ಕಳಸಕೊಪ್ಪ ಕೆರೆ ಪ್ರವಾಸಿ ತಾಣವಾಗಿಸಲು ಪ್ರಯತ್ನ

| Published : Oct 23 2024, 12:45 AM IST / Updated: Oct 23 2024, 12:46 AM IST

ಕಳಸಕೊಪ್ಪ ಕೆರೆ ಪ್ರವಾಸಿ ತಾಣವಾಗಿಸಲು ಪ್ರಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಕಲಾದಗಿ ಕಳಸಕೊಪ್ಪ ಕೆರೆಯ ಪರಿಸರ ಸುಂದರವಾಗಿದ್ದು, ಪ್ರವಾಸಿ ತಾಣ ಮಾಡಲು ಯೋಗ್ಯ ಸ್ಥಳವಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರ ಜೊತೆ ಮಾತನಾಡಿದ್ದೇನೆ. ಅವರು ಸಹಿತ ಈ ವಿಷಯದ ಕುರಿತು ಸಕರಾತ್ಮವಾಗಿ ಸ್ಪಂದನೆ ನೀಡಿದ್ದಾರೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಕಳಸಕೊಪ್ಪ ಕೆರೆಯ ಪರಿಸರ ಸುಂದರವಾಗಿದ್ದು, ಪ್ರವಾಸಿ ತಾಣ ಮಾಡಲು ಯೋಗ್ಯ ಸ್ಥಳವಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರ ಜೊತೆ ಮಾತನಾಡಿದ್ದೇನೆ. ಅವರು ಸಹಿತ ಈ ವಿಷಯದ ಕುರಿತು ಸಕರಾತ್ಮವಾಗಿ ಸ್ಪಂದನೆ ನೀಡಿದ್ದಾರೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ ವಿಜಯಪುರ, ಕಳಸಕೊಪ್ಪ ಕೆರೆಗೆ ಬಾಗಿನ ಅರ್ಪಣೆ ಮತ್ತು ಗಂಗಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳಸಕೊಪ್ಪ ಕೆರೆ ತುಂಬುವುದರಿಂದ ಸುತ್ತ-ಮುತ್ತಲಿನ 15 ಕಿಲೋ ಮೀಟರ್ ಪ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಮೇಲ್ಮಕ್ಕೇರಿದೆ. ನೀರು ಜೀವಜಲ, ನಮ್ಮೆಲ್ಲರ ಪ್ರಾಣ ರಕ್ಷಣೆ ಮಾಡುತ್ತದೆ ಎಂದರು.ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾಲುವೆಗಳಿಗೆ ಯಾರೂ ಮೋಟಾರ್ ಬಳಸಿ ನೀರು ಉಪಯೋಗ ಮಾಡಬಾರದು. ಸ್ವಯಂ ಶಿಸ್ತು, ಸಾರ್ವಜನಿಕ ಕಾಳಜಿ, ನೀರು ಎಲ್ಲರದೂ ಎನ್ನುವ ಭಾವ ಇರಬೇಕು. ಈ ಕೆರೆಯಿಂದ ನೀರಾವರಿಗೆ ಒಳಪಡುವ 1143 ಹೆಕ್ಟೇರ್ ಪ್ರದೇಶದಲ್ಲಿ 284 ಹೆಕ್ಟೇರ್ ಪ್ರದೇಶಕ್ಕೆ ಈಗಾಗಲೇ ನೀರು ತಲುಪುತ್ತಿದೆ. ಉಳಿದ ಪ್ರದೇಶಕ್ಕೂ ನೀರು ಒದಗಿಸುವ ಏನೇನು ಅಗತ್ಯ ಕ್ರಮ ಆಗಬೇಕು ಅದನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ತಾಪಂ ಮಾಜಿ ಉಪಾದ್ಯಕ್ಷ ಸಂಗಣ್ಣ ಮುಧೋಳ ಮಾತನಾಡಿ, ರೈತರು ಒಗ್ಗಟ್ಟಾಗಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೆರೆಯ ನೀರಿನ ಸಲುವಾಗಿ ರಾಜಕೀಯ ಮಾಡಬಾರದು. ನೀರಿನ ವಿಷಯದಲ್ಲಿ ರೈತರು ರಾಜಕೀಯ ಮಾಡಿದಲ್ಲಿ ಹಾಳಾಗಿ ಹೋಗುವುದು ನಿಶ್ಚಿತ ಎಂದು ತಿಳಿಸಿದರು.ಕೆಪಿಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗಾರ ಮಾತನಾಡಿದರು. ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಬಸವರಾಜ ಸಂಶಿ, ಸಿ.ಎಂ.ಚಿಕ್ಕೂಮಠ, ಎಸ್.ಎಚ್.ತೆಕ್ಕೆನ್ನವರ್, ಜಿಪಂ ಮಾಜಿ ಸದಸ್ಯ ಪಾಂಡು ಪೊಲೀಸ್, ಫಕೀರಪ್ಪ ಬಿಸಾಳಿ, ಫಕೀರಪ್ಪ ಮಾದರ, ಬಸುವರಾಜ ವಕೀಲ, ನಾರಾಯಣ ಹಾದಿಮನಿ, ಸಣ್ಣ ನಿರಾವರಿ ಇಲಾಖೆಯ ಎಇಇ ಪ್ರಕಾಶ್ ನಾಯಕ್, ಕೆಬಿಜೆಎನ್‌ಎಲ್ ಎಇಇ ಶರಣಪ್ಪ ಚೆಲವಾದಿ, ಇಂಜಿನಿಯರ್ ನವೀನ್ ಇನ್ನಿತರರು ಇದ್ದರು.

