಸೇರಿ ಪ್ರತಿಯೊಂದು ದಾಖಲೆಗಳೂ ಇವೆ. ಈ ಜಮೀನಿನ ಕುಟುಂಬವು ವಿಭಾಗ ಮಾಡಿಕೊಳ್ಳಬೇಕಾದರೆ ಈ ಜಮೀನನ್ನು ಸೇರಿ ವಿಭಾಗ ಮಾಡಿಕೊಂಡಿದೆ. ಅಲ್ಲಿಂದ ಈ ದಾಖಲೆಗಳು ಹಳಿ ತಪ್ಪಲು ಪ್ರಾರಂಭವಾಗಿದೆ. ಆದರೆ ಪಹಣಿಯಲ್ಲಿ ಸರ್ಕಾರಿ ಶಾಲೆ ಎಂದು ನಮೂದಿಸುತ್ತಿದ್ದರೂ ರೆವಿನ್ಯೂ ಅಧಿಕಾರಿಗಳ ಭ್ರಷ್ಟತೆಯಿಂದ ಶಾಲೆ ಜಮೀನು ಪರಭಾರೆ ಆಗಿದೆ ಎಂದು ಆರೋಪಿಸಿದರು.1996ರಲ್ಲಿ ಸರ್ಕಾರಿ ಶಾಲೆ ಜಮೀನು ಪರಭಾರೆ ಆಗುತ್ತಿರುವ ಬಗ್ಗೆ ಅಂದಿನ ದಿನಪತ್ರಿಕೆಗಳಲ್ಲಿ ವರದಿ ಬಂದಿದೆ. ಕ್ರಮ ಕೈಗೊಳ್ಳುವಂತೆ ಅಂದಿನ ಎಸಿ ಆದೇಶ ಸಹ ಮಾಡಿದ್ದಾರೆ. ಆದರೂ ಮೂವರ ಕೈ ಬದಲಾಗಿ ಇಂದು ಹೊರ ರಾಜ್ಯದ ನಾಯ್ದುಗಳು ಈ 50 ಎಕರೆ ಸೇರಿ 250 ಎಕರೆ ಜಮೀನು ಖರೀದಿ ಮಾಡಿದ್ದು, ಪಹಣಿಯಲ್ಲಿ ಸರ್ಕಾರಿ ಶಾಲೆ ಎಂದು ನಮೂದಿಸಿದ್ದರೂ, ಖರೀದಿ, ನೋಂದಣಿ ಮಾಡಲಾಗಿದೆ ಎಂದು ದೂರಿದರು. ಬಿಇಓ, ಡಿಡಿಪಿಐ, ಜಿಲ್ಲಾಧಿಕಾರಿ, ಎಸಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗ ಮನವಿ ನೀಡಲಾಗುವುದು. ಆಗಿರುವ ತಪ್ಪನ್ನು ಇಲ್ಲೆ ಸರಿ ಪಡಿಸಿದರೆ ಸರಿ ನಮ್ಮ ಹೋರಾ ಜಿಲ್ಲಾಮಟ್ಟದಲ್ಲೇ ಮುಗಿಯಲಿದೆ. ಒಂದು ವೇಳೆ ವಿಫಲವಾದರೇ ಈ ವಿಷಯವನ್ನು ಅಧಿವೇಶನದಲ್ಲಿ ಬಿಜೆಪಿ ಶಾಸಕರು ಪ್ರಶ್ನಿಸಲಿದ್ದಾರೆ. ಜಿಲ್ಲೆಯ ಮಾಜಿ ಶಾಸಕರ ನಿಯೋಗ ಶಿಕ್ಷಣ ಇಲಾಖೆ ಪ್ರಿನ್ಸಿಪಾಲ್ ಸೆಕ್ರಟರಿ ಭೇಟಿ ಮಾಡಿ ದೂರು ನೀಡಲಿದೆ ಎಂದು ತಿಳಿಸಿದರು. ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಎಸ್.ವಿ.ಲೋಕೇಶ್, ಚಂದ್ರಶೇಖರ್ ಗೌಡ, ರಘುನಾಥ್, ಬೆಳ್ಳಾವಿ ಸೋಮಣ್ಣ, ಚಂದ್ರಾರೆಡ್ಡಿ, ವಿಜಯಲಕ್ಷ್ಮಿ, ವಾಟರ್ ನಾರಾಯಣಸ್ವಾಮಿ, ವೇಣುಗೋಪಾಲ್ ಗೌಡ, ಚೀಟಿ ವೇಣು, ಮುನಿಕೃಷ್ಣ, ಪದ್ಮಾವತಿ ನಾರಾಯಣಸ್ವಾಮಿ, ಅಮುದಾ ವೇಣು ಇನ್ನಿತರರು ಇದ್ದರು.