ಸಾರಾಂಶ
- ಲಿಂ. ಶಿವಾಚಾರ್ಯರತ್ನ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ 90ನೇ ಜನ್ಮದಿನ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕೈಗೊಂಡ ಸತ್ಕಾರ್ಯಗಳು ಸತ್ಯಸಂಕಲ್ಪಗಳಾಗಿದ್ದವು. ಇದರಿಂದಾಗಿ ಅವರು ರೂಪಿಸಿದ ಎಲ್ಲ ಸಂಕಲ್ಪಗಳು ಈಡೇರಿದವು. ಅಂದಿನ ಕಾಲದಲ್ಲಿ ಜ್ಞಾನದ ಕೊರತೆ ಇದ್ದುದನ್ನು ಮನಗಂಡು ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠ ಸ್ಥಾಪಿಸಿ, ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡಮಕ್ಕಳ ಭವಿಷ್ಯ ದಾರಿಗೆ ಜ್ಞಾನದ ದೀಪ್ತಿಯಾದರು ಎಂದು ಹಿರೇಕಲ್ಮಠದ ಹಾಲಿ ಪಟ್ಟಾಧ್ಯಕ್ಷರಾದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಶ್ರೀ ಹಳದಮ್ಮ ದೇವಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಹಿರೇಕಲ್ಮಠದ ಪಟ್ಟಾಧ್ಯಕ್ಷರಾಗಿದ್ದ ಲಿಂ. ಶಿವಾಚಾರ್ಯರತ್ನ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 90ನೇ ಜನ್ಮದಿನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಲಿಂ. ಶ್ರೀಗಳು ಕೇವಲ ಮಧ್ಯ ಕರ್ನಾಟಕಕ್ಕಷ್ಟೇ ಹೆಸರಾಗಿರದೇ, ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿಯು ತಮ್ಮ ಅನುಪಮ ಸೇವೆಯಿಂದ ಬಹುದೊಡ್ಡ ಹೆಸರು ಗಳಿಸಿದ್ದರು. ಇಚ್ಛಾಶಕ್ತಿ ಹೊಂದಿದ್ದರೆ ಕಠಿಣ ಕೆಲಸವನ್ನಾದರೂ ಸುಲಭವಾಗಿ ಮಾಡಬಹುದು ಎನ್ನುವುದಕ್ಕೆ ಲಿಂ.ಒಡೆಯರ್ ಚಂದ್ರಶೇಖರ ಶ್ರೀ ನಿದರ್ಶನವಾಗಿದ್ದರು. ಇದರ ಫಲವಾಗಿಯೇ ರಾಜ್ಯದ ಎಲ್ಲ ಪೀಠಾಚಾರ್ಯರಿಂದ ಶಿವಾಚಾರ್ಯರತ್ನ ಎಂಬ ಪ್ರಶಸ್ತಿ ಅವರಿಗೆ ಲಭಿಸಿತ್ತು ಎಂದು ವ್ಯಾಖ್ಯಾನಿಸಿದರು.ಲಿಂ.ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವು ಸಾಗಬೇಕಿದೆ. ಮಠದ ವತಿಯಿಂದ 100 ಹಾಸಿಗೆಗಳ ಹೈಟೆಕ್ ಆಸ್ಪತ್ರೆ, ಕೃಷಿ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮಹಾದಾಸೆ ನಾವು ಹೊಂದಿದ್ದೇವೆ. ಇದಕ್ಕೆ ಲಿಂ.ಶ್ರೀಗಳ ಆಶೀರ್ವಾದ ಹಾಗೂ ಭಕ್ತರ ಸಹಕಾರ ಅಗತ್ಯ ಇದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಎಂ.ಪಿ.ಎಂ. ವಿಜಯಾನಂದ ಸ್ವಾಮಿ, ಎಚ್.ಆರ್. ಬಸವರಾಜಪ್ಪ, ಪಶು ವೈದ್ಯಾಧಿಕಾರಿ ಡಾ.ವಿಶ್ವನಟೇಶ್ ಮಾತನಾಡಿದರು.ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕ ಚನ್ನವೀರಪ್ಪಗೌಡ, ಮುಖಂಡರಾದ ಕೋರಿ ಗುರುಲಿಂಗಪ್ಪ, ತಗ್ಗೀಹಳ್ಳಿ ದಾನಪ್ಪ, ಹೇಮಲತಾ, ಮುಖ್ಯೋಪಾಧ್ಯಾಯ ಮಂಜಾನಾಯ್ಕ, ಸುನಂದ, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.
ಪುರಸಭೆ ಸದಸ್ಯ ಸುರೇಶ್ ಹೊಸಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕತ್ತಿಗೆ ನಾಗರಾಜ್ ನಿರೂಪಿಸಿದರು. ವಿದ್ಯಾ ಸಂತೋಷ್ ವಂದಿಸಿದರು.- - -
-1ಎಚ್.ಎಲ್.ಐ2.ಜೆಪಿಜಿ:ಸಮಾರಂಭದದಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮಿಜಿ ಆಶೀರ್ಚನ ನೀಡಿದರು.