-----------------------------------

ಬಾಕ್ಸ್‌..ಜೆ.ಟಿ.ಪಾಟೀಲ ಸಚಿವರಾಗಲಿ: ಸೌದಾಗಾರ್ ಆಶಯಮುಂದೆ ಸಚಿವ ಸಂಪುಟ ವಿಸ್ತರಣೆಯಾದಲ್ಲಿ ಜೆ.ಟಿ.ಪಾಟೀಲರು ಸಚಿವರು ಆಗಲಿ, ಅದರಲ್ಲೂ ನೀರಾವರಿ ಮಂತ್ರಿಯಾಗಲಿ ಬರಲಿ ಎಂದು ತಾಪಂ ಮಾಜಿ ಉಪಾಧ್ಯಕ್ಷ ಹಾಗೂ ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗಾರ್ ಆಶಿಸಿದರು.

ಕೋಟ್‌..

ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾಲುವೆಗಳಿಗೆ ಯಾರೂ ಮೋಟಾರ್ ಬಳಸಿ ನೀರು ಉಪಯೋಗ ಮಾಡಬಾರದು. ಸ್ವಯಂ ಶಿಸ್ತು, ಸಾರ್ವಜನಿಕ ಕಾಳಜಿ, ನೀರು ಎಲ್ಲರದೂ ಎನ್ನುವ ಭಾವ ಇರಬೇಕು. ಈ ಕೆರೆಯಿಂದ ನೀರಾವರಿಗೆ ಒಳಪಡುವ 1143 ಹೆಕ್ಟೇರ್ ಪ್ರದೇಶದಲ್ಲಿ 284 ಹೆಕ್ಟೇರ್ ಪ್ರದೇಶಕ್ಕೆ ಈಗಾಗಲೇ ನೀರು ತಲುಪುತ್ತಿದೆ. ಉಳಿದ ಪ್ರದೇಶಕ್ಕೂ ನೀರು ಒದಗಿಸುವ ಏನೇನು ಅಗತ್ಯ ಕ್ರಮ ಆಗಬೇಕು ಅದನ್ನು ಮಾಡಲಾಗುತ್ತದೆ.

-ಜೆ.ಟಿ.ಪಾಟೀಲ, ಶಾಸಕರು.