ಸಾರಾಂಶ
ಮಲ್ನಾಡ್ ಗಲ್ಫ್ ಟ್ರಸ್ಟ್ ಅಸೋಸಿಯೇಷನ್ ನಿಂದ ಸನ್ಮಾನ ಸ್ವೀಕರಿಸಿ ಅಭಿಮತ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುವಿಧಾನಪರಿಷತ್ ಸದಸ್ಯೆಯಾಗಿ ಮಲೆನಾಡಿನ ಹಲವು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಹೇಳಿದರು.ಪಟ್ಟಣದ ಜೇಸಿ ವೃತ್ತದಲ್ಲಿ ಗುರುವಾರ ಮಲ್ನಾಡ್ ಗಲ್ಫ್ ಟ್ರಸ್ಟ್ ಅಸೋಸಿಯೇಷನ್ ನಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರದ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯೆಯಾಗಿ ನಾನು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡಿದ್ದು, ಈ ಹಿಂದೆ ನನ್ನ ತಂದೆ ಬೇಗಾನೆ ರಾಮಯ್ಯ ಅವರು ಶಾಸಕ, ಸಚಿವರಾಗಿ ಕಾರ್ಯನಿರ್ವಹಿಸಿದ ವೇಳೆ ನಡೆಸಿದಂತೆ ಶೃಂಗೇರಿ ಕ್ಷೇತ್ರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಯೋಜನೆ ನನ್ನಲ್ಲಿದೆ.
ಬೇಗಾನೆ ರಾಮಯ್ಯನವರ ಕನಸಿನಂತೆ ನಾನು ಕಾರ್ಯನಿರ್ವಹಿಸಲಿದ್ದು, ಶೀಘ್ರದಲ್ಲಿ ಚಿಕ್ಕಮಗಳೂರು ಅಥವಾ ಶೃಂಗೇರಿಯಲ್ಲಿ ವಿಧಾನಪರಿಷತ್ ಸದಸ್ಯರ ಕಚೇರಿ ತೆರೆದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆಯೂ ಆಗಿರುವ ನಾನು ವಿದೇಶದಲ್ಲಿರುವ ಅನಿವಾಸಿ ಭಾರತೀಯರು, ಕನ್ನಡಿಗರಿಗೆ ಅಗತ್ಯವಿರುವ ಸೇವೆ ನೀಡಲು ಬದ್ಧಳಿದ್ದೇನೆ. ಈ ಹಿಂದೆಯೇ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಅನಿವಾಸಿ ಭಾರತೀಯರಿಗೆ ಹೊಸ ಸಚಿವಾಲಯ ತೆರೆಯುವ ಯೋಜನೆ ಯಿದ್ದು, ಈ ಸರ್ಕಾರದ ಅವಧಿ ಅಂತ್ಯದೊಳಗೆ ಸಚಿವಾಲಯ ತೆರೆಯುವ ಯೋಜನೆಯಿದೆ.ವಿಧಾನಪರಿಷತ್ ಸದಸ್ಯೆಯಾಗಿ ಅಧಿವೇಶನದಲ್ಲಿ ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ದನಿ ಯೆತ್ತಲು ಅವಕಾಶ ದೊರೆತಿದ್ದು, ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಅವುಗಳಿಗೆ ನ್ಯಾಯ ದೊರಕಿಸಲಾಗುವುದು. ಮಲೆನಾಡು ಭಾಗದಲ್ಲಿ ಪ್ರಮುಖವಾಗಿ ಅಡಕೆ ಬೆಳೆಗಾರರ ಎಲೆಚುಕ್ಕಿ ರೋಗದ ಸಮಸ್ಯೆ, ಒತ್ತುವರಿ ಸಮಸ್ಯೆ, ಕಾಡಾನೆಗಳ ಉಪಟಳ ಮುಂತಾದ ಸಮಸ್ಯೆಗಳಿಗೆ ಅವುಗಳನ್ನು ಸರ್ಕಾರದ ಗಮನಕ್ಕೆ ತರಲಾ ಗುವುದು. ಮಲೆನಾಡು ಭಾಗದಲ್ಲಿ ಅತಿಯಾದ ಮಳೆಯಿಂದ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಸಂಬಂಧಿಸಿದ ಸಚಿವರ ಬಳಿ ಮಾತನಾಡಿ ರಸ್ತೆ ದುರಸ್ಥಿಗೆ ಕ್ರಮಕೈಗೊಳ್ಳಲಾಗುವುದು. ಶೃಂಗೇರಿ ಕ್ಷೇತ್ರಕ್ಕೆ ಯಾವ ಅಭಿವೃದ್ಧಿ ಯೋಜನೆಗಳು ಅಗತ್ಯವಿದೆಯೋ ಅವುಗಳನ್ನು ನನ್ನ ಶಕ್ತಿಮೀರಿ ತರಲು ಕೆಲಸ ಮಾಡುತ್ತೇನೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಕಾಂಗ್ರೆಸ್ ಮುಖಂಡ ಎ.ಸಿ.ವಜ್ರಪ್ಪ, ಬಿ.ಕಣಬೂರು ಗ್ರಾಪಂ ಸದಸ್ಯ ಇಬ್ರಾಹಿಂ ಶಾಫಿ, ಮಹಮ್ಮದ್ ಜುಹೇಬ್, ಎಂ.ಜೆ.ಮಹೇಶ್ ಆಚಾರ್ಯ, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಮಲ್ನಾಡ್ ಗಲ್ಫ್ ಟ್ರಸ್ಟ್ ನ ಪ್ರಮುಖರಾದ ಅಬ್ದುಲ್ ಹಕ್, ಬಶೀರ್ ಇಂಪಾಲ್, ಟಿ.ಟಿ.ಇಸ್ಮಾಯಿಲ್, ಅಬೂಬಕರ್ ಸಿದ್ದಿಕ್, ರಶೀದ್, ಇಬ್ರಾಹಿಂ ಮಮ್ಮುನ್ನಿ, ಇಸ್ಮಾಯಿಲ್ ಸುಲ್ತಾನ್, ಇಲ್ಯಾಸ್, ಸುಬ್ಬೇಗೌಡ, ಆರತಿ ಕೃಷ್ಣ ಆಪ್ತ ಸಹಾಯಕ ಕಾಳಿಪ್ರಸಾದ್ ಮತ್ತಿತರರು ಹಾಜರಿದ್ದರು. ೨೪ಬಿಹೆಚ್‌ಆರ್ ೧:ಬಾಳೆಹೊನ್ನೂರಿನಲ್ಲಿ ವಿಧಾನಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಅವರನ್ನು ಮಲ್ನಾಡ್ ಗಲ್ಫ್ ಟ್ರಸ್ಟ್ ಅಸೋಸಿಯೇಷ್ ನಿಂದ ಸನ್ಮಾನಿಸಲಾಯಿತು. ಎಚ್.ಎಂ.ಸತೀಶ್, ವಜ್ರಪ್ಪ, ಇಬ್ರಾಹಿಂ ಶಾಫಿ, ಓ.ಡಿ.ಸ್ಟೀಫನ್, ಬಶೀರ್ ಇಂಪಾಲ್ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))