3ಬಿ (ಮಿಡ್ಲ್) ಬೋಧನೆಯಲ್ಲಿ ಶೈಕ್ಷಣಿಕ ತಂತ್ರಜ್ಞಾನ ಪಾಲಿಸಬೇಕು
KannadaprabhaNewsNetwork | Published : Oct 21 2023, 12:30 AM IST / Updated: Oct 21 2023, 12:31 AM IST
3ಬಿ (ಮಿಡ್ಲ್) ಬೋಧನೆಯಲ್ಲಿ ಶೈಕ್ಷಣಿಕ ತಂತ್ರಜ್ಞಾನ ಪಾಲಿಸಬೇಕು
ಸಾರಾಂಶ
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗಸಂಸ್ಥೆ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ
ಕನ್ನಡಪ್ರಭ ವಾರ್ತೆ, ಶಿಕಾರಿಪುರ ಆಧುನಿಕ ಪ್ರವೃತ್ತಿಯ ಹೊಸ ಶೈಕ್ಷಣಿಕ ತಂತ್ರಜ್ಞಾನವನ್ನು ಶಿಕ್ಷಕರು ಬೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಕಲಿಕೆ ಶಾಲೆಯ ಹೊರತಾಗಿ ಪ್ರವೃತ್ತಿಯಾಗಿ ಕಲಿಯುವಂತಾಗಬೇಕು ಎಂದು ಸಂಸದ ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ವೈ. ರಾಘವೇಂದ್ರ ಹೇಳಿದರು. ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗಸಂಸ್ಥೆ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾದ 2 ದಿನದ ಅಂತರ ರಾಷ್ಟ್ರೀಯ ವಿಚಾರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದದರು. ಶಿಕ್ಷಣ ಕೇವಲ ಜ್ಞಾನ ನೀಡುವುದರ ಮೂಲಕ ಜೀವನ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಶಿಕ್ಷಣದಿಂದ ಉತ್ತಮ ಆರ್ಥಿಕ ಸ್ಥಿತಿಯ ಉನ್ನತಿ ಆಗಬೇಕು. ವಿಚಾರ ಸಮ್ಮೇಳನ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ಅಂತರರಾಷ್ಟ್ರೀಯ ಮಟ್ಟಕ್ಕೆ ಶಿಕ್ಷಣದ ಹೊಸ ಆಯಾಮಗಳನ್ನು ತೆರೆದಿಡುವ ಮಹತ್ವಪೂರ್ಣವಾದ ಸಮ್ಮೇಳನವಾಗಿದೆ ಎಂದರು. ಆಧುನಿಕ ಶಿಕ್ಷಣ ನೀತಿ- 2020 ಅನುಷ್ಠಾನಕ್ಕೆ ತರುವಲ್ಲಿ ಇಂತಹ ಸಮ್ಮೇಳನಗಳು ಯಶಸ್ವಿಯಾಗಲಿ ಎಂದು ತಿಳಿಸಿದರು. ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ತನ್ನದೇ ಆದ ಗುಣಮಟ್ಟದ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಸಿದ್ಧ ಸಂಸ್ಥೆಯಾಗಿದೆ. ಕಳೆದ ವರ್ಷ ನ್ಯಾಕ್ ಎ+ ಮಾನ್ಯತೆ ಪಡೆದುಕೊಂಡಿದೆ. ಶೈಕ್ಷಣಿಕ ಬದಲಾವಣೆ ಕೇವಲ ವಿದ್ಯಾರ್ಥಿಗಳಿಂದ ಮಾತ್ರ ಸಾದ್ಯವಿಲ್ಲ. ಈ ದಿಸೆಯಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿ, ಕುವೆಂಪು ವಿವಿ ಕುಲಪತಿ ಪ್ರೊ. ಎಸ್.ವೆಂಕಟೇಶ್ ಮಾತನಾಡಿ, ತಂತ್ರಜ್ಞಾನ ಆಧಾರಿತ ಬೋಧನಾ ಕ್ರಮಗಳನ್ನು ಶಿಕ್ಷಕ ಅಳವಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ಉತ್ತಮ ಪಡಿಸುವಲ್ಲಿ ಸಮ್ಮೇಳನ ಯಶಸ್ವಿಯಾಗಲಿದೆ. ಆಧುನಿಕ ಸಂಬಂಧಗಳನ್ನು ಹೊಸ ಹೊಸ ಶೈಕ್ಷಣಿಕ ಆವಿಷ್ಕಾರಗಳನ್ನು ಮತ್ತು ಸಂಶೋಧನಾ ಪ್ರವೃತ್ತಿಗೆ ಪೂರಕವಾಗುವ ಸಂಗತಿ ಬಗ್ಗೆ ಸಮ್ಮೇಳನದಲ್ಲಿ ನಿರ್ಣಾಯಕ ತೀರ್ಮಾನ ಕೈಗೊಳ್ಳುವಂತೆ ತಿಳಿಸಿದರು. ಕಾಲೇಜು ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ವಿಷ್ಣುಮೂರ್ತಿ, ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ಬಿ. ಶಿವಕುಮಾರ್, ಮೈಸೂರು ಮಾನಸ ಗಂಗೋತ್ರಿಯ ಪ್ರೊ. ಡಾ. ಸಿ.ಜಿ. ವೆಂಕಟೇಶ್ ಮೂರ್ತಿ, ಪ್ರೊ.ವಿಶ್ವನಾಥ್, ಪ್ರಾಚಾರ್ಯ ಡಾ.ಶಿವಕುಮಾರ್, ಸಂಸ್ಥೆ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ಇದ್ದರು. - - - -20ಕೆ.ಎಸ್.ಕೆಪಿ2: ಸಮ್ಮೇಳನವನ್ನು ಸಂಸ್ಥೆ ಅಧ್ಯಕ್ಷ ಎಂ.ಬಿ ಶಿವಕುಮಾರ್ ಉದ್ಘಾಟಿಸಿದರು.