ಸಾರಾಂಶ
ಕನ್ನಡಪ್ರಭ ವಾರ್ತೆ ಪಾಲಬಾವಿ
ಹಾಲು ಉತ್ಪಾದಕರ ಸಂಘದಿಂದ ಸಂಚಾರ ವಾಹನದ ಬೇಡಿಕೆ ಇದೆ. ಮಂಡಳಿಯವರೊಂದಿಗೆ ಚರ್ಚಿಸಿ ಶೀಘ್ರವೇ ನೆರವೇರಿಸುವ ಪ್ರಯತ್ನ ಮಾಡುತ್ತೇವೆ ಎಂದು ಬೆಳಗಾವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್.ಎನ್ ಹೇಳಿದರು.ಸಮೀಪದ ಹಂದಿಗುಂದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಸೋಮವಾರ ಜರುಗಿದ ಸನ್ 2023 -24ನೇ ಸಾಲಿನ ಹಾಲು ಉತ್ಪಾದಕರಿಗೆ ಬೋನಸ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿಯೇ ಹಂದಿಗುಂದ ಹಾಲು ಉತ್ಪಾದಕರ ಸಂಘವು ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಹಂದಿಗುಂದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ರಾಷ್ಟ್ರಮಟ್ಟದ ಪುರಸ್ಕಾರವು ಸಿಗಲಿ ಹಾರೈಸುತ್ತೇನೆ ಎಂದರು.ಹಾಲು ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ಡಾ.ವೆಂಕಟೇಶ ಜೋಶಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಘದ ಸಿಬ್ಬಂದಿ ಪ್ರಾಮಾಣಿಕತೆಯಿಂದ ಮಾಡಿದ ಸೇವೆ ಮತ್ತು ತ್ಯಾಗದಿಂದ ಸಂಘವು ಉತ್ತಮವಾಗಿ ಬೆಳೆಯಲು ಸಾಧ್ಯವಾಗಿದೆ. ಸನ್ 1986 ಫೆ.20 ರಂದು ಆರಂಭಗೊಂಡ ಸಂಘವು ದಿನಕ್ಕೆ ಅರ್ಧ ಲೀಟರ್‌ದಿಂದ ಆರಂಭಗೊಂಡ ಹಂದಿಗುಂದ ಹಾಲು ಉತ್ಪಾದಕರ ಸಂಘವು ಇಂದು ಪ್ರತಿದಿನ 3,000 ಲೀಟರ್ ಕ್ಕಿಂತಲೂ ಹಾಲು ಸಂಗ್ರವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.ಗುರುಲಿಂಗಯ್ಯ ಹಿರೇಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಂದಿಗುಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರಾಮನಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ್.ಎನ್, ಬೆಳಗಾವಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರು ಹಾಗೂ ಹಂದಿಗುಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿದರು.ಹಂದಿಗುಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪರಪ್ಪ ಭದ್ರಶಟ್ಟಿ, ಉಪಾಧ್ಯಕ್ಷ ಗಿರಿಮಲಪ್ಪ ಉಳ್ಳಾಗಡ್ಡಿ, ಧರೇಪ್ಪ ಚಿನಗುಂಡಿ, ಗೌಡಪ್ಪ ನೇಮಗೌಡ, ಸದಾಶಿವ ಸುಳ್ಳಣ್ಣವರ, ಚನ್ನಪ್ಪ ಪೂಜೇರಿ, ಬಸವರಾಜ ಖಾನಗೌಡ, ಶಿವಾನಂದ ಸಾತಪ್ಪಗೋಳ, ಫಕೀರಪ್ಪ ದೊಡಮನಿ, ಬೆಳಗಾವಿ ಹಾಲು ಒಕ್ಕೂಟದ ವಿಸ್ತೀರ್ಣ ಅಧಿಕಾರಿ ಎಂ.ಬಿ.ಹಗೆದಾಳ, ಬೆಳಗಾವಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಚಂದ್ರಶೇಖರ ಸಂಬಳ, ಒಕ್ಕೂಟದ ವಿಸ್ತೀರ್ಣಾಧಿಕಾರಿ ಸುನಿಲ ಜಿಲ್ಲೆದಾರ, ಗಜೇಂದ್ರ ಕಾಂಬಳೆ, ಮಹಾಲಕ್ಷ್ಮೀ ಕೋ ಆಫ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಶಿವಲಿಂಗಪ್ಪ ವಾಲಿ, ಬಿಸನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಗಿರೀಶ ಸುಳ್ಳನ್ನವರ, ಶಿವಲಿಂಗ ಬಾಗೇವಾಡಿ, ಸಿದ್ದಗೌಡ ಪಾಟೀಲ, ಭೀಮಶಿ ಬಿಳ್ಳೂರ, ಸಂಗಪ್ಪ ಮೇಟಿ, ರಾಮಣ್ಣ ಪಡಿ, ಮಲ್ಲಪ್ಪ ಹೊಸಪೇಟಿ, ಶ್ರೀಶೈಲ ಭದ್ರಶೆಟ್ಟಿ, ಸಿದ್ದರಾಮ ಚಿಂಚಲಿ, ಹಾಲಪ್ಪ ರಬಕವಿ, ಸಿದ್ದಪ್ಪ ಗುಗ್ಗರಿ, ದುಂಡಪ್ಪ ಹೂಬರಟ್ಟಿ, ಮಲ್ಲಪ್ಪ ಚೌಗಲಾ, ರಮೇಶ ಬೀರಡಿ, ಮಹದೇವ ನಾಯಿಕ, ಮಲ್ಲಪ್ಪ ಮಿರ್ಜಿ ಹಾಲು ಉತ್ಪಾದಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.ಆಕಳು ಹಾಲು ವಿತರಣೆ:
ಸದಾಶಿವ ಉಳ್ಳಾಗಡ್ಡಿ ಪ್ರಥಮ, ಬಸವರಾಜ ಉಳ್ಳಾಗಡ್ಡಿ ದ್ವಿತೀಯ ಹಾಗೂ ರಮೇಶ ಮಂಟೂರ ತೃತೀಯ ಸ್ಥಾನ ಪಡೆದುಕೊಂಡರು.ಎಮ್ಮೆಯ ಹಾಲು ವಿತರಣೆ:ಸಿದ್ದಪ್ಪ ಚಿಂಚಲಿ ಪ್ರಥಮ, ಶಿವಾನಂದ ಹಿಡಕಲ್ಲ ದ್ವಿತೀಯ ಹಾಗೂ ಹಸನ್ ಸಣದಿ ತೃತೀಯ ಸ್ಥಾನ ಪಡೆದುಕೊಂಡರು.ಕುಮಾರಿ ಶಿವಲೀಲಾ ಉಳ್ಳಾಗಡ್ಡಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿದರು. ಶಿಕ್ಷಕ ಭೀಮರಾವ್ ಘಂಟಿ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಿರೀಶ್ ಹಡಪದ ಪರಿಚಯಿಸಿದರು. ಸಿದ್ದು ಪಾಟೀಲ ವಂದಿಸಿದರು.