ಸಾರಾಂಶ
- ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ । ಜಾಲಿ ನಗರದಲ್ಲಿ ಸಿಹಿ ವಿತರಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಪ್ರವಾದಿ ಮಹಮ್ಮದ್ ಜನ್ಮದಿನ ಹಿನ್ನಲೆ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು. ಶುಕ್ರವಾರ ಹಬ್ಬದ ಹಿನ್ನೆಲೆ ನಗರದ ಪ್ರಮುಖ ರಸ್ತೆ, ವೃತ್ತಗಳನ್ನು ಹಸಿರು ತೋರಣ, ಬಂಟಿಂಗ್ಸ್ ಮತ್ತು ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು.ಆಜಾದ್ ನಗರ 7ನೇ ಕ್ರಾಸ್‌ನಲ್ಲಿ ಮಿಲಾದ್ ಕಮಿಟಿ ಏರ್ಪಡಿಸಿದ್ದ ಮೆರವಣೆಗೆಗೆ ವಿಧಾನ ಪರಿಷತ್ತು ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಅಧ್ಯಕ್ಷ ಎ.ಬಿ. ಹಬೀಬ್ ಸಾಬ್, ಉಪಾಧ್ಯಕ್ಷ ಯಾಸೀನ್ ಪೀರ್, ಖಾಸೀಂ ಪೀರ್, ಕಾರ್ಯದರ್ಶಿ ವಕೀಲ ನಜೀರ್ ಅಹಮದ್, ಕಮಿಟಿ ಸದಸ್ಯರು ಚಾಲನೆ ನೀಡಿದರು.
ಮೆರವಣಿಗೆಯು ಮದೀನಾ ವೃತ್ತದಿಂದ ಆರಂಭವಾಗಿ ಅಹ್ಮದ್ ನಗರ, ಕೆ.ಆರ್. ಮಾರುಕಟ್ಟೆ, ಚಾಮರಾಜ ಪೇಟೆ ವೃತ್ತ, ಮಂಡಿಪೇಟೆ, ಗಡಿಯಾರ ಕಂಬ ತಲುಪಿ ಪಿ.ಬಿ. ರಸ್ತೆ ಸಾಗುವ ಮೂಲಕ ಗಾಂಧಿ ವೃತ್ತ ತಲುಪಿತು. ಇಲ್ಲಿಗೆ ವಿನೋಬ ನಗರ ಮತ್ತು ಕೆಟಿಜೆ ನಗರದಿಂದ ಬಂದ ಮೆರವಣಿಗೆಗಳು ಸಮಾಗಮಗೊಂಡವು. ಮೆರವಣಿಗೆ ಮಾಗನಹಳ್ಳಿ ರಸ್ತೆಯ ಮಿಲಾದ್ ಮೈದಾನ ತಲುಪಿ ಮುಕ್ತಾಯವಾಯಿತು.ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಎ.ಬಿ. ಹಬೀಬ್ ಸಾಬ್, ಉಪಾಧ್ಯಕ್ಷ ಯಾಸೀನ್ ಪೀರ್, ಖಾಸೀಂ ಪೀರ್, ಕಾರ್ಯದರ್ಶಿ ವಕೀಲ ನಜೀರ ಅಹಮದ್, ಸಹ ಕಾರ್ಯದರ್ಶಿಗಳಾದ ವಿ.ಪಿ.ಶಫೀಸಾಬ್, ಸೈಯದ್ ರಿಯಾಜ್, ಸೈಯದ್ ಖಜಾಂಚಿ ಜೀಬಿವುಲ್ಲಾ ರಜ್ವಿ, ಸದಸ್ಯರಾದ ಮಹಮ್ಮದ್ ಅಕ್ಬರ್ ಆಲಿ, ಕಲೀಂ ಖಾನ್ ಹಾಷ್ಮೀ, ಅಬ್ದುಲ್ ಘನಿ ತಾಹೀರ್, ಇಬ್ರಾಹಿಂ ಕಲೀಲ್ ವುಲ್ಲಾ, ವಾಜೀದ್ ಹತ್ತರ್ ಮುನ್ನಾ, ನೂರ್ ಅಹಮದ್, ದಲಿತ ಮುಖಂಡ ಬಿ.ಎಂ.ಹನುಮಂತಪ್ಪ ಸೇರಿದಂತೆ ಇತರರು ಇದ್ದರು.
