ಸಾರಾಂಶ
ಹೊರಗುತ್ತಿಗೆ ಆಧಾರದ ಮೇಲೆ ಪುರಸಭಾ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಹೊರಗುತ್ತಿಗೆ ಆಧಾರದ ಮೇಲೆ ಪುರಸಭಾ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.ಪೌರಾಡಳಿತ ನಿರ್ದೇಶನಾಲಯ,ಪುರಸಭೆ ಮಧುಗಿರಿ ಹಾಗೂ ಪೌರ ಸೇವಾ ನೌಕರರ ಸೇವಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಸೇವೆ ಅನನ್ಯ. ಅವರ ಜೀವನ ಗುಣಮಟ್ಟದಿಂದ ಕೂಡಿರಬೇಕು. ಹೊರಗತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸಲು ಪ್ರಯತ್ನಿಸಲಾಗುವುದು. ಕಾರ್ಮಿಕರು ಜನ ಮೆಚ್ಚುವ ರೀತಿ ಕೆಲಸ ಮಾಡಬೇಕು. ಆಗಾಗ್ಗೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು ಎಂದರು.ಎಸಿ ಗೋಟೂರು ಶಿವಪ್ಪ ಮಾತನಾಡಿ, ಪೌರ ಕಾರ್ಮಿಕರ ಸೇವಗೆ ಬೆಲೆ ಕಟ್ಟಲಾಗದು. ಸಾರ್ವಜನಿಕರು ಎಲ್ಲದಕ್ಕೂ ಕಾರ್ಮಿಕರನ್ನು ಅವಲಂಬಿಸದೆ ಅವರ ಜೊತೆ ಕೈ ಜೋಡಿಸಿ ಪುರಸಭೆ ವಾಹನ ತಮ್ಮ ಮನೆ ಬಾಗಿಲಿಗೆ ಬಂದಾಗ ಹಸಿ ಕಸ ಒಣ ಕಸ ವಿಂಗಡಿಸಿ ನೀಡಬೇಕು ಎಂದರು.
ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, ಪೌರ ಕಾರ್ಮಿಕರು ಪ್ರತಿ ದಿನ ಬೆಳ್ಳಂಬೆಳಿಗ್ಗೆ ಎದ್ದು ನಗರವನ್ನು ಸುಂದರವಾಗಿ ಸ್ವಚ್ಛಗೊಳಿಸುತ್ತಿದ್ದು, ಆರೋಗ್ಯವೇ ಭಾಗ್ಯ ಅದನ್ನು ತಾವುಗಳು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸುರಕ್ಷಿತ ಕ್ರಮ ಅನುಸರಿಸಿ ಸ್ವಚ್ಛಗೊಳಿಸಿ ಎಂದರು.ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್ ಮಾತನಾಡಿ, ಪಟ್ಟಣದಲ್ಲಿ ಪೌರ ಕಾರ್ಮಿಕರ ಕೊರತೆಯಿದ್ದು, ಮಧುಗಿರಿ ಪಟ್ಟಣ ಬೃಹದಾಕರವಾಗಿ ಬೆಳೆಯುತ್ತಿರುವ ಕಾರಣ ಶಾಸಕ ಕೆ.ಎನ್.ರಾಜಣ್ಣರವರು ಕಾರ್ಮಿಕರ ಹುದ್ದೆಗಳನ್ನು ಹೆಚ್ಚಿಸಿ ನಗರ ಸ್ವಚ್ಛತೆಗೆ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಸುಜಾತ ಶಂಕರನಾರಾಯಣ್, ಮುಖ್ಯಾಧಿಕಾರಿ ಎಸ್.ಸುರೇಶ್, ಮಾಜಿ ಅಧ್ಯಕ್ಷ ತಿಮ್ಮರಾಯಪ್ಪ, ಕೆ.ಪ್ರಕಾಶ್,ಎನ್.ಗಂಗಣ್ಣ, ತಾಪಂ ಇಒ ಲಕ್ಷ್ಮಣ್, ತಹಸೀಲ್ದಾರ್ ಶ್ರೀನಿವಾಸ್,ಪು ರಸಬೆ ಸದಸ್ಯರಾದ ಮಂಜುನಾಥ್ಆ ಚಾರ್, ಅಲೀಮ್, ಎಂ.ಶ್ರೀಧರ, ರಾಧಿಕ, ಹಸೀನಾಬಾನು, ಶೋಭಾರಾಣಿ, ನಾಗಲತಾ, ಸಾಧಿಕ್, ಗಿರಿಜಾ, ಜಯಲಕ್ಷ್ಮೀ, ಜ್ಯೋತಿಲಕ್ಷ್ಮೀ, ನಾಮಿನಿ ಸದಸ್ಯರಾದ ಸುಧಾಕರ್ (ಗುಂಡಣ್ಣ,) ವೆಂಕಟೇಶ್ ಮೂರ್ತಿ, ಚಂದ್ರಮ್ಮ, ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ,ಮುಖಂಡರಾದ ತುಂಗೋಟಿ ರಾಮಣ್ಣ, ಜಿ.ನರಸಿಂಹಯ್ಯ, .ಬಾಲಾಜಿ,ಎಂ.ಎಸ್.ಶಂಕರನಾರಾಯಣ್ ಇತರರಿದ್ದರು.