5ರಂದು ಈದ್‌ಮಿಲಾದ್: ಸಂಚಾರ ಮಾರ್ಗ ಬದಲಾವಣೆ

| Published : Sep 03 2025, 01:00 AM IST

ಸಾರಾಂಶ

ಸೆ.5ರಂದು ಈದ್‌ ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಕಡೆ ಮೆರವಣಿಗೆ ನಡೆಸುವುದರಿಂದ ಸುಗಮ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಂದು ಬೆಳಗ್ಗೆ 11ರಿಂದ ರಾತ್ರಿ 11 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

- ಬೆಳಗ್ಗೆ 11ರಿಂದ ರಾತ್ರಿ 11 ಗಂಟೆಯವರೆಗೆ ವಾಹನಗಳ ಸಂಚಾರ ಮಾರ್ಗ ಬದಲು

- ವಿವಿಧೆಡೆ ಮೆರವಣಿಗೆ ನಡೆಸುವ ಹಿನ್ನೆಲೆ ಸುಗಮ ಸಂಚಾರ ಕಾಪಾಡಲು ಡಿಸಿ ಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸೆ.5ರಂದು ಈದ್‌ ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಕಡೆ ಮೆರವಣಿಗೆ ನಡೆಸುವುದರಿಂದ ಸುಗಮ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಂದು ಬೆಳಗ್ಗೆ 11ರಿಂದ ರಾತ್ರಿ 11 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಹರಿಹರದಿಂದ ದಾವಣಗೆರೆಗೆ ಹಳೇ ಪಿ.ಬಿ. ರಸ್ತೆಯ ಮೂಲಕ ಬರುವ ಎಲ್ಲ ಭಾರಿ ವಾಹನ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್‌ಎಚ್-48 ರಸ್ತೆಯಿಂದ ಹಾಗೂ ಚಿತ್ರದುರ್ಗ, ಕಡೆಯಿಂದ ಬರುವ ಎಲ್ಲ ವಾಹನಗಳು ಸಹ ಆವರಗೆರೆ ಹತ್ತಿರದ ಬಾಡಾ ಕ್ರಾಸ್ ಮುಖಾಂತರ ಬಂದು, ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೇಟ್ ಕ್ರಾಸ್‌ನಿಂದ ಎಪಿಎಂಸಿಗೆ ಹೋಗುವುದು.

ಕೆಎಸ್‌ಆರ್‌ಟಿಸಿ ಬಸ್‌ಗಳು ಅದೇ ಮಾರ್ಗವಾಗಿ ಬಾಡಾ ಕ್ರಾಸ್ ಮುಖಾಂತರ ಆವರಗೆರೆ ಕಡಿಯಿಂದ ನೂತನ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಬೆಂಗಳೂರು ಬೆಳಗಾವಿ ಕಡೆಗೆ ಹೋಗುವುದು. ಬಸ್‌ಗಳು ಖಾಸಗಿ ಬಸ್‌ಗಳು ಸಹ ಅದೇ ಮಾರ್ಗವಾಗಿ ಬಂದು ಎಂ.ಜಿ. ಸರ್ಕಲ್ ಮುಖೇನ ನೂತನ ಖಾಸಗಿ ನಿಲ್ದಾಣಕ್ಕೆ ಬಂದು ಅದೇ ಮಾರ್ಗದಲ್ಲಿ ನಿರ್ಗಮಿಸಲು ಸೂಚಿಸಿದೆ.

ಚನ್ನಗಿರಿ ಮಾರ್ಗವಾಗಿ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬಾಡಾ ಕ್ರಾಸ್ ಮೂಲಕ ಆವರಗೆರೆ ಕಡೆಯಿಂದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ಹಿಂತಿರುಗಬೇಕು. ಖಾಸಗಿ ಬಸ್‌ಗಳು ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್ ಹತ್ತಿರದ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಕಲ್ಪಿಸಿದೆ. ಚನ್ನಗಿರಿ ಕಡೆಯಿಂದ ಬರುವ ಸರಕು ವಾಹನಗಳು ಸಹ ಅದೇ ಮಾರ್ಗವಾಗಿ ತೆರಳಿ ಎಪಿಎಂಸಿ ಮಾರ್ಕೆಟ್‌ನಲ್ಲಿ ಪಾರ್ಕಿಂಗ್ ಮಾಡಬೇಕು. ಜಗಳೂರು ಮತ್ತು ಹರಪನಹಳ್ಳಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ಹಿಂತಿರುಗುವುದು.

ಹಾಗೆಯೇ ಈ ಎರಡು ಮಾರ್ಗಗಳಿಂದ ಬರುವ ಖಾಸಗಿ ಬಸ್ ವೆಂಕಟೇಶ್ವರ ವೃತ್ತ, ಗಣೇಶ ಹೋಟೆಲ್ ವೃತ್ತ ಮುಖಾಂತರ ಎಪಿಎಂಸಿ ಮಾರ್ಕೆಟ್‌ನಲ್ಲಿ ಪಾರ್ಕಿಂಗ್ ಮಾಡಲು ಸೂಚಿಸಿದೆ. ಸರಕು ಲಾರಿಗಳು ಸಹ ಇದೇ ಮಾರ್ಗವಾಗಿ ಹಾಗೂ ಕೊಂಡಜ್ಜಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ರಿಂಗ್ ರಸ್ತೆ ಮತ್ತು ಬಂಬೂ ಬಜಾರ್ ಮುಖಾಂತರ ನೂತನ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ವಾಪಸ್ ಹೋಗುವುದು. ಖಾಸಗಿ ಬಸ್‌ಗಳು ಅದೇ ಮಾರ್ಗವಾಗಿ ಬಂದು ಎಪಿಎಂಸಿ ಮಾರ್ಕೆಟ್‌ನಲ್ಲಿ ಪಾರ್ಕಿಂಗ್ ಹಾಗೂ ಸರಕು ವಾಹನಗಳು ಸಹ ಇದೇ ಮಾರ್ಗವಾಗಿ ಸಂಚರಿಸಿ, ಎಪಿಎಂಸಿ ಮಾರ್ಕೆಟ್‌ಗೆ ಸಂಚರಿಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಆದೇಶದಲ್ಲಿ ಸೂಚಿಸಿದ್ದಾರೆ.

- - -

ಫೋಟೋ: ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