ಸಾರಾಂಶ
- ಬ್ರೈಟ್ ಫ್ಯೂಚರ್ ಶಾಲೆಯಲ್ಲಿ ‘ಗ್ರಾಂಡ್ ಪೇರೆಂಟ್ಸ್ ಡೇ’
ಕನ್ನಡಪ್ರಭ ವಾರ್ತೆ, ಬೀರೂರುಅವಿಭಕ್ತ ಕುಟುಂಬಗಳು ಹಿಂದಿನ ಕಾಲದಿಂದಲೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಕಾಪಾಡಿಕೊಂಡು ಬಂದಿದ್ದು, ಇಂದಿನ ದಿನಗಳಲ್ಲಿ ನಗರೀಕರಣದ ಫಲವಾಗಿ ಕುಟುಂಬ ವ್ಯವಸ್ಥೆಯೇ ಏರುಪೇರಾಗಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ಆತಂಕ ವ್ಯಕ್ತಪಡಿಸಿದರು.ಬೀರೂರಿನಲ್ಲಿ ಈಚೆಗೆ ಬ್ರೈಟ್ ಫ್ಯೂಚರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ‘ಗ್ರಾಂಡ್ ಪೇರೆಂಟ್ಸ್ ಡೇ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮನೆಗಳಲ್ಲಿ ಇರುವ ಹಿರಿಯರ ಮೂಲಕ ಗಂಡಾಗಲಿ, ಹೆಣ್ಣಾಗಲಿ ತಮ್ಮ ಮಕ್ಕಳಿಗೆ ಪ್ರೀತಿ, ಮಾರ್ಗದರ್ಶನ ಕೊಡಿಸಲು ಮುಂದಾಗಬೇಕು. ಆ ಮೂಲಕ ಸಂಸ್ಕಾರಯುತ ಅಡಿಪಾಯವನ್ನು ಮಕ್ಕಳಿಗೆ ನೀಡಬೇಕು. ಅನಿವಾರ್ಯ ಸನ್ನಿವೇಶದಲ್ಲಿ ಪೋಷಕರು ದುಡಿಯುವ ಕಾರ್ಯಕ್ಕೆ ತೆರಳಿದರೆ ಮನೆಯಲ್ಲಿರುವ ವಯೋವೃದ್ಧರು ಮಕ್ಕಳಿಗೆ ವಾತ್ಸಲ್ಯ ನೀಡುತ್ತಾರೆ. ಚಟುವಟಿಕೆಗಳಿಂದ ಸ್ವಲ್ಪ ಮಟ್ಟಿಗೆ ದೂರವಿರುವ ಅವರಿಗೂ ಮಕ್ಕಳ ಪ್ರೇಮ ಲಭಿಸಿ ಒಂಟಿತನ ನೀಗುತ್ತದೆ, ಹಿರಿಯರನ್ನು ಗೌರವಿಸಬೇಕು ಎನ್ನುವ ಮನಸ್ಥಿತಿಯೂ ಬೆಳೆಯುತ್ತದೆ. ಕೇವಲ ಗಂಡ-ಹೆಂಡತಿ ಮಾತ್ರ ಇದ್ದರೆ ಮಕ್ಕಳು ಬಹುಶಃ ಅಜ್ಜಿ-ತಾತಂದಿರ ಪ್ರೀತಿಯಿಂದ ವಂಚಿತರಾಗುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳ ಮಾನಸಿಕ ಸಮತೋಲನಕ್ಕಾಗಿಯಾದರೂ ಹಿರಿಯ ಜೀವಗಳ ಸಾಂಗತ್ಯ ದೊರಕಿಸಿಕೊಡಿ ಎಂದು ಪೋಷಕರಿಗೆ ಸಲಹೆ ನೀಡಿದರು.ಕನ್ನಡ ಸಂಘದ ಕಾರ್ಯದರ್ಶಿ ಸಿ.ವಿ.ನಾಗೇಂದ್ರಶ್ರೇಷ್ಠಿ ಮಾತನಾಡಿದರು. ಶಾಲೆ ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಹಿರಿಯರಿಗೆ ಆಟೋಟ ಸ್ಪರ್ಧೆ ನಡೆಸಲಾಯಿತು. ಮಕ್ಕಳು, ಪೋಷಕರು, ಮತ್ತು ಕುಟುಂಬದ ಅಜ್ಜ, ಅಜ್ಜಿಯರು ಸಂತಸದಿಂದಲೇ ಭಾಗವಹಿಸಿದರು.ಈ ಸಂದರ್ಭದಲ್ಲಿ ಕನ್ನಡ ಸಂಘದ ಖಜಾಂಚಿ ಡಿ.ಆರ್.ರಮೇಶ್, ಪ್ರೌಢಶಾಲೆಯ ಮುಖ್ಯಶಿಕ್ಷಕ ತಮ್ಮಣ್ಣಪ್ಪ, ಸಬೀನಾಮೇರಿ, ಸಹ ಶಿಕ್ಷಕರಾದ ಆಲೀಸ್, ಅನುರಾಧ, ಸುನೀತಾ, ಜ್ಯೋತಿ, ಶೃತಿ ಭಾಗವಹಿಸಿದ್ದರು.9 ಬೀರೂರು 2ಬೀರೂರಿನ ಬ್ರೈಟ್ ಫ್ಯೂಚರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಈಚೆಗೆ ‘ಗ್ರಾಂಡ್ ಪೇರೆಂಟ್ಸ್ ಡೇ’ ಆಚರಿಸಲಾಯಿತು
;Resize=(128,128))
;Resize=(128,128))
;Resize=(128,128))