ಬೀದರ್ ಮಾದರಿ ಜಿಲ್ಲಾ ಪಂಚಾಯತ್‌ ಮಾಡಲು ಶ್ರಮಿಸಬೇಕು

| Published : Aug 16 2024, 12:48 AM IST

ಸಾರಾಂಶ

Efforts should be made to make Bidar a model Zilla Panchayat

-ಬೀದರ್ ಜಿ.ಪಂ.ಯಲ್ಲಿ ಸ್ವಾತಂತ್ರ್ಯೋ ತ್ಸವದ ಧ್ವಜಾರೋಹಣದಲ್ಲಿ ಜಿ.ಪಂ ಸಿಇಓ ಡಾ.ಗಿರೀಶ ಬದೋಲೆ

-----

ಕನ್ನಡಪ್ರಭ ವಾರ್ತೆ ಬೀದರ್

ಗ್ರಾಮ ಪಂಚಾಯಿತಿ ಪಿಡಿಒಗಳಿಂದ ಹಿಡಿದು ಜಿ.ಪಂ ಸಿಇಓವರೆಗೆ ಎಲ್ಲರೂ ತಂಡದ ಸ್ಫೂರ್ತಿಯಲ್ಲಿ ಕೆಲಸ ಮಾಡಿ, ಬೀದರ್ ಜಿಲ್ಲಾ ಪಂಚಾಯತಿಯನ್ನು ರಾಜ್ಯದ ಮಾದರಿ ಜಿಲ್ಲೆಗಳಲ್ಲಿ ಒಂದನ್ನಾಗಿ ಮಾಡೋಣ. ಈ ದಿಸೆಯಲ್ಲಿ ಪ್ರತಿಜ್ಞಾ ಪೂರ್ವಕವಾಗಿ ಕೆಲಸ ಮಾಡಬೇಕಿದೆ ಎಂದು ಜಿ.ಪಂ ಸಿಇಓ ಗಿರೀಶ ಬದೋಲೆ ಹೇಳಿದರು.

ಅವರು ಜಿ.ಪಂ ಕಚೇರಿಯಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೆರಿಸಿ ಮಾತನಾಡಿ, ನಮ್ಮ ಪೂರ್ವಜರ ತ್ಯಾಗ ಬಲಿದಾನದಿಂದ ಬಂದಿರುವ ಸ್ವಾತಂತ್ರ್ಯತವನ್ನು ನಾವು ಶ್ರದ್ಧೆ ಮತ್ತು ಸಮರ್ಪಣಾಭಾವದಿಂದ ಉಳಿಸಿಕೊಳ್ಳಬೇಕಿದೆ. ನಮ್ಮ‌ಕರ್ತವ್ಯವನ್ನು ಪ್ರಾಮಾಣಿಕತೆ ನಿಷ್ಠೆ, ಶ್ರದ್ಧಾಪೂರ್ವಕವಾಗಿ ನಿರ್ವಹಿಸುವ ಮೂಲಕ ಸ್ವಾತಂತ್ರ್ಯ. ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು ಎಂದರು.

ಬೀದರ್ ಜಿ.ಪಂ. ಯು ರಾಜ್ಯದ ಪ್ರಗತಿಪರ ಜಿಲ್ಲೆಗಳಲ್ಲಿ ಒಂದಾಗಿದ್ದು, ಮನರೆಗಾ ಯೋಜನೆ ಸೇರಿದಂತೆ ಮಹತ್ವದ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ. ತೆರಿಗೆ ವಸೂಲಾತಿಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಜವಾಬ್ದಾರಿಯ ಅರಿವು ಮೂಡಿಸಿದ್ದರಿಂದ ಗ್ರಾಮ ಪಂಚಾಯತಿಗಳು ಆಸಕ್ತಿಯಿಂದ ತೆರಿಗೆ ವಸೂಲು ಮಾಡುತ್ತಿವೆ. ಈ ವರ್ಷ ಜಲಜೀವನ್ ಮಿಶನ್ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸೋಣ ಎಂದರು.

ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಮುಖ್ಯಯೋಜನಾಧಿಕಾರಿ ಕಿಶೋರಕುಮಾರ ದುಬೆ, ಮುಖ್ಯಲೆಕ್ಕಾಧಿಕಾರಿ ಶ್ರೀಕಾಂತ, ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಸಹಾಯಕ ಕಾರ್ಯದರ್ಶಿ ರಮೇಶನಾಥೆ, ಸಹಾಯಕ ಕಾರ್ಯದರ್ಶಿ ಜಯಪ್ರಕಾಶ ಚವ್ಹಾಣ, ಎಪಿಒ ಶಿವಕುಮಾರ ಯಲಾಲ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಮಲಿಂಗ ಬಿರಾದರ, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶಿವಾಜಿ ದೊಣ್ಣೆ, ಒಂಬಡ್ಸಮನ್ ಸೂರ್ಯಕಾಂತ ಶಂಕರಗೊಂಡ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಬಸವಂತರಾಯ ಜಿಡ್ಡೆ ಮತ್ತು ಜಿಲ್ಲಾ ಪಂಚಾಯತಿಯ ಎಲ್ಲಾ ಸಿಬ್ಬಂದಿ ಹಾಜರಿದ್ದರು.

--ಫೋಟೊ: ಚಿತ್ರ 15ಬಿಡಿಆರ್57

ಬೀದರ ಜಿಲ್ಲಾ ಪಂಚಾಯತಿಯಲ್ಲಿ ಸ್ವಾತಂತ್ರ್ಯೋ ತ್ಸವದ ಧ್ವಜಾರೋಹಣ ನೆರವೆರಿಸಿ ಜಿ.ಪಂ ಸಿಇಓ ಡಾ.ಗಿರೀಶ ಬದೋಲೆ ಮಾತನಾಡಿದರು.

--