ಸಾರಾಂಶ
ಮಲ್ಲಿಕಾರ್ಜುನ್ ಸರ್ಕಾರಿ ಸೇವೆಯಲ್ಲಿದ್ದರೂ ತಾನು ಹುಟ್ಟಿದ ನೆಲದ ಜನರ ಕಷ್ಟ- ಸುಖಗಳಿಗೆ ಧ್ವನಿಯಾಗಿದ್ದಾರೆ. ಸರ್ಕಾರಿ ಸೇವೆ ಮತ್ತು ಸಾಮಾಜಿಕ ಸೇವೆಗಳನ್ನು ಸರಿದೂಗಿಸಿಕೊಂಡ ತಾಲೂಕಿನ ಬಡವರ ಕಷ್ಟ- ಕಾರ್ಪಣ್ಯಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಆರ್.ಟಿ.ಒ ಅಧಿಕಾರಿ ಮಲ್ಲಿಕಾರ್ಜುನ್ ಅವರಿಗೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಮತ್ತು ಮುಖಂಡರು ಅಭಿನಂದನೆ ಸಲ್ಲಿಸಿದರು.ಪಟ್ಟಣದ ಜಯನಗರ ಬಡಾವಣೆಯ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಕಚೇರಿಯಲ್ಲಿ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಶ್ರೀಗಳ ಪಾದಪೂಜೆ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಮಲ್ಲಿಕಾರ್ಜುನ್ ಸರ್ಕಾರಿ ಸೇವೆಯಲ್ಲಿದ್ದರೂ ತಾನು ಹುಟ್ಟಿದ ನೆಲದ ಜನರ ಕಷ್ಟ- ಸುಖಗಳಿಗೆ ಧ್ವನಿಯಾಗಿದ್ದಾರೆ. ಸರ್ಕಾರಿ ಸೇವೆ ಮತ್ತು ಸಾಮಾಜಿಕ ಸೇವೆಗಳನ್ನು ಸರಿದೂಗಿಸಿಕೊಂಡ ತಾಲೂಕಿನ ಬಡವರ ಕಷ್ಟ- ಕಾರ್ಪಣ್ಯಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಜಿಲ್ಲಾ ಜನ ಜಾಗೃತಿ ಸಮಿತಿಸದಸ್ಯರಾಗಿ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ್ ದೇವಾಲಯಗಳ ಜೀರ್ಣೋದ್ಧಾರ, ಕ್ರೀಡಾ ಚಟುವಟಿಕೆಗಳು, ರಂಗಭೂಮಿ ಚಟುವಟಿಕೆಗಳು, ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ಮುಂತಾದ ಸಹಾಯ ಮಾಡುತ್ತಾ ಕ್ಷೇತ್ರದ ಜನರ ಆಶಾಕಿರಣವಾಗಿದ್ದಾರೆ ಎಂದು ತಿಳಿಸಿದರು.
ಗಂಗಾಧರ ಶಿವಾಚಾರ್ಯ ಶ್ರೀಗಳು, ಮುಖಂಡರಾದ ಬೂಕನಕೆರೆ ವೆಂಕಟೇಶ್, ಗುಡುಗನಹಳ್ಳಿ ರಾಯಪ್ಪ, ಆಲಂಬಾಡಿ ಕಾವಲು ಜಯರಾಂ, ತಾಲೂಕು ಪರಿಶಿಷ್ಟ ಜಾತಿ, ಪಂಗಡದ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯೋಗೇಶ್, ಆದಿಹಳ್ಳಿ ಮೀನಾಕ್ಷಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್, ಕೆ.ಆರ್.ನೀಲಕಂಠ ಮತ್ತಿತರರು ಅಭಿನಂದನಾ ಭಾಷಣ ಮಾಡಿದರು. ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕ ಸಂಘಟನೆಗಳ ಸದಸ್ಯರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))