ಫೆಂಗಲ್ ಪರಿಣಾಮ: ನೆಲ ಕಚ್ಚಿದ ರಾಗಿ, ಭತ್ತ

| Published : Dec 03 2024, 12:32 AM IST

ಸಾರಾಂಶ

ರಾಮನಗರ: ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಫೆಂಗಲ್ ಚಂಡಮಾರುತದಿಂದಾಗಿ ರಾಮನಗರ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ರಾಗಿ ಮತ್ತು ಭತ್ತದ ಫಸಲು ನೆಲಕಚ್ಚುವಂತೆ ಮಾಡಿದೆ.

ರಾಮನಗರ: ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಫೆಂಗಲ್ ಚಂಡಮಾರುತದಿಂದಾಗಿ ರಾಮನಗರ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ರಾಗಿ ಮತ್ತು ಭತ್ತದ ಫಸಲು ನೆಲಕಚ್ಚುವಂತೆ ಮಾಡಿದೆ.

ಮಳೆ ಆಗದೆ ಹೋಗಿದ್ದರೆ ಈ ವೇಳೆಗೆ ರಾಗಿ ಮತ್ತು ಭತ್ತದ ಕೊಯ್ಲು ಆರಂಭಿಸಬಹುದಿತ್ತು. ಆದರೀಗ ಕೆಲವರು ಕೊಯ್ಲು ಆರಂಭಿಸಿ ಮಳೆಯಿಂದ ಸ್ಥಗಿತಗೊಳಿಸಿದ್ದರೆ ಮತ್ತೆ ಕೆಲವು ರೈತರು ಹೇಗಪ್ಪಾ ಕೊಯ್ಲು ಮಾಡುವುದೆಂಬ ಚಿಂತೆಯಲ್ಲಿದ್ದಾರೆ. ದಿನವಿಡಿ ಸುರಿಯುತ್ತಿರುವ ಜಿಟಿಜಿಟಿ ಮಳೆ ಅನ್ನದಾತರನ್ನು ಕಂಗಾಲಾಗಿಸಿದೆ.

ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಯ್ಲಿಗೆ ಬಂದಿರುವ ರಾಗಿ ಮತ್ತು ಭತ್ತದ ಬೆಳೆ ನಾಶವಾಗುವ ಹಂತ ತಲುಪಿದ್ದು, ರೈತರು ಏನು ಮಾಡಬೇಕೆಂದು ದಿಕ್ಕು ತೋಚದೆ ಚಿಂತಾಕ್ರಾಂತರಾಗಿದ್ದಾರೆ.

ಕೆಲವೆಡೆ ರಾಗಿ ಮತ್ತು ಭತ್ತದ ಬೆಳೆ ಕಟಾವು ಮಾಡಲಾಗಿದೆ. ಕೃಷಿ ಕಾರ್ಮಿಕರ ಕೊರತೆ ಹಾಗೂ ಲಭ್ಯವಿರುವ ಕಾರ್ಮಿಕರು ಹೆಚ್ಚು ಕೂಲಿ ಕೇಳುತ್ತಿರುವುದರಿಂದ ರಾಗಿ, ಭತ್ತದ ಬೆಳೆಯನ್ನು ರಕ್ಷಿಸಿಕೊಳ್ಳುವುದೇ ಕೃಷಿಕರಿಗೆ ದೊಡ್ಡ ಸವಾಲಾಗಿದೆ. ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸನ್ನಿವೇಶ ನಿರ್ಮಾಣವಾಗಿದೆ.

ಅನಿರೀಕ್ಷಿತವಾಗಿ ಬಂದಿರುವ ಫೆಂಗಲ್ ಚಂಡಮಾರುತದಿಂದ ರಾಗಿ ಮತ್ತು ಭತ್ತ ರಕ್ಷಿಸಿಕೊಳ್ಳುವುದು ರೈತರಿಗೆ ಕಷ್ಟವಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಮುಂದುವರಿದರೆ ಭತ್ತ ಪೂರ್ತಿ ನೆಲಕಚ್ಚಲಿದೆ. ಭತ್ತದ ಹುಲ್ಲು ಕೂಡ ಕೊಳೆತು ದನಗಳಿಗೆ ಮೇವು ಇಲ್ಲದಂತಾಗುತ್ತದೆ.

ಈ ಬಾರಿ ಉತ್ತಮ ಮಳೆಯಾಗಿದ್ದರಿಂದ, ಜಿಲ್ಲಾದ್ಯಂತ ಹೆಚ್ಚಾಗಿ ರಾಗಿ ಮತ್ತು ಭತ್ತ ಬಿತ್ತನೆ ಮಾಡಲಾಗಿತ್ತು. ಈಗ ಎರಡು ಬೆಳೆಗಳು ಕೊಯ್ಲಿಗೆ ಬಂದಿದೆ. ಕೆಲವೆಡೆ ರಾಗಿ ತೆನೆ ಕೊಯ್ದು ಹೊಲದಲ್ಲಿ ರಾಶಿ ಹಾಕಲಾಗಿದೆ. ಈಗ ಮಳೆ ಬರುತ್ತಿರುವುದರಿಂದ, ರೈತರು ತೆನೆ ರಾಶಿ ಮೇಲೆ ಟಾರ್ಪಾಲು ಹೊದಿಸಿದ್ದಾರೆ. ಬೆಳೆ ಕಟಾವಾಗದ ಹೊಲಗಳಲ್ಲಿ ತೆನೆ ಉದುರುತ್ತಿದೆ.

