ಚುನಾವಣೆ: 102 ನಾಕಾ ಬಂದಿ, ಚೆಕ್‌ಪೋಸ್ಟ್‌ಗಳಲ್ಲಿ ಕ್ಯಾಮೆರಾ ಅಳವಡಿಕೆ

| Published : Mar 20 2024, 01:21 AM IST

ಚುನಾವಣೆ: 102 ನಾಕಾ ಬಂದಿ, ಚೆಕ್‌ಪೋಸ್ಟ್‌ಗಳಲ್ಲಿ ಕ್ಯಾಮೆರಾ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಅಕ್ರಮ ತಡೆಯುವ ಉದ್ದೇಶದಿಂದ ನಗರ ವ್ಯಾಪ್ತಿ 102 ಕಡೆ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳ ಮೇಲೆ ನಿಗಾವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಯಲ್ಲಿ ಅಕ್ರಮ ತಡೆಯುವ ಉದ್ದೇಶದಿಂದ ನಗರ ವ್ಯಾಪ್ತಿ 102 ಕಡೆ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳ ಮೇಲೆ ನಿಗಾವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಘೋಷಣೆಯಾದ ದಿನದಿಂದಲೇ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇವು ದಿನದ 24 ತಾಸುಗಳು ಕೆಲಸ ಮಾಡುತ್ತವೆ ಎಂದರು.

ಈ ಚೆಕ್‌ ಪೋಸ್ಟ್‌ಗಳಿಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಾರೆ. ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.

ಶಸ್ತ್ರಾಸ್ತ್ರ ಠೇವಣಿ ಇಡಬೇಕು:

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರವಾನಗಿ ಹೊಂದಿರುವ ಶಸ್ತ್ರಗಳನ್ನು ಸಂಬಂಧಪಟ್ಟ ಠಾಣೆಗಳಲ್ಲಿ ಠೇವಣಿ ಇಡುವಂತೆ ನಗರ ಪೊಲೀಸ್ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಸ್ಥಳೀಯ ಠಾಣೆಗಳಲ್ಲಿ ಶಸ್ತ್ರಗಳನ್ನು ಠೇವಣಿ ಮಾಡಿದ ಪರವಾನಗಿದಾರರು ಜೂ.11ರ ನಂತರ ಠಾಣಾಧಿಕಾರಿಗಳನ್ನು ಭೇಟಿಯಾಗಿ ತಮ್ಮ ಶಸ್ತ್ರಗಳನ್ನು ಹಿಂಪಡೆದು ಸ್ವೀಕೃತಿಯನ್ನು ನೀಡಬೇಕು ಎಂದು ತಿಳಿಸಿದರು.

ಇವರಿಗೆ ವಿನಾಯತಿ:

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ (ಬ್ಯಾಂಕ್ ಹಾಗೂ ಸೆಕ್ಯೂರಿಟಿ ಏಜೆನ್ಸಿಗಳು) ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪತ್ರಾಂಕಿತ ವರ್ಗ-1ರ ಅಧಿಕಾರಿಗಳು, ಕೊಡವ ಸಮಾಜ ಹಾಗೂ ನ್ಯಾಷನಲ್ ರೈಫಲ್ಸ್‌ ಆಸೋಸಿಯೇಷನ್ಸ್ ಸದಸ್ಯರಿಗೆ ಶಸ್ತ್ರಗಳ ಠೇವಣಿಯಿಂದ ವಿನಾಯತಿ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ವಿನಾಯತಿಗೆ ಡಿಸಿಪಿ ಸಂಪರ್ಕಿಸಿ:

ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಶಸ್ತ್ರ ಠೇವಣಿಯಿಂದ ವಿನಾಯತಿ ಕೋರಿ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ. ತಮ್ಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ)ರವರ ಕಚೇರಿಯಲ್ಲಿ ಮಾ.25ರ ಒಳಗೆ ವಿನಾಯಿತಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳನ್ನು ಪರಿಶೀಲಿಸಿ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ಮಾ.26ರೊಳಗೆ ಆಯುಕ್ತರ ಕಚೇರಿಯಲ್ಲಿರುವ ಪರಿಶೀಲನಾ ಸಮಿತಿಗೆ ಉಪ ಪೊಲೀಸ್ ಆಯುಕ್ತರು ಸಲ್ಲಿಸಬೇಕು ಎಂದು ತಿಳಿಸಿದರು.ಎಲ್ಲೆಲ್ಲಿ ಚೆಕ್ ಪೋಸ್ಟ್‌ಗಳುವಿಭಾಗಅಂತರ್ ಜಿಲ್ಲೆಜಿಲ್ಲೆಯೊಳಗೆ ಒಟ್ಟು

ಕೇಂದ್ರ01616

ಪೂರ್ವ2810

ಉತ್ತರ32427

ಈಶಾನ್ಯ21012

ದಕ್ಷಿಣ178

ಆಗ್ನೇಯ2810

ಪಶ್ಚಿಮ3912

ವೈಟ್‌ಫೀಲ್ಡ್‌257

ಒಟ್ಟು1587102