ಶಿಕ್ಷಣ ಸಣ್ಣ ಸಮುದಾಯದ ಆಸ್ತಿಯಾಗಬೇಕು: ಕೆ.ಸಿ.ಕೃಷ್ಣಶೆಟ್ಟಿ

| Published : Jan 13 2025, 12:47 AM IST

ಶಿಕ್ಷಣ ಸಣ್ಣ ಸಮುದಾಯದ ಆಸ್ತಿಯಾಗಬೇಕು: ಕೆ.ಸಿ.ಕೃಷ್ಣಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಕಿಕ್ಕೇರಿ ಎಂದರೆ ನೇಕಾರಿಕೆ, ಕೈಮಗ್ಗದ ಸೀರೆ ಎನ್ನುವಂತಿತ್ತು. ರಾಜ ಮಹಾರಾಜರಿಗೆ ವಸ್ತ್ರ ಸರಬರಾಜು ಮಾಡಲಾಗುತ್ತಿತ್ತು. ಬದುಕು ಕಟ್ಟಿಕೊಟ್ಟಿದ್ದ ಕೈಮಗ್ಗಗಳ ಸದ್ದು ಇಲ್ಲವಾಗಿದೆ. ಈಗ ತಮ್ಮ ಬದುಕಿಗೆ ಜನಾಂಗದವರು ಬೆಂಗಳೂರಿನಂತಹ ನಗರಕ್ಕೆ ವಲಸೆ ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಶಿಕ್ಷಣ ಸಣ್ಣ ಸಮುದಾಯದ ಬಲು ದೊಡ್ಡ ಆಸ್ತಿ ಎಂದು ಹಾಸನದ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ.ಕೃಷ್ಣಶೆಟ್ಟಿ ಹೇಳಿದರು.

ಪಟ್ಟಣದ ಕುರುಹಿನಶೆಟ್ಟಿ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಿವಿಧ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ, ದಿನದರ್ಶಿಕೆ ಬಿಡುಗಡೆ, ವೈಕುಂಠ ಏಕಾದಶಿ ಪೂಜೆ, ವಿಜ್ಞಾನಿ ಡಾ.ಕೆ.ಎನ್. ಮೋಹನ್‌ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಿಂದೆ ಕಿಕ್ಕೇರಿ ಎಂದರೆ ನೇಕಾರಿಕೆ, ಕೈಮಗ್ಗದ ಸೀರೆ ಎನ್ನುವಂತಿತ್ತು. ರಾಜ ಮಹಾರಾಜರಿಗೆ ವಸ್ತ್ರ ಸರಬರಾಜು ಮಾಡಲಾಗುತ್ತಿತ್ತು. ಬದುಕು ಕಟ್ಟಿಕೊಟ್ಟಿದ್ದ ಕೈಮಗ್ಗಗಳ ಸದ್ದು ಇಲ್ಲವಾಗಿದೆ. ಈಗ ತಮ್ಮ ಬದುಕಿಗೆ ಜನಾಂಗದವರು ಬೆಂಗಳೂರಿನಂತಹ ನಗರಕ್ಕೆ ವಲಸೆ ಹೋಗಿದ್ದಾರೆ ಎಂದರು.

ಬೆಂಗಳೂರಿನ ಡಿಎಸ್‌ಪಿ ಬಿ.ಎಲ್.ಲಕ್ಷ್ಮೇಗೌಡ ಮಾತನಾಡಿ, ಬದುಕು ಕಟ್ಟಿಕೊಟ್ಟ ಕಿಕ್ಕೇರಿ, ಉನ್ನತ ಹುದ್ದೆಗೆ ಏರಲು ಸಮಾಜದ ಸಹಕಾರ, ಗುರುಹಿರಿಯರ ಮಾರ್ಗದರ್ಶನ ಸಾಕಷ್ಟಿದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ಮೈಸೂರು ಕುರುಹಿನಶೆಟ್ಟಿ ವಿಚಾರ ವೇದಿಕೆ ಅಧ್ಯಕ್ಷಕೆ.ಎಚ್.ಸಂಜೀವಶೆಟ್ಟಿ ಸಮಾಜದ ಸ್ಥಿತಿಗತಿ ಕುರಿತು ಮಾತನಾಡಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿಭಾಗದಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ವಿವಿಧ ಆಟೋಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಿಕ್ಕೇರಿ ಊಗಿನಹಳ್ಳಿಯವರಾದ ವಿಜ್ಞಾನಿ ಡಾ.ಕೆ.ವಿ.ಮೋಹನ್ ಹಾಗೂ ಪ್ರಮೀಳಾ ದಂಪತಿ ಸೇರಿದಂತೆ ಸಮಾಜದ ಗಣ್ಯರನ್ನು ಅಭಿನಂದಿಸಲಾಯಿತು. ಸಿದ್ದರೂಢಸ್ವಾಮಿ ವಿವಿಧ ಪೂಜಾ ಕಾರ್ಯಕ್ರಮ ನಡೆದು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಅನ್ನ ಸಂತರ್ಪಣೆ ನಡೆಯಿತು.ಕಿಕ್ಕೇರಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ, ಕಾರ್ಯದರ್ಶಿ ಡಿ. ಉಮೇಶ್, ಮೈಸೂರು ಕುರುಹಿನಶೆಟ್ಟಿ ವಿಚಾರ ವೇದಿಕೆ ಅಧ್ಯಕ್ಷ ಕೆ.ಎಚ್.ಸಂಜೀವಶೆಟ್ಟಿ, ಉಪಾಧ್ಯಕ್ಷ ಗೋವಿಂದಶೆಟ್ಟಿ, ಶಶಿ ಸಂಜೀವಿನಿ ಟ್ರಸ್ಟ್‌ನ ನಾಗೇಶ್, ಕಿಕ್ಕೇರಿ ಎಲ್ತ್‌ಅಕಾಡೆಮಿ ಸಂಸ್ಥಾಪಕ ಕೆ.ಆರ್.ಕೃಷ್ಣಶೆಟ್ಟಿ, ಕೆಇಬಿ ತಿಮ್ಮಶೆಟ್ಟಿ, ಜೇನುಗೂಡು ಮಹೇಶ್, ನಾಗೇಶ್, ವಿನೋದಮ್ಮ, ಕೆಕೆಜಿಎಸ್‌ಟ್ರಸ್ಟ್‌ಉಪಾಧ್ಯಕ್ಷ ಜಿ. ಸೋಮಶೇಖರ್, ಸುನೀತಾ, ವಿನೋದಮ್ಮ, ಕೆಇಬಿ ಬಸವರಾಜು, ವರದರಾಜು, ಕೆ.ಆರ್.ಪಾಂಡು, ಕೆ.ಎಸ್. ದೊರೆಸ್ವಾಮಿ, ಸಿ.ಎಸ್. ಸಾವಿತ್ರಿ, ಪಂಕಜ, ಭಾರತಿ, ಟೈಲರ್‌ಪುಟ್ಟರಾಜು, ಪಾರ್ವತಿ, ಪುಟ್ಟರಾಜು ಇದ್ದರು.