ಈ ವರ್ಷ ಜಿಲ್ಲೆಯಲ್ಲಿ 71,750 ಹೆಕ್ಟೇರ್ ಪೈಕಿ 70,113 ಹೆಕ್ಟೇರ್‌ನಲ್ಲಿ ಭತ್ತ, 3780 ಹೆಕ್ಟೇರ್ ಪೈಕಿ 3187 ಹೆಕ್ಟೇರ್ ರಾಗಿ, 2000 ಹೆಕ್ಟೇರ್ ಪೈಕಿ 1329 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ. ತೆನೆ ಒಣಗಿದ ಮೇಲೆ ರಾಗಿ ಕೊಯ್ಲಿಗೆ ರೈತರು ಮುಂದಾಗಿದ್ದರು. ಜಿಲ್ಲೆಯಲ್ಲಿ ಶೇಕಡ 30 - 40ರಷ್ಟು ರಾಗಿ ಕಟಾವು ಆಗಿದ್ದು, ಎಲ್ಲವೂ ಭೂಮಿಯಲ್ಲಿಯೇ ಇದೆ. ಆದರೆ, ಇದನ್ನು ಉಳಿಸಿಕೊಳ್ಳುವುದು ರೈತರಿಗೆ ಕಷ್ಟವಾಗಿದೆ.

ಕೋಟ್ ............

ರಾಮನಗರ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಜಿಲ್ಲೆಯಲ್ಲಿ ರಾಗಿ ಸಂಪೂರ್ಣವಾಗಿ ಕಟಾವಿಗೆ ಬಂದಿದ್ದು, ಫೆಂಗಲ್ ಚಂಡಮಾರುತದಿಂದ ಸಮಸ್ಯೆಯಾಗಿದೆ. ರಾಗಿ ಕಟಾವು ಮಾಡದಂತೆ ಮುನ್ನಚ್ಚರಿಕೆ ಕೊಡಲಾಗಿದೆ. ಆದರೆ, ಕಟಾವು ಅವಧಿ ಪೂರ್ಣಗೊಂಡಿದ್ದರಿಂದ ರೈತರು ಈಗಾಗಲೇ ಕಟಾವು ಆರಂಭಿಸಿದ್ದಾರೆ. ಬೇಗ ಮಳೆ ನಿಂತರೆ ಬೆಳೆ ಕೈ ಸೇರಲಿದೆ. ಇಲಾಖೆಯಿಂದ ರೈತರಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದೇವೆ.

- ಅಂಬಿಕಾ, ಜಂಟಿ ಕೃಷಿ ನಿರ್ದೇಶಕರು, ರಾಮನಗರ

ಬಾಕ್ಸ್ ..............

ರಾಮನಗರ ಜಿಲ್ಲೆಯಲ್ಲಿ ಭತ್ತ ಬೆಳೆ ವಿವರ (ಹೆಕ್ಟೇರ್‌ಗಳಲ್ಲಿ)

ತಾಲೂಕುಗುರಿಸಾಧನೆ

ರಾಮನಗರ480380

ಚನ್ನಪಟ್ಟಣ1,4001,134

ಕನಕಪುರ1,0681,037

ಹಾರೋಹಳ್ಳಿ582581

ಮಾಗಡಿ25055

----------------------------------------------

ಒಟ್ಟು3,7803,187

---------------------------------------------

ಬಾಕ್ಸ್ ................

ರಾಮನಗರ ಜಿಲ್ಲೆಯಲ್ಲಿ ರಾಗಿ ಬೆಳೆ ವಿವರ (ಹೆಕ್ಟೇರ್‌ಗಳಲ್ಲಿ)

ತಾಲೂಕುಗುರಿಸಾಧನೆ

ರಾಮನಗರ7,0006,460

ಚನ್ನಪಟ್ಟಣ7,6004,788

ಕನಕಪುರ17,94817,785

ಹಾರೋಹಳ್ಳಿ7,4027,580

ಮಾಗಡಿ31,80033,500

-------------------------------------------------

ಒಟ್ಟು71,75070,113

-------------------------------------------------

2ಕೆಆರ್ ಎಂಎನ್ 4.ಜೆಪಿಜಿ

ಮಳೆಗೆ ಹಾನಿಯಾಗಿರುವ ಭತ್ತ ಮತ್ತು ರಾಗಿ ಫಸಲು

--------------------------------------------------