ಮಠಮಾನ್ಯಗಳಿಂದ ಶೈಕ್ಷಣಿಕ ಕ್ರಾಂತಿ: ಬಸವರಾಜ

| Published : Feb 13 2025, 12:51 AM IST

ಸಾರಾಂಶ

ನಮ್ಮ ಹಿರಿಯ ಗುರುಗಳಾದ ಬೆತ್ತದ ಅನ್ನದಾನ ಶ್ರೀಗಳು ಜೋಳಿಗೆಯಿಂದ ಭಿಕ್ಷೆಬೇಡಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಬೋಧಕರಿಗೆ ಮುಷ್ಟಿ ಸಂಭಾವನೆ ನೀಡಿ ಬಡಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕಿದವರು

ನರೇಗಲ್ಲ: ಈ ನಾಡಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಶೈಕ್ಷಣಿಕ ಕ್ರಾಂತಿ ಮಾಡಿದ್ದು ಮಠಮಾನ್ಯಗಳು, ಅದರಲ್ಲಿ ಹಾಲಕೆರೆ ಅನ್ನದಾನೇಶ್ವರ ಮಠ ಅಗ್ರಸ್ಥಾನದಲ್ಲಿದೆ, ಇಲ್ಲಿ ಶಿಕ್ಷಣದ ಜತೆಗೆ ಅನ್ನದಾಸೋಹ ಗೈಯುವ ಮೂಲಕ ಬಡಮಕ್ಕಳ ಪಾಲಿನ ಆಶಾಕಿರಣವಾಗಿದೆ ಎಂದು ಕರಡ್ಯಾಲ ಚನ್ನಬಸವೇಶ್ವರ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಮೊಳಕೇರಿ ಹೇಳಿದರು.

ಅವರು ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ವಾರ್ಷಿಕ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ನಮ್ಮ ಹಿರಿಯ ಗುರುಗಳಾದ ಬೆತ್ತದ ಅನ್ನದಾನ ಶ್ರೀಗಳು ಜೋಳಿಗೆಯಿಂದ ಭಿಕ್ಷೆಬೇಡಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಬೋಧಕರಿಗೆ ಮುಷ್ಟಿ ಸಂಭಾವನೆ ನೀಡಿ ಬಡಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕಿದವರು, ಶಿಕ್ಷಣವೇ ಇಲ್ಲದ ಕಾಲಗಟ್ಟದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದವರು ಎಂದರು.

ವಿಡಿಎಸ್ ಟಿ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ, ಇದು ನಿಲ್ಲಬೇಕು, ಪ್ರತಿಯೊಂದು ಶಿಕ್ಷಣ ಸಂಸ್ಥೆ ಮಠಮಾನ್ಯಗಳಂತೆ ಸೇವಾಮನೋಭಾವ ಹೋಂದಬೇಕು ಮಕ್ಕಳಿಗೆ ನಿಜವಾದ ಪರೀಶ್ರಮವೇ ಫಲಿತಾಂಶವಾಗಲಿ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.

ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಚೇರಮನ್ ಎಂ.ಜಿ. ಸೋಮನಕಟ್ಟಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಶೈಕ್ಷಣಿಕ ಮೇಲ್ವಿಚಾರಕ ಬಿ.ಎಸ್.ಗೌಡರ, ಆಡಳಿತ ಮಂಡಳಿ ಸದಸ್ಯ ಬಸವರಾಜ ಕಳಕಣ್ಣವರ, ಎಂ.ಪಿ. ಪಾಟೀಲ, ವಿ.ಎಸ್. ಧೋತ್ರದ, ಬಸವರಾಜ ವೀರಾಪೂರ, ನಿಂಗನಗೌಡ ಲಕ್ಕನಗೌಡ್ರ ಸೇರಿದಂತೆ ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.