ಸಾರಾಂಶ
ನಗರಸಭೆಯಿಂದ 7.25 ಯೋಜನೆ ಅಡಿಯಲ್ಲಿ ಹಾಗೂ ಎಸ್ ಎಫ್ ಸಿ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಸಾಮಗ್ರಿ ನಗರಸಭೆಯಿಂದ ಕೊಡಿಸಿದ್ದು ವಿದ್ಯಾರ್ಥಿ ವರ್ಗಕ್ಕೆ ಅನುಕೂಲ
ಕೊಪ್ಪಳ: ಶೈಕ್ಷಣೀಕ ಅಭಿವೃದ್ಧಿ ಆಗಬೇಕಾದರೆ,ಶೈಕ್ಷಣೀಕ ರಂಗಕ್ಕೆ ಇರುವ ಸವಲತ್ತುಗಳು ಸಹ ಸದ್ಭಳಕೆ ಆಗಬೇಕು ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆಯಿಂದ ನಗರದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ನಗರದ ಐದು ವಸತಿ ನಿಲಯಗಳಿಗೆ 7.25 ಯೋಜನೆ ಅಡಿಯಲ್ಲಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ವಸತಿ ನಿಲಯಗಳಿಗೆ ನಗರಸಭೆಯಿಂದ ಸಾಮಗ್ರಿ ವಿತರಣೆ ಮಾಡುತ್ತಿದ್ದು, ಶೈಕ್ಷಣೀಕ ರಂಗಕ್ಕೆ ಸದಾ ಸಹಕಾರ ಇದೆ. ವಿದ್ಯಾರ್ಥಿಗಳಿಗೆ ಶೈಕ್ಷಣೀಕ ವಿಷಯವಾಗಿ ಹಾಗೂ ವಸತಿ ನಿಲಯದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಾಮಗ್ರಿಗಳಾದ ಕಂಪ್ಯೂಟರ್ ಚೇರ್, ಊಟ ಮಾಡುವ ಗ್ಲಾಸ್, ಟೇಬಲ್, ನ್ಯಾಪ್ ಕೀನ್ ಬರ್ನಿಂಗ್ ಮಿಷನ್ ಸೇರಿದಂತೆ ಸುಮಾರು ₹10 ಲಕ್ಷ ಮೌಲ್ಯದ ಅಗತ್ಯ ವಸ್ತುಗಳ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಎಂದರು.ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಾ.ಶಿವಶಂಕರ ವಿ ಕರಡಕಲ್ ಮಾತನಾಡಿ, ನಗರಸಭೆಯಿಂದ 7.25 ಯೋಜನೆ ಅಡಿಯಲ್ಲಿ ಹಾಗೂ ಎಸ್ ಎಫ್ ಸಿ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಸಾಮಗ್ರಿ ನಗರಸಭೆಯಿಂದ ಕೊಡಿಸಿದ್ದು ವಿದ್ಯಾರ್ಥಿ ವರ್ಗಕ್ಕೆ ಅನುಕೂಲ ಆಗಿದೆ. ನಗರಸಭೆಯಿಂದ ಶಿಕ್ಷಣಕ್ಕೆ ಸಿಗುವ ಪ್ರೋತ್ಸಾಹ ಮಕ್ಕಳು ಸದುಪಯೋಗಪಡಿಸಿಕೊಂಡಾಗ ಸಾರ್ಥಕತೆ ಆಗುತ್ತದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ಪೌರಾಯುಕ್ತ ಗಣಪತಿ ಪಾಟೀಲ್, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ರಮೇಶ ಹುಬ್ಬಳ್ಳಿ, ನಗರಸಭೆಯ ಕಿರಿಯ ಅಭಿಯಂತರ ಸೋಮಲಿಂಗಪ್ಪ, ವ್ಯವಸ್ಥಾಪಕ ಮುನಿಸ್ವಾಮಿ, ವಸತಿ ನಿಲಯಗಳ ನಿಲಯ ಪಾಲಕರು, ವಸತಿ ನಿಲಯದ ಮತ್ತು ನಗರಸಭೆಯ ಸಿಬ್ಬಂದಿಗಳಿದ್ದರು.