ಸಾರಾಂಶ
ರಸ್ತೆ ಬದಿ ಕೆಎಸ್ಸಾರ್ಟಿಸಿ ಬಸ್ಸು ನಿಲ್ಲಿಸಿದ್ದಕ್ಕೆ ತನ್ನ ಅಂಗಡಿ ವ್ಯಾಪಾರಕ್ಕೆ ಅಡ್ಡಿ ಆಗುತ್ತದೆಂದು ಆರೋಪಿಸಿ ಬಸ್ಸು ನಿರ್ವಾಹಕನ ಮೇಲೆ ಎಗ್ ರೈಸ್ ಅಂಗಡಿ ಮಾಲೀಕ ಹಲ್ಲೆ ಮಾಡಿರುವ ಘಟನೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.
- ಅಂಗಡಿ ಬಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿದ ವಿಚಾರಕ್ಕೆ ಗಲಾಟೆ - ಹಲ್ಲೆ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಗೆ ಕಂಡಕ್ಟರ್ ಚನ್ನಪ್ಪ ದೂರು- - -
ಕನ್ನಡಪ್ರಭ ವಾರ್ತೆ, ದಾವಣಗೆರೆರಸ್ತೆ ಬದಿ ಕೆಎಸ್ಸಾರ್ಟಿಸಿ ಬಸ್ಸು ನಿಲ್ಲಿಸಿದ್ದಕ್ಕೆ ತನ್ನ ಅಂಗಡಿ ವ್ಯಾಪಾರಕ್ಕೆ ಅಡ್ಡಿ ಆಗುತ್ತದೆಂದು ಆರೋಪಿಸಿ ಬಸ್ಸು ನಿರ್ವಾಹಕನ ಮೇಲೆ ಎಗ್ ರೈಸ್ ಅಂಗಡಿ ಮಾಲೀಕ ಹಲ್ಲೆ ಮಾಡಿರುವ ಘಟನೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.
ಕೆಎಸ್ಸಾರ್ಟಿಸಿ ಬಸ್ಸು ಕಂಡಕ್ಟರ್ ಚನ್ನಪ್ಪ ಹಲ್ಲೆಗೆ ಒಳಗಾದ ನೌಕರ. ಚನ್ನಗಿರಿಯಲ್ಲಿ ರಸ್ತೆ ಬದಿ ಸಿಬ್ಬಂದಿ ಕೆಎಸ್ಸಾರ್ಟಿಸಿ ಬಸ್ಸು ನಿಲ್ಲಿಸಿದರು. ಈ ಬಗ್ಗೆ ಎಗ್ ರೈಸ್ ಅಂಗಡಿ ಮಾಲೀಕ ಆಕ್ಷೇಪಿಸಿ, ಜಗಳಕ್ಕಿಳಿದಿದ್ದಾನೆ. ಬಸ್ಸನ್ನು ರಸ್ತೆ ಬದಿ ನಿಲ್ಲಿಸಿರುವುದಾಗಿ ನಿರ್ವಾಹಕ ಹೇಳಿದಾಗ, ಇಬ್ಬರ ಮಧ್ಯೆ ವಾಕ್ಸಮರ ಏರ್ಪಟ್ಟು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.ಘಟನೆಯಲ್ಲಿ ಎಗ್ ರೈಸ್ ಅಂಗಡಿ ಮಾಲೀಕ ಏಕಾಏಕಿ ಕಂಡಕ್ಟರ್ ಚನ್ನಪ್ಪನಿಗೆ ಥಳಿಸಿದ್ದಾನೆ. ಇಡೀ ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ತಮ್ಮ ಮೇಲೆ ಎಗ್ ರೈಸ್ ಅಂಗಡಿ ಮಾಲೀಕ ಹಲ್ಲೆ ನಡೆಸಿದ ಬಗ್ಗೆ ಕಂಡಕ್ಟರ್ ಚನ್ನಪ್ಪ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
- - - (-ಸಾಂದರ್ಭಿಕ ಚಿತ್ರ)