ನರಗುಂದಕ್ಕೆ ಹಿರಿಯ ಶ್ರೇಣಿಯ ನ್ಯಾಯಾಲಯ ಒದಗಿಸಲು ಪ್ರಯತ್ನ-ಮಿಠ್ಠಲಕೋಡ

| Published : Mar 12 2025, 12:49 AM IST

ನರಗುಂದಕ್ಕೆ ಹಿರಿಯ ಶ್ರೇಣಿಯ ನ್ಯಾಯಾಲಯ ಒದಗಿಸಲು ಪ್ರಯತ್ನ-ಮಿಠ್ಠಲಕೋಡ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಶ್ರೇಣಿಯ ನ್ಯಾಯಾಲಯವನ್ನು ನರಗುಂದಕ್ಕೆ ಒದಗಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನೂತನ ರಾಜ್ಯಾಧ್ಯಕ್ಷ ಎಸ್.ಎಸ್. ಮಿಠ್ಠಲಕೋಡ ಹೇಳಿದರು.

ನರಗುಂದ: ಹಿರಿಯ ಶ್ರೇಣಿಯ ನ್ಯಾಯಾಲಯವನ್ನು ನರಗುಂದಕ್ಕೆ ಒದಗಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನೂತನ ರಾಜ್ಯಾಧ್ಯಕ್ಷ ಎಸ್.ಎಸ್. ಮಿಠ್ಠಲಕೋಡ ಹೇಳಿದರು.

ಅವರು ಮಂಗಳವಾರ ಪಟ್ಟಣದ ಜೆಎಮ್ಎಫ್.ಸಿ ನ್ಯಾಯಾಲಯದಲ್ಲಿನ ನ್ಯಾಯವಾದಿಗಳ ಸಂಘದ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಿರಿಯ ನ್ಯಾಯವಾದಿಗಳಿಗೆ ಸಹಾಯಧನ ಹೆಚ್ಚಿಸುವಂತೆ ಮತ್ತು ನ್ಯಾಯವಾದಿಗಳ ಕುಂದುಕೊರತೆ ನೀಗಿಸಲು ಸಹಾಯ ಸಹಕಾರ ಮಾಡುತ್ತೇನೆ. ಈಗಿನ ಯುವ ನ್ಯಾಯವಾದಿಗಳು ಟೆಕ್ನಾಲಜಿ ಬಳಸಿಕೊಂಡು ಬೆಳೆಯಬೇಕು. ನ್ಯಾಯವಾದಿಗಳ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ಜೆಎಮ್ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಮಾತನಾಡಿ, ನೂತನ ಅಧ್ಯಕ್ಷರಿಗೆ ಶುಭಾಶಯ ಕೋರುತ್ತಾ ನ್ಯಾಯವಾದಿಗಳಗೆ ತಿಂಗಳ 2ನೇ ಶನಿವಾರ ಕೋರ್ಟ್‌ ಕಲಾಪಗಳು ಮುಗಿದ ನಂತರ ಕಾನೂನಿನ ತಿಳುವಳಿಕೆ ನೀಡಲು ಸಮಯವನ್ನು ಮೀಸಲಿಡುತ್ತೇನೆ. ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಕಾನೂನು ಕಾರ್ಯಾಗಾರ ಮಾಡಲು ಸರ್ಕಾರ ಪ್ರತಿ ವರ್ಷ 40 ಸಾವಿರ ಅನುದಾನ ನೀಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕ ಹನುಮಂತ ಅರಳಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ವ್ಹಿ .ಎಸ್. ದೇಶಪಾಂಡೆ, ಜಿ.ಎಚ್. ಕಗದಾಳ, ಕಾರ್ಯದರ್ಶಿ ಪಿ.ಎಸ್. ಹುಂಬಿ, ಎಂ.ಟಿ. ಪಾಟೀಲ, ಸಿ.ಎಸ್. ಪಾಟೀಲ, ಬಿ.ಎನ್.ಭೋಸಲೆ, ಎಸ್.ಎಸ್. ಆದೆಪ್ಪನವರ, ಎಫ್.ವೈ. ದೊಡಮನಿ, ಕೆ.ಎಸ್. ಹೂಲಿ, ಎಂ.ಬಿ. ಅಸೂಟಿ, ಎಂ.ಬಿ.ಕುಲಕರ್ಣಿ, ವ್ಹಿ .ಎ. ಮೂಲಿಮನಿ, ಸಿ.ಎ. ಮುಲ್ಕಿಪಾಟೀಲ, ಎಸ್. ಆರ್. ಪಾಟೀಲ, ಆರ್. ಸಿ. ಪಾಟೀಲ, ವ್ಹಿ . ಸಿ. ಪಾಟೀಲ, ಎಸ್. ಬಿ. ಮುದೇನಗುಡಿ, ಜೆ.ಸಿ. ಬೋಗಾರ, ಆರ್. ಆರ್. ನಾಯ್ಕರ, ಎಂ.ಎಸ್. ತಹಸೀಲ್ದಾರ, ವಿಠ್ಠಲ ಗಾಯಕವಾಡ, ಎಸ್.ಎಂ. ಗುಗ್ಗರಿ, ಎಚ್.ಪಿ. ಮುದ್ದನಗೌಡ್ರ ಸೇರಿದಂತೆ ಮುಂತಾದವರು ಇದ್ದರು.