ಲೋಕಸಭೆ ಚುನಾವಣೆ: ಅರಸೀಕೆರೆಯಲ್ಲಿ ಶೇ.80 ಮತದಾನ

| Published : Apr 27 2024, 01:00 AM IST

ಸಾರಾಂಶ

ಅರಸೀಕೆರೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕುಮುಖಿ ನಡೆದಿರುವುದು ಹೊರತುಪಡಿಸಿ ಉಳಿದಂತೆ ಎಲ್ಲೆಡೆ ಶಾಂತಿಯುತವಾಗಿ ಶೇ.80 ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ.

ಮತದಾರರ ಹೆಸರು ನಾಪತ್ತೆಯಾಗಿ ಕೆಲವೆಡೆ ಮಾತಿನ ಚಕಮಕಿ । ೨೭೬ ಮತಗಟ್ಟೆಗಳಲ್ಲಿ ಹಕ್ಕು ಚಲಾವಣೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಲೋಕಸಭಾ ಚುನಾವಣೆಗೆ ಶುಕ್ರವಾರ ನಡೆದ ಮತದಾನದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ೨೭೬ ಮತಗಟ್ಟೆಗಳ ಪೈಕಿ ಕೆಲವು ಮತಗಟ್ಟೆಗಳಲ್ಲಿ ಮತದಾರರ ಹೆಸರುಗಳೆ ನಾಪತ್ತೆಯಾಗಿರುವ ಘಟನೆಯೊಂದಿಗೆ ಕೆಲವು ಮತಗಟ್ಟೆಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕುಮುಖಿ ನಡೆದಿರುವುದು ಹೊರತುಪಡಿಸಿ ಉಳಿದಂತೆ ಎಲ್ಲೆಡೆ ಶಾಂತಿಯುತವಾಗಿ ಶೇ.80 ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ.

ಅರಸೀಕೆರೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕುಮುಖಿ ನಡೆದಿರುವುದು ಹೊರತುಪಡಿಸಿ ಉಳಿದಂತೆ ಎಲ್ಲೆಡೆ ಶಾಂತಿಯುತವಾಗಿ ಶೇ.80 ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ.ಅರಸೀಕೆರೆ ವಿಧಾನಸಭಾ ಕ್ಷೇತ್ರದ ಒಟ್ಟು ೨೭೬ ಮತಗಟ್ಟೆಗಳಲ್ಲಿ ೩ ಸೂಕ್ಷ್ಮ, ೮೪ ಅತಿ ಸೂಕ್ಷ್ಮ ಹಾಗೂ ೧೪ ವಾರ್ನಬಲ್ ಮತಗಟ್ಟೆಗಳು ಎಂದು ಗುರುತಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪೊಲೀಸ್ ರಕ್ಷಣಾ ವ್ಯವಸ್ಥೆ ಹಾಗೂ ಅವಶ್ಯಕ ಮತಗಟ್ಟೆಗಳಿಗೆ ಸಿಸಿ ಕ್ಯಾಮರಾಗಳ ಆಳವಡಿಕೆಯನ್ನು ಭದ್ರತಾ ದೃಷ್ಟಿಯಿಂದ ಮಾಡಲಾಗಿತ್ತು. ಶುಕ್ರವಾರ ಮುಂಜಾನೆ ೭ ಗಂಟೆಯಿಂದ ಮತದಾನದ ಪ್ರಕ್ರಿಯೆ ಆರಂಭವಾಗುತ್ತಿದಂತೆ ಕೆಲವು ಮತಗಟ್ಟೆಗಳಲ್ಲಿ ಮತದಾರರು ಮತಚಲಾಯಿಸಲು ಬಂದಾಗ ಅವರ ಹೆಸರುಗಳು ನಾಪತ್ತೆಯಾಗಿರುವುದು ತೀವ್ರ ಗೊಂದಲಕ್ಕೆ ಕಾರಣವಾಯಿತು .

