ಇಸ್ಪೀಟ್ ಅಡ್ಡೆ ಮೇಲೆ ದಾಳಿ: 8 ಮಂದಿ ವಶ

| Published : Jul 10 2024, 12:38 AM IST

ಸಾರಾಂಶ

eight culprint arrest in Hyriyuru

ಹಿರಿಯೂರು: ನಗರದ ಗೋಪಾಲಪುರ ಬಡಾವಣೆಯ ಮಾರುತಿ ಸರ್ಕಲ್ ನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ನಗರಠಾಣೆ ಪೊಲೀಸರು ದಾಳಿ ನಡೆಸಿ 8 ಜನರನ್ನು ವಶಕ್ಕೆ ಪಡೆದಿದ್ದಾರೆ. 4720 ರು.ಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಗಂಗಾಧರಪ್ಪ, ಕೃಷ್ಣ, ಆಫ್ಜಲ್ ಅಹಮದ್, ಖಾದರ್ ಖಾನ್, ದಾದಾಪೀರ್, ಗೋಪಿ, ಸಿದ್ದಪ್ಪ, ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ನೇತೃತ್ವವನ್ನು ಸಿಪಿಐ ರಾಘವೇಂದ್ರ ಪಿಎಸ್ ಐ ಲಕ್ಷ್ಮೀನಾರಾಯಣ, ಸಿಬ್ಬಂದಿಯವರಾದ ರಾಘು, ಸುದರ್ಶನ್, ಸುನೀಲ್, ದೇವರಾಜ್ ವಹಿಸಿದ್ದರು.

----