ಕುಷ್ಟಗಿ ಪಟ್ಟಣದ ಎನ್.ಸಿ.ಎಚ್. ಪ್ಯಾಲೇಸ್‌ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಅ. 18ರಂದು ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.
ಕುಷ್ಟಗಿ: ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಜತೆಗೆ ವೀರಶೈವ ಸಮಾಜದ ಎಲ್ಲ ಒಳಪಂಗಡಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಪಟ್ಟಣದ ಎನ್.ಸಿ.ಎಚ್. ಪ್ಯಾಲೇಸ್‌ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಅ. 18ರಂದು ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘಟನೆಯ ಶಕ್ತಿ ಹೆಚ್ಚಾದಾಗ ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.ಅ. 18ರಂದು ಎನ್.ಸಿ.ಎಚ್. ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಶ್ರೀನಿವಾಸ ರೆಡ್ಡಿ ಮಾತನಾಡಿ, ಸಂಘಟನೆ ಬಲಪಡಿಸುವ ಜತೆಗೆ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು. ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ ಮಾತನಾಡಿ, ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ತಾಲೂಕಾಧ್ಯಕ್ಷ ಉಮಾಪತಿ ಅಕ್ಕಿ, ಎಚ್. ಗಿರೇಗೌಡ, ನಾಗಭೂಷಣ ಸಾಲಿಮಠ, ಸಂಗಪ್ಪ ಟೆಂಗಿನಕಾಯಿ, ಲಲಿತಮ್ಮ ಮೇಲಿನಮನಿ, ಶಶಿಧರ ಕವಲಿ, ಶೇಖರಗೌಡ ಮಾಲಿಪಾಟೀಲ್, ಟಿ. ಬಸವರಾಜ, ಎಸ್.ಎಚ್. ಹಿರೇಮಠ, ಈರಣ್ಣ ಬಳಿಗಾರ, ಅನಿಲ ಆಲಮೇಲ, ಸಂಗಯ್ಯ ವಸ್ತ್ರದ, ದೊಡ್ಡಯ್ಯ ಗದ್ದಡಕಿ, ಉಮೇಶ ಮಂಗಳೂರು, ಬಸವರಾಜ ಹಳ್ಳೂರು, ಮಹೇಶ ಪಡಿ, ಚಂದ್ರು ನಾಲತವಾಡ, ಶಿವಪುತ್ರಪ್ಪ, ಬಸವರಾಜ ಪಡಿ, ಮಹಾಂತೇಶ ಅಗಸಿಮುಂದಿನ್, ಬಸವರಾಜ ಕುದರಿಮೋತಿ, ರವೀಂದ್ರನಾಥ ಪಾಟೀಲ, ಬಸನಗೌಡ ಪಾಟೀಲ, ಶಶಿಧರ ಕುಂಬಾರ ಮುದೆನೂರು, ಅಮರೇಗೌಡ ಪಾಟೀಲ್ ಜಾಲಿಹಾಳ ಭಾಗವಹಿಸಿದ್ದರು. ನಾಗರಾಜ ಪಟ್ಟಣಶೆಟ್ಟರ ಸ್ವಾಗತಿಸಿದರು. ಮಹಾಂತಯ್ಯ ಕೋಮಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.