ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಪ್ರಯತ್ನ : ಲಲಿತಾ ಅನಪುರ

| Published : Nov 16 2024, 12:32 AM IST

ಸಾರಾಂಶ

ಯಾದಗಿರಿ: ಇಲ್ಲಿನ ನಗರಸಭೆಯಲ್ಲಿ ಶಶಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ನೇತೃತ್ವದ ಸದಸ್ಯರು, ಅಧಿಕಾರಿಗಳ ತಂಡ ಮತ್ತು ಟ್ರಸ್ಟ್ ನ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ್ ಅವರೊಂದಿಗೆ ಪರಿಸರ ಸ್ನೇಹಿ ಕೈಚೀಲ ವಿತರಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಯಾದಗಿರಿ: ಇಲ್ಲಿನ ನಗರಸಭೆಯಲ್ಲಿ ಶಶಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ನೇತೃತ್ವದ ಸದಸ್ಯರು, ಅಧಿಕಾರಿಗಳ ತಂಡ ಮತ್ತು ಟ್ರಸ್ಟ್ ನ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ್ ಅವರೊಂದಿಗೆ ಪರಿಸರ ಸ್ನೇಹಿ ಕೈಚೀಲ ವಿತರಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು, ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಅತ್ಯಂತ ಬಲಿಷ್ಠ ವಿಷಕಾರಕ ವಸ್ತುಗಳಿಂದ ತಯಾರಿಸುವ ಮೂಲಕ ಜನರ ಉಪಯೋಗಕ್ಕೆ ಮಾರುಕಟ್ಟೆ ಲಭ್ಯವಿರಿಸಲಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ನಗರಸಭೆ ಪ್ರಯತ್ನ ಮಾಡುತ್ತಲೇ ಇದೆ. ಆದರೆ, ಇದು ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ವಿಷಾದಿಸಿದರು.ಈ ನಿಟ್ಟಿನಲ್ಲಿ ಸದಾ ಸಮಾಜಮುಖಿ ಕೆಲಸ ಮಾಡುತ್ತಿರುವ ನಗರದ ಶಿರಗೋಳ್ ತಮ್ಮ ಟ್ರಸ್ಟ್ ಮೂಲಕ ಜನರ ಉಪಯೋಗಕ್ಕಾಗಿ ಪ್ಲಾಸ್ಟಿಕ್ ರಹಿತ ಕೈಚೀಲಗಳನ್ನು ನಗರಸಭೆ ಮೂಲಕ ಜನರಿಗೆ ತಲುಪಿಸುವ ಮೂಲಕ ಒಂದು ಉತ್ತಮ ಕೆಲಸಕ್ಕೆ ನಮ್ಮೊಂದಿಗೆ ಕೈಜೋಡಿಸಿದ್ದು, ಸಂತಸವಾಗಿದೆ ಎಂದರು.ರಾಜ್ಯ ಸರ್ಕಾರವು 2016 ಅ.25ರಂದು ಪ್ಲಾಸ್ಟಿಕ್ ಬಳಕೆ ತಯಾರಿಕೆ, ಮಾರಾಟ ಸಂಪೂರ್ಣ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವ್ಯಾಪಾರಿಗಳು ಇದನ್ನು ಅರಿತುಕೊಂಡು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ಬಿಟ್ಟು ಬೇರೆ ತರಹದ ಕೈಚೀಲ ಬಳಕೆ ಮಾಡಿ ಕಾನೂನು ನಿಯಮ ಪಾಲಿಸಬೇಕು ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಶಿ ಸೂಪರ್‌ ಬಜಾರ್‌ ಹಾಗೂ ಶಶಿ ಚಾರಿಟೇಬಲ್‌ ಟ್ರಸ್ಟ್‌ ಮುಖ್ಯಸ್ಥ ಮಲ್ಲಿಕಾರ್ಜುನ ಶಿರಗೋಳ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಈ ಬಗ್ಗೆ ಅಭಿಯಾನ ಶುರು ಮಾಡಿದಾಗಿನಿಂದ ತಮ್ಮ ವ್ಯಾಪಾರ ವಹಿವಾಟಿನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗಿದೆ. ನಾವು ಈ ಸಲ 1000 ಪರಿಸರ ಸ್ನೇಹಿ ಕೈಚೀಲ ವಿತರಿಸಲಿದ್ದೇವೆ. ಇಂದು ಸಾಂಕೇತಿಕವಾಗಿ ಇಲ್ಲಿಗೆ ಬಂದವರಿಗೆ ಇದನ್ನು ನೀಡಲಾಗಿದೆ. ಇದಕ್ಕೆ ಜನರ ಸಹಕಾರವು ಬಹಳ ಮುಖ್ಯ ಎಂದರು.ನಗರಸಭೆ ಪೌರಾಯುಕ್ತ ರಜನಿಕಾಂತ ಶೃಂಗೇರಿ ಮಾತನಾಡಿ, ನಗರಸಭೆ ಈ ವಿನೂತನ ಕೆಲಸಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಮಾರಬಾರದು ಮತ್ತು ಬಳಕೆಗೆ ನೀಡಬಾರದು ಎಂದರು.ನಗರಸಭೆ ಉಪಾಧ್ಯಕ್ಷೆ ರುಕಿಯಾ ಬೇಗಂ, ಸದಸ್ಯರಾದ ಮಂಜುನಾಥ ದಾಸನಕೇರಿ, ಚನ್ನಕೇಶವ, ಲಿಂಗಾರಡ್ಡಿ, ವಿರುಪಾಕ್ಷಿ ಸಂತೋಷ, ಮಾಳಪ್ಪ. ನಗರಸಭೆ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.

ಸ್ಥಳದಲ್ಲಿಯೇ ಸುಮಾರು 250 ಪರಿಸರ ಕೈಚೀಲ ವಿತರಿಸಲಾಯಿತು.