ಸದಾ ನೆನಪಿನಲ್ಲಿರಲು ಪರಿಣಾಮಕಾರಿ ಬೋಧನೆ ಮುಖ್ಯ: ಅಸುಂಡಿ

| Published : Nov 07 2024, 12:32 AM IST

ಸಾರಾಂಶ

ಶಿಕ್ಷಕರು ಮಕ್ಕಳಿಗೆ ಪಾಠ ಬೋಧನೆ ಒತ್ತಡದಲ್ಲಿಯೂ ಸಹ ಇನ್ನು ಹೆಚ್ಚಿನ ಪ್ರಾವೀಣ್ಯತೆ ಹೊಂದಲು ತರಬೇತಿ ಕಾರ್ಯಾಗಾರಗಳಲ್ಲಿ ತೊಡಗಬೇಕು

ರೋಣ: ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಬೋಧಿಸುವ ವಿಷಯ ಪರಿಣಾಮಕಾರಿಯಾಗುವುದು ಅತಿ ಮುಖ್ಯವಾಗಿದೆ. ಅಂದಾಗ ಮಕ್ಕಳ‌ ಸ್ಮೃತಿ ಪಟಲದಲ್ಲಿ ಬೋಧಿಸಿದ ವಿಷಯ ಸದಾ ಉಳಿಯುತ್ತದೆ. ಈ ದಿಶೆಯಲ್ಲಿ ಶಿಕ್ಷಕರ ಗಮನ ಹರಿಸಬೇಕು ಎಂದು ಜಮಖಂಡಿ ಡಯಟ್ ಪ್ರಮುಖ ವಾಚಕ ಡಿ.ಐ. ಅಸುಂಡಿ ಹೇಳಿದರು.ಅವರು ಸೋಮವಾರ ಪಟ್ಟಣದ ಅಂಜುಮನ್ ಇಸ್ಲಾಂ‌ ಕಮೀಟಿಯ ಅಂಜುಮನ್ ಪ್ರೌಢ ಶಾಲೆಯಲ್ಲಿ 2024-25 ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳು ಸ್ಪರ್ಧೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಮಕ್ಕಳಿಗೆ ಪಾಠ ಬೋಧನೆ ಒತ್ತಡದಲ್ಲಿಯೂ ಸಹ ಇನ್ನು ಹೆಚ್ಚಿನ ಪ್ರಾವೀಣ್ಯತೆ ಹೊಂದಲು ತರಬೇತಿ ಕಾರ್ಯಾಗಾರಗಳಲ್ಲಿ ತೊಡಗಬೇಕು. ಒಂದು ದಿನ ತಮ್ಮ ಶಿಕ್ಷಣದೊಂದಿಗೆ ಮನರಂಜನೆ ವಿಷಯದಲ್ಲಿಯೇ ಇದು ಪುನರ್ ಮನನ ವಿಷಯವಾಗಿರಲು ಇದೊಂದು ಅವಕಾಶದಂತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕ ಸಿ.ಕೆ. ಕೇಸರಿ, ಎಸ್. ಜಿ. ದಾನಪ್ಪಗೌಡ್ರ, ಶಿಕ್ಷಕಿ ಬಿ. ಎನ್. ಕ್ಯಾತನಗೌಡ, ಎಫ್.ಎನ್.ದೊಡ್ಡಮನಿ, ಸಮನ್ವಧಿಕಾರಿ ಎಂ.ಎ.ಪಣಿಬಂಧ, ಬಿಆರ್ ಪಿ ಈರಣ್ಣ ಮಾದರ,‌ ವಿ.ಎಂ. ಕಪ್ಪಲಿ, ಆರ್.ಎಸ್.ನರೇಗಲ್ಲ ಸೇರಿದಂತೆ ವಿವಿಧ ಸಿಆರ್‌ಪಿ ಬಂಧುಗಳು ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು. ಎಸ್. ಆರ್.ಮೂಲಿಮನಿ ನಿರೂಪಿಸಿ, ವಂದಿಸಿದರು.