ಶಾಂತಿ ಸಾರುವುದೇ ಈದ್ ಮಿಲಾದ್ ಉದ್ದೇಶ:ಕ್ರಿಸ್ತ ಪೂರ್ವ 650ಕ್ಕೂ ಮೊದಲು ಮಹಮದ್ ಪೈಗಂಬರ್ ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದರು. ಜಗತ್ತಿನಲ್ಲಿ ಇಸ್ಲಾಂ ಪ್ರವಚನಗಳನ್ನು ನೀಡಿ, ಇಸ್ಲಾಂ ಧರ್ಮವು ಇಡೀ ಜಗತ್ತಿಗೆ ಶಾಂತಿ ನೀಡುವ ಧರ್ಮ ಎನ್ನುವುದನ್ನು ಸಾರಿ ಹೇಳಿದ್ದರು ಎಂದು ಮಾಜಿ ನಗರಸಭಾಧ್ಯಕ್ಷ, ಕಾಂಗ್ರೆಸ್ ಮುಖಂಡ ಬಿ.ವೀರಣ್ಣ ಹೇಳಿದರು. ದಾವಣಗೆರೆ ನಗರದ ಜಾಲಿನಗರ (ಸುರೇಶ ನಗರ)ದ ರಸ್ತೆಯಲ್ಲಿ ಶುಕ್ರವಾರ ಈದ್ ಮಿಲಾದ್ ಅಂಗವಾಗಿ ಮಸೀದಿಗೆ ತೆರಳಿ ಮುಸ್ಲಿಂ ಬಾಂಧವರಿಗೆ ಸಿಹಿ ವಿತರಿಸಿ, ಹಬ್ಬದ ಶುಭಾಶಯ ಕೋರಿ ಅವರು ಮಾತನಾಡಿದರು. ಇಂದು ಪೈಗಂಬರ್ ಸಂದೇಶಗಳನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ವಿನಾಯಕ ಪೈಲ್ವಾನ್, ಮಂಜುನಾಥ, ತರಕಾರಿ ಚಂದ್ರಪ್ಪ ಖಾದರ್ ಜಾಲಿ, ತಾಯರ್, ಘನಿ, ಶಮೀಉಲ್ಲಾ, ನೂರ್ ಅಹಮದ್, ಹಬೀಬ್, ದಾದು ಮತ್ತಿತರರು ಪಾಲ್ಗೊಂಡಿದ್ದರು.ನ್ಯಾಮತಿಯಲ್ಲಿ ಮೆರವಣಿಗೆ: ನ್ಯಾಮತಿ ಪಟ್ಟಣದ ಮುಸ್ಲಿಂ ಬಾಂಧವರು ಶುಕ್ರವಾರ ಈದ್ ಎ-ಮೀಲಾದ್ ಉನ್-ನಬೀ ಹಬ್ಬದ ಅಂಗವಾಗಿ ಪಟ್ಟಣದ ಜಾಮೀಯ ಮಸೀದಿಯಿಂದ ದರ್ಗಾದವರೆಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣೆಗೆ ನಡೆಸಿ ಸಂಭ್ರಮದಿಂದ ಆಚರಿಸಿದರು. ಈ ವೇಳೆ ಜಾಮೀಯ ಮಸೀದಿ ಅಧ್ಯಕ್ಷ ಜಬಿ ಸಾಹೇಬ್, ಉಪಅಧ್ಯಕ್ಷ ರಫೀಕ್ ಆಹಮದ್, ಹಿದಾಯತ್ ಉಲ್ಲಾ, ಸಲಿಂ ಸಾಹೀಬ್, ಅಮೀರ್ ಸಾಹೀಬ್, ಶಫಿಉಲ್ಲಾ, ಬಾಬುಸಾಹೀಬ್, ದಂಡಿಬಾಬುಸಾಹೀಬ್, ಯುನಸ್‌ಬಾಷಾ ಇನ್ನು ಮುಂತಾದ ಮುಸ್ಲಿಂ ಬಾಂಧವರು ಇದ್ದರು.
- - --5ಕೆಡಿವಿಜಿ44, 45: ದಾವಣಗೆರೆಯಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಅಂಗವಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. -5ಕೆಡಿವಿಜಿ39: ದಾವಣಗೆರೆಯಲ್ಲಿ ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಮಾಜಿ ನಗರಸಭಾಧ್ಯಕ್ಷ ಬಿ.ವೀರಣ್ಣ ಹಬ್ಬದ ಶುಭಾಶಯಗಳನ್ನು ತಿಳಿಸಿ, ಸಿಹಿ ವಿತರಿಸಿದರು.