ಸಾರಾಂಶ
ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಹಾಲಮ್ಮ ಬಸಪ್ಪ (75) ಎಂಬವರ ಮನೆಗೆ ಕಳ್ಳರು ನುಗ್ಗಿ ಹಲ್ಲೆ ನಡೆಸಿ, ಕೊರಳಲ್ಲಿದ್ದ ₹2 ಲಕ್ಷ ಮೌಲ್ಯದ ಬಂಗಾರದ ಸರ ಕಿತ್ತುಕೊಂಡು ಹೋದ ಘಟನೆ ಭಾನುವಾರ ಸಂಜೆ ನಡೆದಿದೆ.
ನ್ಯಾಮತಿ: ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಹಾಲಮ್ಮ ಬಸಪ್ಪ (75) ಎಂಬವರ ಮನೆಗೆ ಕಳ್ಳರು ನುಗ್ಗಿ ಹಲ್ಲೆ ನಡೆಸಿ, ಕೊರಳಲ್ಲಿದ್ದ ₹2 ಲಕ್ಷ ಮೌಲ್ಯದ ಬಂಗಾರದ ಸರ ಕಿತ್ತುಕೊಂಡು ಹೋದ ಘಟನೆ ಭಾನುವಾರ ಸಂಜೆ ನಡೆದಿದೆ.
ಸಂಜೆ ಚಹಾ ತಯಾರಿಸಲು ಗ್ಯಾಸ್ ಸ್ಟೌ ಹಚ್ಚಿದ್ದರು. ಈ ಸಮಯದಲ್ಲಿ ಕಿಡಿಗೇಡಿಗಳು ಮನೆಗೆ ನುಗ್ಗಿ ಹಿಂದಿನಿಂದ ಬಂದ ಆಯುಧದಿಂದ ವೃದ್ಧೆ ತಲೆಗೆ ಬಲವಾಗಿ ಹೊಡೆದಿದ್ದಾರೆ. ಹಾಲಮ್ಮ ಕೆಳಗೆ ಬಿದ್ದಾಗ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಸ್ವಲ್ಪ ಸಮಯದ ನಂತರ ಚಹಾ ಕಾಸುತ್ತಿದ್ದ ಪಾತ್ರೆ ಕರಕಲು ವಾಸನೆ ಬರುತ್ತಿದ್ದುದು ಪಕ್ಕದ ಮನೆಯವರಿಗೆ ತಿಳಿದು, ವೃದ್ಧೆ ಮನೆಗೆ ಹೋಗಿ ನೋಡಿದಾಗ ಹಾಲಮ್ಮನ ಮೇಲೆ ಹಲ್ಲೆ ನಡೆದಿರುವುದು ಗೊತ್ತಾಗಿದೆ. ಕೂಡಲೇ ವೃದ್ಧೆಯನ್ನು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅವರ ಪುತ್ರಿ ಸವಿತ ಕೋಂ ತೀರ್ಥಲಿಂಗಪ್ಪಗೆ ದೂರವಾಣಿ ಮೂಲಕ ವಿಷಯ ತಿಳಿಸಲಾಯಿತು.
ಪುತ್ರಿಯು ಗಂಡನೊಂದಿಗೆ ಆಸ್ಪತ್ರೆಗೆ ಧಾವಿಸಿ, ತಾಯಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.ಎಸ್‌ಪಿ ಭೇಟಿ:
ಈ ಹಿನ್ನೆಲೆ ಮಂಗಳವಾರ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಚನ್ನಗಿರಿ ಎಎಸ್‌ಪಿ ಸ್ಯಾಮ್‌ವರ್ಗಿಸ್, ನ್ಯಾಮತಿ ಪಿಐ ರವಿ, ಹೊಳೆಬಸಪ್ಪ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.