ಕನ್ನಡಪ್ರಭ ವಾರ್ತೆ ಅಥಣಿ
ಕೆಎಸ್‌ಆರ್‌ಟಿಸಿಯಿಂದ ರಾಜ್ಯದಲ್ಲಿ ಹೊಸ 70 ಪಲ್ಲಕ್ಕಿ ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿಲಾಗಿದ್ದು, ಅಥಣಿ ಘಟಕಕ್ಕೆ 2 ಬಸ್‌ಗಳಿಗೆ ಮಂಜೂರಾತಿ ಪಡೆದುಕೊಳ್ಳಲಾಗಿದೆ. ಅಥಣಿ ಮತಕ್ಷೇತ್ರದ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ಪಟ್ಟಣದ ಸಾರಿಗೆ ಘಟಕದಲ್ಲಿ ನೂತನ ಪಲ್ಲಕ್ಕಿ ಸ್ಲಿಪರ್ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು, ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಹೊಸ ಬಸ್‌ಗಳಿಗೆ ಚಾಲನೆ ನೀಡಿದ್ದಾರೆ. ಅಥಣಿ ಮತಕ್ಷೇತ್ರಕ್ಕೂ 2 ಪಲ್ಲಕ್ಕಿ ಸ್ಲೀಪರ್ ಕೋಚ್ ಬಸ್‌ಗಳನ್ನು, ಬಿಎಸ್ 6 ಮಾದರಿಯ 36 ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಅಥಣಿ ಘಟಕದ ಸಾರಿಗೆ ಸಂಚಾರವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಈಗಾಗಲೇ ಕೊಕಟನೂರು ಗ್ರಾಮದ ಪಶು ವೈದ್ಯಕೀಯ ಮಹಾವಿದ್ಯಾಲಯ ಆರಂಭಗೊಂಡಿದ್ದು, ಅದರ ಮುಂಭಾಗದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಆಗುವುದರಿಂದ ಈ ಭಾಗದ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು, ವೈಜ್ಞಾನಿಕವಾಗಿ ಕೃಷಿ ಮತ್ತು ಪಶು ಸಂಗೋಪನೆ ಮಾಡಲು ಸಹಕಾರಿಯಾಗುತ್ತದೆ. ಅಥಣಿ ಪಟ್ಟಣದಲ್ಲಿ ಕೇಂದ್ರೀಯ ಮಹಾವಿದ್ಯಾಲಯದ ಪ್ರವೇಶಾತಿಗಳು ಆರಂಭವಾಗಿದ್ದು, ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದವರು ಈ ಗುಣಾತ್ಮಕ ಶಿಕ್ಷಣದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕಾ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಚಿಕ್ಕೋಡಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎಂ.ಆರ್.ಮುಂಜಿ, ವಿಭಾಗಿಯ ಅಭಿಯಂತರ ಎ.ಎಸ್.ಅಡಹಳ್ಳಿಮಠ, ಅಥಣಿ ಘಟಕ ವ್ಯವಸ್ಥಾಪಕ ಎನ್.ಎಂ.ಕೇರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.------
ಕೋಟ್‌ತಾಲೂಕಿನ ಪೂರ್ವ ಭಾಗದ ಮಹತ್ವಾಕಾಂಕ್ಷಿ ಕೊಟ್ಟಲಗಿ ಅಮ್ಮಾಜೇಶ್ವರಿ ನೀರಾವರಿ ಯೋಜನೆ ಜೂನ್ ವೇಳೆಗೆ ಪೂರ್ಣಗೊಳ್ಳಲಿದ್ದು, ಬರುವ ಜೂನ್ ಅಥವಾ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ವಿವಿಧ ಸಚಿವರನ್ನು ಕರೆಸಿ ಈ ನೀರಾವರಿ ಯೋಜನೆಯನ್ನು ಲೋಕಾರ್ಪಣೆಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಬಜೆಟ್ ನಲ್ಲಿ ₹ 540 ಕೋಟಿ ಮಂಜೂರು ಮಾಡಿರುವ ಕೃಷಿ ಮಹಾವಿದ್ಯಾಲಯದ ಶಂಕುಸ್ಥಾಪನೆ ಸಮಾರಂಭವನ್ನು ನೆರವೇರಿಸಲಾಗುವುದು.ಲಕ್ಷ್ಮಣ ಸವದಿ, ಶಾಸಕರು----------ಕೋಟ್‌ಅಥಣಿ ಸಾರಿಗೆ ಘಟಕಕ್ಕೆ ಶಾಸಕರ ಪ್ರಯತ್ನದಿಂದ ಎರಡು ಪಲ್ಲಕ್ಕಿ ಸ್ಲೀಪರ್ ಕೋಚ್ ಮತ್ತು 36 ಹೊಸ ಮಾದರಿಯ ಬಸ್ ಮಂಜೂರಾಗಿವೆ. ಪಲ್ಲಕ್ಕಿ ಬಸ್ ಸೇವೆಯನ್ನು ಪ್ರತಿದಿನ ಸಂಜೆ 6.30ಕ್ಕೆ ಅಥಣಿಯಿಂದ ಐನಾಪುರ, ಚಿಕ್ಕೋಡಿ ಮಾರ್ಗವಾಗಿ ಬೆಂಗಳೂರಿಗೆ ಮತ್ತು ಪ್ರತಿದಿನ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಬೆಳಗಾವಿ, ಚಿಕ್ಕೋಡಿ ಮಾರ್ಗವಾಗಿ ಅಥಣಿಗೆ ಸಂಚರಿಸಲಿವೆ. ಪ್ರಯಾಣಿಕರಿಗೆ ಆನ್‌ಲೈನ್ ಬುಕ್ಕಿಂಗ್ ಸೇವೆ ಆರಂಭಿಸಲಾಗಿದ್ದು, ಅಥಣಿ ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು.ಎನ್.ಎಂ.ಕೇರಿ, ಘಟಕ ವ್ಯವಸ್ಥಾಪಕರು,ಅಥಣಿ.