ಎಕ್ಕಾರು ಗ್ರಾಪಂನಲ್ಲಿ ಮಕ್ಕಳ ಗ್ರಾಮ ಸಭೆ

ಕನ್ನಡಪ್ರಭ ವಾರ್ತೆ ಮೂಲ್ಕಿ

ಮಕ್ಕಳು ಎಳವೆಯಲ್ಲಿ ಸಂಸ್ಕಾರಯುತವಾಗಿ ಬೆಳೆದಾಗ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಕ್ಯಾಪ್ಸ್ ಪೌಂಡೇಷನ್ ಅಧ್ಯಕ್ಷ ಸಿ.ಎ. ಚಂದ್ರಶೇಖರ ಶೆಟ್ಟಿ ಹೇಳಿದರು. ಎಕ್ಕಾರು ಗ್ರಾಪಂನಲ್ಲಿ ಮಕ್ಕಳ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆ ಬಳಷ್ಟು ಹಾನಿಕರವಾಗಿದ್ದು, ಮಕ್ಕಳು ಹಂತ ಹಂತವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕೆಂದು ಹೇಳಿದರು.

ವಿದ್ಯಾರ್ಥಿನಿ ಅಕ್ಷನಾ ಬಾನು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಮತ್ತು ಮಹಿಳಾ ಇಲಾಖೆ ಮೇಲ್ವಿಚಾರಕಿ ಸುಲೋಚನಾ, ಗ್ರಾಪಂ ಸದಸ್ಯರಾದ ನಸೀಮ ಬಾನು, ಪಂಚಾಯಿತಿ ಕಾರ್‍ಯದರ್ಶಿ ಕಮಲಾಕ್ಷ, ಸುರೇಖಾ ಶೆಟ್ಟಿ, ಸಿಬ್ಬಂದಿ ವರ್ಗ, ಆಶಾ ಕಾರ್‍ಯಕರ್ತೆಯರು, ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ ಸ್ವಾಗತಿಸಿದರು. ಪಂಚಾಯಿತಿ ಲೆಕ್ಕ ಸಹಾಯಕ ಇಸ್ಮಾಯಿಲ್ ವಂದಿಸಿದರು. ಸಿ.ಎ. ಚಂದ್ರಶೇಖರ ಶೆಟ್ಟಿ ಮಕ್ಕಳಿಗೆ ನೀರಿನ ಬಾಟಲಿ, ಬಟ್ಟೆಯ ಕೈಚೀಲ, ಸಿಹಿತಿಂಡಿಯನ್ನು ಕ್ಯಾಪ್ಸ್ ಫೌಂಡೇಶನ್ ವತಿಯಿಂದ ವಿತರಿಸಿದರು.