ಅದ್ದೂರಿ ಚನ್ನಮಲ್ಲ ಶಿವಯೋಗಿಗಳ ಕಂಚಿನಮೂರ್ತಿ ಮೆರವಣಿಗೆ

| Published : Dec 25 2023, 01:30 AM IST

ಅದ್ದೂರಿ ಚನ್ನಮಲ್ಲ ಶಿವಯೋಗಿಗಳ ಕಂಚಿನಮೂರ್ತಿ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಚನ್ನಮಲ್ಲ ಶಿವಯೋಗಿಗಳು ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಲಿಂಗೈಕ್ಯರಾಗಿದ್ದು, ಭಕ್ತರು ಇಲ್ಲಿಯೇ ನೂತನ ಶಿಲಾಮಂಟಪ, ಗರ್ಭಗೃಹ, ಗೋಪುರ ಹಾಗೂ ಹೊಸ ತೇರು ನಿರ್ಮಿಸಿದ್ದಾರೆ. ನೂತನ ಶ್ರೀಮಠ ಹಾಗೂ ತೇರು ಲೋಕಾರ್ಪಣೆ ಕಾರ್ಯಕ್ರಮ

ಕನಕಗಿರಿ: ಪಟ್ಟಣದ ಸುವರ್ಣಗಿರಿ ಸಂಸ್ಥಾನ ಮಠದ ೨೬ನೇ ಪೀಠಾಧಿಪತಿ ಚನ್ನಮಲ್ಲ ಶಿವಯೋಗಿಗಳ ಕಂಚಿನಮೂರ್ತಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ನಡೆಸಿ,ಮೆದಿಕಿನಾಳ ಮಠಕ್ಕೆ ಬೀಳ್ಕೊಡಲಾಯಿತು.

ಕಲ್ಮಠದಿಂದ ಆರಂಭಗೊಂಡ ಮೆರವಣಿಗೆ ರಾಜಬೀದಿಯ ಮೂಲಕ ಸಾಗಿ ಶ್ರೀ ಕನಕಾಚಲಪತಿ ದೇವಸ್ಥಾನ ಮುಂಭಾಗದಿಂದ ವಾಲ್ಮೀಕಿ ವೃತ್ತದ ಮಾರ್ಗವಾಗಿ ತಾವರಗೇರಾ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ನಡೆಯಿತು.ನೂರಾರು ಮಹಿಳೆಯರು ಕುಂಭ ಹಾಗೂ ಕಳಸದೊಂದಿಗೆ ಭಾಗವಹಿಸಿದ್ದು ಮೆರವಣಿಗೆಗೆ ಶೋಭೆ ತಂದಿತು. ಇನ್ನೂ ಸಮಗಂಡಿ ಮಲ್ಲಯ್ಯತಾತ ಅಲೆಮಾರಿ ಡ್ರಮ್‌ಸೆಟ್ ತಂಡದ ಕಲಾವಿದರ ತಾಷಾ ಮೇಳಕ್ಕೆ ಯುವಕರು ಕುಣಿದು ಸಂಭ್ರಮಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಚನ್ನಮಲ್ಲ ಶಿವಯೋಗಿಗಳು ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಲಿಂಗೈಕ್ಯರಾಗಿದ್ದು, ಭಕ್ತರು ಇಲ್ಲಿಯೇ ನೂತನ ಶಿಲಾಮಂಟಪ, ಗರ್ಭಗೃಹ, ಗೋಪುರ ಹಾಗೂ ಹೊಸ ತೇರು ನಿರ್ಮಿಸಿದ್ದಾರೆ. ನೂತನ ಶ್ರೀಮಠ ಹಾಗೂ ತೇರು ಲೋಕಾರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಡಿ. ೨೪ರಿಂದ ೨೦೨೪ರ ಜ. ೩ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಖಂಡ ಪ್ರಶಾಂತ ಪ್ರಭುಶೆಟ್ಟರ ತಿಳಿಸಿದರು.

ಪ್ರಮುಖರಾದ ಬಸವರಾಜ ಗುಗ್ಗಳಶೆಟ್ರ, ಬಸವರಾಜ ಹಿರೇಮಠ, ವಿರೇಶ ಸಮಗಂಡಿ, ಗಂಗಾಧರಸ್ವಾಮಿ, ಶರಣಪ್ಪ ಎಂ. ಭತ್ತದ, ಸುರೇಶ ಗುಗ್ಗಳಶೆಟ್ರ, ಕರಡೆಪ್ಪ ತೆಗ್ಗಿನಮನಿ, ನಾಗಭೂಷಣ ಸಜ್ಜನ, ಬಸಲಿಂಗಯ್ಯಸ್ವಾಮಿ ಕೆ, ಶರಣೇಗೌಡ, ರವಿ ಪಾಟೀಲ್, ಸಂಗಯ್ಯಸ್ವಾಮಿ ಸೇರಿದಂತೆ ಇತರರಿದ್ದರು.