ಸಾರಾಂಶ
ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ದಶಕಗಳ ಕಾಲ ಶಾನಭೋಗ ವೃತ್ತಿಯಿಂದ ಜನಪ್ರಿಯರಾಗಿದ್ದ ಶಾನಭೋಗ್ ಎನ್.ಆರ್.ಸುಬ್ಬರಾವ್(೭೮) ಸೋಮವಾರ ಮನೆಯಲ್ಲಿ ನಿಧನರಾಗಿದ್ದಾರೆ.ಫೆ.25 ಭಾನುವಾರ ಪತ್ನಿ ಎನ್.ಶಾರದಮ್ಮ(೬೭) ನಿಧನರಾಗಿದ್ದರು.
ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ದಶಕಗಳ ಕಾಲ ಶಾನಭೋಗ ವೃತ್ತಿಯಿಂದ ಜನಪ್ರಿಯರಾಗಿದ್ದ ಶಾನಭೋಗ್ ಎನ್.ಆರ್.ಸುಬ್ಬರಾವ್(೭೮) ಸೋಮವಾರ ಮನೆಯಲ್ಲಿ ನಿಧನರಾಗಿದ್ದಾರೆ.
ಫೆ.25 ಭಾನುವಾರ ಪತ್ನಿ ಎನ್.ಶಾರದಮ್ಮ(೬೭) ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಗ್ರಾಮದ ತಮ್ಮ ತೋಟದಲ್ಲಿ ನೆರವೇರಿಸಿ ಭಾನುವಾರ ರಾತ್ರಿ ನಿತ್ರಾಣಗೊಂಡ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ರಾತ್ರಿ 2ರ ತನಕ ಮನೆಯಲ್ಲೇ ಓಡಾಡಿಕೊಂಡಿದ್ದು, ಬೆಳಗಿನ ಜಾವ 5 ಗಂಟೆಗೆ ಮನೆಯವರು ಇವರನ್ನು ಎಚ್ಚರಿಸಲು ಹೋದಾಗ ಮೃತಪಟ್ಟಿರುವುದು ತಿಳಿದುಬಂದಿದೆ. ಪತ್ನಿ ಮೃತಪಟ್ಟ ಕೇವಲ 24 ಗಂಟೆಯಲ್ಲೇ ಅವರನ್ನು ಹಿಂಬಾಲಿಸಿದ ಎನ್.ಆರ್.ಸುಬ್ಬರಾವ್ ಅವರ ಸಾವಿನ ಬಗ್ಗೆ ಇಡೀ ಗ್ರಾಮವೇ ದುಖಃತಪ್ತವಾಗಿದೆ.ಸಂತಾಪ: ಸುಬ್ಬರಾವ್ ಅವರ ನಿಧನದ ಸುದ್ದಿ ಕೇಳಿ ನನ್ನಿವಾಳ ಗ್ರಾಮವೂ ಸೇರಿದಂತೆ ಸುತ್ತಮುತ್ತಲ ಗ್ರಾಮದ ಸಾರ್ವಜನಿಕರು, ಚುನಾಯಿತ ಜನಪ್ರತಿನಿಧಿಗಳು ಅವರ ಮನೆಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ತಾಲೂಕು ಬ್ರಾಹ್ಮಣ ಸಂಘವೂ ಸಹ ಶಾನ್‌ಭೋಗ್ ಸುಬ್ಬರಾವ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.