ನಾಳೆ ..ದೇಹದಾನ ಮಾಡಿದ ವಯೋವೃದ್ಧ ಶಿವಶರಣಪ್ಪ ಮೈಲಾಪೂರ

| Published : Feb 15 2025, 12:32 AM IST

ನಾಳೆ ..ದೇಹದಾನ ಮಾಡಿದ ವಯೋವೃದ್ಧ ಶಿವಶರಣಪ್ಪ ಮೈಲಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

Elderly Shivasharanappa, who donated his body, Mylapore

ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸ್ವಇಚ್ಚೆ ದೇಹ ದಾನ ಒಪ್ಪಿಗೆ ಪತ್ರಕ್ಕೆ ಸಹಿ

---ಕನ್ನಡಪ್ರಭ ವಾರ್ತೆ ಯಡ್ರಾಮಿ: ವೃದ್ಧರೊಬ್ಬರು ಸಾವಿನ ನಂತರ ತಮ್ಮ ದೇಹವನ್ನು ವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ ಮಾಡಲು ಬಯಸಿದ್ದು ತಮ್ಮ ಸ್ವಇಚ್ಛೆಯಿಂದ ಒಪ್ಪಿಗೆ ಪತ್ರ ಬರೆದುಕೊಟ್ಟು ಸಾರ್ಥಕತೆ ಮೆರೆದಿದ್ದಾರೆ.

ತಾಲೂಕಿನ ಮಳ್ಳಿ ಗ್ರಾಮದ ಗಾಂಧಿನಗರದ ಶಿವಶರಣಪ್ಪ ತಂದೆ ಬಸಪ್ಪ ಮೈಲಾಪೂರ (80) ತಮ್ಮ ಸಾವಿನ ಬಳಿಕ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದೇಹದಾನ ಮಾಡಿರುವುದಾಗಿ ತಿಳಿಸಿದ್ದಾರೆ. ಕಲಬುರ್ಗಿ ವೈದಿಕೀಯ ವಿಜ್ಞಾನಿಗಳ ಸಂಸ್ಥೆಗೆ ತಮ್ಮ ಸಾವಿನ ನಂತರ ದೇಹದಾನ ಮಾಡುವುದಾಗಿ ತಿಳಿಸಿದ್ದಾರೆ.

ಸಾವಿನ ನಂತರವೂ ಇನ್ನೊಬ್ಬರ ಜೀವನದಲ್ಲಿ ಬೆಳಕು ತರಬೇಕೆಂದರೆ ದೇಹ ಮತ್ತು ಅಂಗಾಂಗ ದಾನ ಬಹುಮುಖ್ಯ. ಕಣ್ಣು, ಕಿಡ್ನಿ, ಲಿವರ್, ಹೃದಯ, ಚರ್ಮ ಏನು ಬೇಕಾದರೂ ದಾನ ಮಾಡಬಹುದು. ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಮಳ್ಳಿ ಆರೋಗ್ಯ ಕೇಂದ್ರದ ಡಾ.ಸಂದೀಪ ಜನರಲ್ಲಿ ಜಾಗೃತಿ ಮೂಡಿಸಿದರು.

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ನನ್ನ ದೇಹವನ್ನು ಸಾವಿನ ಬಳಿಕ ದಾನ ಮಾಡಿರುವುದಾಗಿ ಶಿವಶರಣಪ್ಪ ತಿಳಿಸಿದರು.