ಅಲ್ಲಲ್ಲಿ ಜೆಡಿಎಸ್ ಹಾಗೂ ಕಾಂಗ್ರೇಸ್ ಕಾರ್ಯಕರ್ತರ ನಡುವೆ ಮಾತಿನ ಚಕುಮಕಿ ನಡೆದು ಗೊಂದಲಕ್ಕೆ ಕಾರಣವಾಗಿತ್ತು. ಸಂಜೆ ೬ ಗಂಟೆ ವೇಳೆಯಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ಎಲ್ಲಾ ಮತದಾರರಿಗೂ ಮತದಾನ ಮಾಡಲು ಅವಕಾಶ ನೀಡಲು ಈ ಬಗ್ಗೆ ತಾವು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಚುನಾವಣಾ ಅಧಿಕಾರಿ ತಿಳಿಸಿದರು.

ಕ್ಷೇತ್ರದ ಬಹುತೇಕ ಮತಗಟ್ಟೆಗಳಿಗೆ ಮುಂಜಾನೆಯಿಂದ ಮತದಾರರು ಬಾರದೆ ಮತದಾನ ತೀವ್ರ ಮಂದಗತಿಯಲ್ಲಿ ಸಾಗಿತ್ತು, ೧೨ ಗಂಟೆಯ ನಂತರ ಸುಡು ಬಿಸಿಲನ್ನು ಲೆಕ್ಕಿಸದೆ ಕೆಲವು ಮತಗಟ್ಟೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಮತಗಟ್ಟೆಗಳಿಗೆ ದಾಂಗುಡಿ ಇಟ್ಟರು. ಹೆಂಜಗೊಂಡನಹಳ್ಳಿಯ ಹೇಮಂತ್ ಮತ್ತು ಹರ್ಷಿತ ಇಂದು ಗ್ರಹಸ್ಥಮಕ್ಕೆ ಪಾದರ್ಪಣೆ ಮಾಡಿದ್ದು ಮದುವೆಯ ಸಂಭ್ರಮದ ನಡುವೆ ಬೂತ್ ಸಂಖ್ಯೆ 125ಕ್ಕೆ ತೆರಳಿ ಮತದಾನ ಮಾಡಿದರು

ಲೋಕಸಭಾ ಚುನಾವಣೆಗೆ ಅರಸೀಕೆರೆ ಕ್ಷೇತ್ರದ ಮಾಡಳು ಗ್ರಾಮದ ಮತಗಟ್ಟೆ ಸಂಖ್ಯೆ 194ರಲ್ಲಿ ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ತಮ್ಮ ಹಕ್ಕು ಚಲಾಯಿಸಿದರು

ತಾಲೂಕಿನ ಡಿಎಂ ಕುಡಿಕೆ ಬೂದಿಹಾಳ ವಿರಕ್ತ ಮಠದ ಸ್ವಾಮೀಜಿ ಶಶಿ ಶೇಖರ ಸಿದ್ಧಬಸವ ಸ್ವಾಮೀಜಿ ಡಿಎಂ ಕುಡಿಕೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಕೋಡಿಮಠದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮಧ್ಯಾಹ್ನ ೩ ಗಂಟೆಯ ವೇಳೆಗೆ ವೇಳೆಗೆ ಶೇ.55ರಷ್ಟು ಮತದಾನ ನಡೆದಿದ್ದು, ಉರಿ ಬಿಸಿಲನ್ನು ಲೆಕ್ಕಿಸದೆ ಮನೆಯಿಂದ ಜನರು ಹೊರ ಬಂದು ಮತ ಹಾಕಿದರು. ಸಂಜೆ ೬ ಗಂಟೆ ವೇಳೆಗೆ ಸುಮಾರು ಶೇ.77 ರಷ್ಟು ಮತದಾನ ನಡೆದಿದೆ

ತಾಲೂಕಿನ ಡಿಎಂ ಕುಡಿಕೆ ಬೂದಿಹಾಳ ವಿರಕ್ತ ಮಠದ ಸ್ವಾಮೀಜಿ ಶಶಿ ಶೇಖರ ಸಿದ್ಧಬಸವ ಸ್ವಾಮೀಜಿ ಡಿಎಂ ಕುಡಿಕೆ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಹೆಂಜಗೊಂಡನಹಳ್ಳಿಯ ಹೇಮಂತ್ ಮತ್ತು ಹರ್ಷಿತ ಶುಕ್ರವಾರ ಗ್ರಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದ್ದು ಮದುವೆಯ ಸಂಭ್ರಮದ ನಡುವೆ ಬೂತ್ ಸಂಖ್ಯೆ 125ಕ್ಕೆ ತೆರಳಿ ಮತದಾನ ಮಾಡಿದರು