ಸಾರಾಂಶ
ಇತ್ತೀಚಿನ ಕೆಲ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ದೋಷಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದನ್ನು ಮನಗೊಂಡ ನಮ್ಮ ಸಂಸ್ಥೆಗಳು ದೋಷಯುತ ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆಂದು ತೀರ್ಮಾನಿಸಿ ಹಲವು ತಾಲೂಕುಗಳಲ್ಲಿ ಕಣ್ಣಿನ ತಪಾಸಣೆ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಲಯನ್ ಇಂಟರ್ ನ್ಯಾಷನಲ್ ಸಂಸ್ಥೆಯ ಲಯನ್ ಡಾ. ಅನಿತಾ ಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಇತ್ತೀಚಿನ ಕೆಲ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ದೋಷಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದನ್ನು ಮನಗೊಂಡ ನಮ್ಮ ಸಂಸ್ಥೆಗಳು ದೋಷಯುತ ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆಂದು ತೀರ್ಮಾನಿಸಿ ಹಲವು ತಾಲೂಕುಗಳಲ್ಲಿ ಕಣ್ಣಿನ ತಪಾಸಣೆ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಲಯನ್ ಇಂಟರ್ ನ್ಯಾಷನಲ್ ಸಂಸ್ಥೆಯ ಲಯನ್ ಡಾ. ಅನಿತಾ ಪ್ರಸಾದ್ ತಿಳಿಸಿದರು.ನಗರದ ಶ್ರೀ ವಿದ್ಯಾಪೀಠ ಮತ್ತು ಎನ್‌ಎಸ್‌ಎಮ್ ಬಾಲಿಕಾ ಪ್ರೌಢಶಾಲೆಯಲಿ ಲಯನ್ ಇಂಟರ್ ನ್ಯಾಷನಲ್ ಹಾಗೂ ಧ್ವನಿ ದೃಷ್ಠಿ ಫೌಂಡೇಶನ್ ಸಂಸ್ಥೆ ಮತ್ತು ಅಲೋಕ ವಿಷನ್ ವತಿಯಿಂದ ತಾಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ದೋಷಯುಕ್ತ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಕಣ್ಣಿನ ಹಲವು ಸಮಸ್ಯೆಗಳಿಂದ ತೊಂದರೆ ಪಡುತ್ತಿದ್ದು, ಸಂಸ್ಥೆಗಳು ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ದೋಷಯುಕ್ತ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ ಮಾಡುತ್ತಿದ್ದೇವೆ. ತಿಪಟೂರು ತಾಲೂಕಿನ ೩೦೧ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೧೨,೩೦೭ ವಿದ್ಯಾರ್ಥಿಗಳಿಗೆ ಉಚಿತ ತಪಾಸಣೆ ಮಾಡಿ ಕಣ್ಣಿನ ದೃಷ್ಟಿ ಪರೀಕ್ಷೆ ನಡೆಸಿ ದೃಷ್ಟಿ ದೋಷ ಕಂಡುಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ೬೪೨ ಕನ್ನಡಕಗಳನ್ನು ವಿತರಿಸಲಾಗಿದೆ. ಈ ಕನ್ನಡಕಗಳನ್ನು ಪಡೆದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತುಂಬಾ ಸಹಕಾರಿಯಾಗುತ್ತದೆ ಎಂದರು. ಧ್ವನಿ ದೃಷ್ಠಿ ಸಂಸ್ಥೆಯ ಡಾ. ವಿನೀತ್ ಮಾತನಾಡಿ ನಮ್ಮ ನೇತ್ರ ತಪಾಸಣಾ ತಂಡದ ಕಾರ್ಯ ಮೆಚ್ಚುವಂತದ್ದು. ದೂರದ ಊರಿಂದ ಬಂದು ಯಾವುದೋ ಹಳ್ಳಿಗಳ ಶಾಲೆಗೆ ತೆರಳಿ ಆ ಮಕ್ಕಳೊಂದಿಗೆ ಮಕ್ಕಳಾಗಿ ಅವರುಗಳ ಕಣ್ಣು ತಪಾಸಣೆ ಮಾಡಿದ್ದಾರೆ. ನಾನು ಇವರೆಲ್ಲರ ಮುಖ್ಯಸ್ಥನಾದರೂ ನನ್ನ ಕೆಲಸ ಕೇವಲ ಮಾರ್ಗದರ್ಶನ ಮಾಡುವುದು ಎಂದು ಮಕ್ಕಳ ತಪಾಸಣೆ ಮಾಡಿ ಕನ್ನಡಕ ನೀಡಿ ಕಪ್ಪು ಹಲಗೆಯ ಮೇಲಿರುವ ಚಿತ್ರಗಳನ್ನು ಗುರುತಿಸುವಂತೆ ಮಾರ್ಗದರ್ಶಿಸಿ ತಪಾಸಣೆ ಮಾಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಲಯನ್ ಮೋಹನ್‌ಕುಮಾರ್, ಚೇರ್ಮನ್ ಸುರೇಶ್‌ರಾಮು, ಡಾ.ಜಿ.ಮೋಹನ್, ಕೆ. ಈಶ್ವರನ್, ಎಸ್.ರಾಜೇಶ್, ಸುಮತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಡಾ ಶೈಲಾ ಸತೀಶ್‌ಕುಮಾರ್, ಬಿಆರ್‌ಸಿ ಉಮೇಶ್‌ಗೌಡ, ಬಿಐಇಆರ್ ಮೋಹನ್ ಸೇರಿದಂತೆ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರು, ಬಿಆರ್‌ಪಿ, ಎಲ್ಲಾ ಸಿಆರ್‌ಪಿ ಮತ್ತು ವಿದ್ಯಾಸಂಸ್ಥೆ ಮುಖ್ಯಸ್ಥರು ಹಾಗೂ ನೌಕರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.