ಸುಂದರವಾದ ಮರದಲ್ಲಿ ಹೂವು, ಕಾಯಿ, ಹಣ್ಣುಗಳು ಇರಬೇಕಾದರೆ ಅದರ ಬೇರು ಗಟ್ಟಿಯಾಗಿರಬೇಕು. ಅಂತೆಯೇ ಸುಂದರ ಕುಟುಂಬದ ಭದ್ರತೆಗೆ ಆ ಮನೆಯಲ್ಲಿರುವ ಹಿರಿಯರು ಬೇರು ಇದ್ದಂತೆ ಎಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಮಲಿಂಗಪ್ಪ ಹೇಳಿದರು.

ಬೆಳ್ತಂಗಡಿ: ಸುಂದರವಾದ ಮರದಲ್ಲಿ ಹೂವು, ಕಾಯಿ, ಹಣ್ಣುಗಳು ಇರಬೇಕಾದರೆ ಅದರ ಬೇರು ಗಟ್ಟಿಯಾಗಿರಬೇಕು. ಅಂತೆಯೇ ಸುಂದರ ಕುಟುಂಬದ ಭದ್ರತೆಗೆ ಆ ಮನೆಯಲ್ಲಿರುವ ಹಿರಿಯರು ಬೇರು ಇದ್ದಂತೆ ಎಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಮಲಿಂಗಪ್ಪ ಹೇಳಿದರು.

ವಿಕಲಚೇತನರ ಮತ್ತು ಹಿರಿಯರ ನಾಗರಿಕರ ಸಬಲೀಕರಣ ಇಲಾಖೆ, ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬೆಳ್ತಂಗಡಿ ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಕೇಂದ್ರ ಸರಕಾರದ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ತಾಪಂ ಸಭಾಂಗಣದಲ್ಲಿ ಅವರು ಉದ್ಘಾಟಿಸಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅಧ್ಯಕ್ಷತೆ ವಹಿಸಿ ಮಾತುನಾಡಿ, ಹಿರಿಯ ನಾಗರಿಕರನ್ನು ಅವಕಾಶ ವಂಚಿತರನ್ನಾಗಿ ಮಾಡಿಸುವುದೂ ಕೂಡ ಅಪರಾಧವೇ ಆಗಿದೆ. ಕಾನೂನು ಮೀರುವವರಿಗೆ ಶಿಕ್ಷೆ ವಿಧಿಸಿದಾಗ ಅದರ ಪಾಲನೆ ಮಾಡುವ ಮಾನಸಿಕತೆ ಕೂಡ ಬೆಳೆಯಬೇಕಾಗುತ್ತದೆ. ಆ ಸಂಸ್ಕೃತಿಯನ್ನು ಈ ಸಮಾಜದಲ್ಲಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು.

ಕಂದಾಯ ನಿರೀಕ್ಷಕ ಕುಮಾರ ಸ್ವಾಮಿ, ತಾಲೂಕು ವಕೀಲರ ಸಂಘದ ಕೋಶಾಧಿಕಾರಿ ಮುಮ್ತಾಝ್ ಬೇಗಂ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಬಿ. ಜಿ.ಪಂ.ಮಾಜಿ ಸದಸ್ಯೆ ಹಾಗೂ ಸೌಭಾಗ್ಯ ವಿಕಲ ಚೇತನರ ಪತ್ತಿನ ಸಹಕಾರಿ ಸಂಘದ ಸಲಹಾ ಸಮಿತಿ ಸದಸ್ಯೆ ಸಿ.ಕೆ.ಚಂದ್ರಕಲಾ ಉಪಸ್ಥಿತರಿದ್ದರು.

ಹಿರಿಯ ವಕೀಲೆ ಸುಭಾಶಿನಿ ಆರ್, ಹಿರಿಯ ನಾಗರಿಕರಿಗೆ ಕಾನೂನು ಮಾಹಿತಿ. ತಾಲೂಕು ವಿಕಲಚೇತನರ ಮೇಲ್ವಿಚಾರಕ ಜೋನ್ ಬ್ಯಾಪ್ಟಿಸ್ ಡಿಸೋಜ ಸರಕಾರದ ಯೋಜನೆಗಳ ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತ ಇಂದಬೆಟ್ಟು ಗ್ರಾಮದ ಪಿ.ಡಿ.ರೋಕಿ ಮತ್ತು 47 ವರ್ಷಗಳಿಂದ ಬೆಳ್ತಂಗಡಿ ಲಯನ್ಸ್ ಕ್ಲಬ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ರಾಮಕೃಷ್ಣ ಗೌಡ ಅವರನ್ನು ಗೌರವಿಸಲಾಯಿತು.

ಇಂದಬೆಟ್ಟು ಗ್ರಾ.ಪಂ.ವಿ.ಆರ್.ಡಬ್ಲ್ಯು. ಎಂ.ಜೆ. ಜೋಸೆಫ್ ಸ್ವಾಗತಿಸಿದರು. ನಿಡ್ಲೆ ವಿಆರ್ ಡಬ್ಲ್ಯು ಹೇಮಲತಾ ಪ್ರಾರ್ಥಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿ ಕುಂಞ ನಿರೂಪಿಸಿದರು. ಬೆಳಾಲು ಗ್ರಾ.ಪಂ. ವಿ.ಆರ್.ಡಬ್ಲ್ಯು. ಈರಣ್ಣ ವಂದಿಸಿದರು.ಮಕ್ಕಳಿಗೆ ಸರಕಾರಿ ನೌಕರಿ ದೊರೆತರೆ ಅವರ ಹೆತ್ತವರಿಗೆ ದೊರೆಯುತ್ತಿದ್ದ ಹಿರಿಯ ನಾಗರಿಕರ ಪಿಂಚಣಿ ಸ್ಥಗಿತಗೊಳಿಸುವ ನೀತಿ ಬದಲಾಗಬೇಕಿದೆ. ಯಾಕೆಂದರೆ ಸರಕಾರದಿಂದ ಸಿಗುವ ಪಿಂಚಣಿಯಿಂದ ಅವರ ಉದ್ದೇಶ ಎಲ್ಲವೂ ಈಡೇರುತ್ತದೆ ಎಂಬುದಲ್ಲ ಆದರೆ ಅವರಿಗೆ ಒಂದು ಭರವಸೆ ಲಭಿಸುತ್ತದೆ ಎಂಬುದನ್ನು ಮನಗಾಣಬೇಕು.-ರಾಮಲಿಂಗಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