ಗದಗ ಜಿಲ್ಲೆಯಾದ್ಯಂತ ಈದ್ ಮಿಲಾದ್ ಆಚರಣೆ

| Published : Sep 06 2025, 01:01 AM IST

ಸಾರಾಂಶ

ಪ್ರವಾದಿ ಮಹಮ್ಮದ ಪೈಗಂಬರ ಜಯಂತಿ ಅಂಗವಾಗಿ ಶುಕ್ರವಾರ ಜಿಲ್ಲೆಯಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗದಗ-ಬೆಟಗೇರಿ ಅವಳಿ ನಗರದಲ್ಲಿ ವಿವಿಧೆಡೆ ಬೃಹತ್ ಮೆರವಣಿಗೆ ಮೂಲಕ ಸಂಚರಿಸಿದರು.

ಗದಗ: ಪ್ರವಾದಿ ಮುಹಮ್ಮದ ಪೈಗಂಬರ ಜಯಂತಿ ಅಂಗವಾಗಿ ಶುಕ್ರವಾರ ಜಿಲ್ಲೆಯಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗದಗ-ಬೆಟಗೇರಿ ಅವಳಿ ನಗರದಲ್ಲಿ ವಿವಿಧೆಡೆ ಬೃಹತ್ ಮೆರವಣಿಗೆ ಮೂಲಕ ಸಂಚರಿಸಿದರು.

ತಾಲೂಕಿನ ಲಕ್ಕುಂಡಿ ಗ್ರಾಮ ಹಾಗೂ ಸಮೀಪದ ಪಾಪನಾಶಿ ರಸ್ತೆಯಲ್ಲಿರುವ ಮಾಬುಸುಬಾನಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಲಿಮ್ ಹಾಗೂ ಯಹ್ಯಾ ಹಾಪೀಜ್ ಅವರು ಬೈಕ್ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದ ಮುಸಲ್ಮಾನ ಬಾಂಧವರು ಮಹಮ್ಮದ್ ಪೈಗಂಬರರ ಕುರಿತು ಜೈ ಘೋಷ ಕೂಗಿದರು. ಮೆರವಣಿಗೆಯು ಹಿರೇಮಸೂತಿಗೆ ಮುಕ್ತಾಯವಾಯಿತು.

ನಂತರ ನಡೆದ ಕಾರ್ಯಕ್ರಮದಲ್ಲಿ ಮಹಮ್ಮದ್ ಪೈಗಂಬರರ ಜೀವನದ ಚರಿತ್ರೆಯ ಕುರಿತು ಸಲೀಮ್ ಹಾಪೀಜ್ ಅವರು ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಗದಗ ಗ್ರಾಮೀಣ ಸಿಪಿಐ ಸಿದ್ರಾಮೇಶ ಗಡೇದ ಮಾತನಾಡಿದರು. ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ನಜೀರಅಹ್ಮದ ಕಿರೀಟಗೇರಿ, ದಾದಾಸಾಬ ಕೊರ್ಲಹಳ್ಳಿ, ಖಾಜಿಸಾಬ ಮುಲ್ಲಾ, ಜಾವೆದ್ ಯರಗುಡಿ, ಮಹ್ಮದಸಾಬ ನದಾಫ, ಕಾಶಿಂಸಾಬ ತಹಶೀಲ್ದಾರ, ಅಬ್ದುಲ್ ರಸೂಲಸಾಬ ದೌಲತ್ತರ, ಇಮ್ರಾನ್ ಕೊರ್ಲಹಳ್ಳಿ, ಧರಿಯಾಸಾಬ ನದಾಫ, ಕಾಶಿಂಸಾಬ ನದಾಫ, ಮುಸ್ತಾಕ್ ಹಾದಿಮನಿ ಇತರರು ಹಾಜರಿದ್ದರು. ಅನ್ನ ಸಂತರ್ಪಣೆ ನಡೆಯಿತು.