ಕೊಪ್ಪ ಗ್ರಾಪಂ ಅಧ್ಯಕ್ಷೆಯಾಗಿ ಗೀತಾ ಆಯ್ಕೆ

| Published : Dec 19 2024, 12:33 AM IST

ಸಾರಾಂಶ

. ಇವರ ಪ್ರತಿಸ್ಪರ್ಧಿ ಸಿಂಧು ಅವರಿಗೆ 8 ಮತ ಬಂದಿವೆ. ಕುಲಗೆಟ್ಟ ಮತ ಎರಡು ಆಗಿವೆ, ಅತಿ ಹೆಚ್ಚು ಮತ ಪಡೆದ ಗೀತಾ ಗುರು ಬಸಪ್ಪ ಕೊಪ್ಪ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬೆಟ್ಟದಪುರಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಪಂ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಗೀತಾ ಗುರುಬಸಪ್ಪ ಹೆಚ್ಚು ಮತ ಪಡೆದು ಬುಧವಾರ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಂ.ಆರ್. ವೆಂಕಟೇಶ್ ಮಾತನಾಡಿ, ಕೊಪ್ಪ ಗ್ರಾಪಂಗೆ ಒಟ್ಟು ಸದಸ್ಯರ ಬಲ 24 ಹೊಂದಿದ್ದು, ಗೀತಾ ಗುರುಬಸಪ್ಪ ಅವರಿಗೆ 14 ಮತ ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಸಿಂಧು ಅವರಿಗೆ 8 ಮತ ಬಂದಿವೆ. ಕುಲಗೆಟ್ಟ ಮತ ಎರಡು ಆಗಿವೆ, ಅತಿ ಹೆಚ್ಚು ಮತ ಪಡೆದ ಗೀತಾ ಗುರು ಬಸಪ್ಪ ಕೊಪ್ಪ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಘೋಷಿಸಿದರು.

ತಾಲೂಕು ಆಶ್ರಯ ಸಮಿತಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತಿನ್ ಕೆ. ವೆಂಕಟೇಶ್, ಪಿಡಿಓ ಸತೀಶ್, ಕಾರ್ಯದರ್ಶಿ ಮಹದೇವ್, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಹಮದ್ ಜಾನ್ ಬಾಬು, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ತಾಲೂಕು ಉಪಾಧ್ಯಕ್ಷ ಶೇಕ್ ಅಸ್ಲಾಂ, ಮುಖಂಡರಾದ ಕೆ.ಎಸ್. ಕಲ್ಯಾಣಪ್ಪ, ಶಿವಪ್ಪ, ಶೇಖರ್, ಬಸವರಾಜು, ಪರ್ವಣ, ಪ್ರಭು, ಮುಕ್ಬುಲ್, ಧನರಾಜ್, ಸಣ್ಣಪ್ಪ, ಶಿವಪ್ಪ, ಯಶವಂತ್ ಕುಮಾರ್, ಗ್ರಾಪಂ ಸದಸ್ಯರಾದ ಕೆ.ಕೆ. ನಾರಾಯಣ, ಕೆ.ಎಸ್. ಬಸವರಾಜು, ಕೃಷ್ಣ, ಶೋಭಾ, ಹರಿಣಿ, ರಾಜಪ್ಪ, ಸೈಯದ್ ರಿಯಾಜ್, ಶಾಂತಮ್ಮ, ದ್ರಾಕ್ಷಾಯಿಣಿ, ಜಾಫರ್ ಸಾಧಿಕ್, ಸಂಶುದ್ದೀನ್, ಪೂರ್ಣಿಮಾ, ರೇಣುಕಸ್ವಾಮಿ, ಶೀಲಾ, ರಾಮಚಂದ್ರ, ಸಾವಿತ್ರಿ, ಸುರೇಶ್ ಇದ್ದರು.