ಸಾರಾಂಶ
ಇಂದಿನ ಶಿಕ್ಷಣ ಸಂಸ್ಥೆ ವ್ಯಾಪಾರೀಕರಣ ವಾಗಿರುವ ಕಾಲಘಟ್ಟದಲ್ಲಿದ್ದೇವೆ ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಶಿಕ್ಷಣ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಸಾಂಸ್ಕೃತಿಕ ಮತ್ತು ಮನೋರಂಜನೆ ಒದಗಿಸಬೇಕೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ತರಾಸು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಶಿಕ್ಷಣ ಸಂಸ್ಥೆ ವ್ಯಾಪಾರೀಕರಣವಾಗಿರುವ ಕಾಲದಲ್ಲಿ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ನಾಗರೀಕತೆ ಕಲಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.
ವಿಜ್ಞಾನ ಶಿಕ್ಷಕ ಹೆಚ್.ಎಸ್.ಟಿ ಸ್ವಾಮಿ ಖಗೋಳ ಮತ್ತು ಮೂಢನಂಬಿಕೆಗಳ ವಿಷಯ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಪರಿವರ್ತನಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಂ.ಕೆ.ರವೀಂದ್ರ, ಕಾರ್ಯದರ್ಶಿ ಎಂ.ಕಾರ್ತಿಕ್, ಕೋಟ್ಲ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಸುಮ, ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು, ನಟ ಬುಲೆಟ್ ವಿನು, ಉಮೇಶ್ ವಿ.ತುಪ್ಪದ್, ಮಾರುತಿ ಮೋಹನ್, ಎಸ್.ಶ್ವೇತ ಕಾರ್ತಿಕ್, ವೇದ ರವೀಂದ್ರ, ಸಿ.ಹರೀಶ, ಡಾ.ಪಿ.ಮಧುಸೂದನರೆಡ್ಡಿ, ಎಸ್.ಜಿ.ರಂಗನಾಥ್, ಮುಖ್ಯ ಶಿಕ್ಷಕಿ ಶಶಿಕಲ ಎಂ.ಎಸ್ ಇದ್ದರು.ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.