ಸಾರಾಂಶ
ರಾಮನಗರ: ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಬ್ರೇಕ್ ಬಿದ್ದಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಏಪ್ರಿಲ್ 26ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವೂ ಸೇರಿದೆ. ಚುನಾವಣೆಗೆ 40 ದಿನಗಳಷ್ಟೇ ಬಾಕಿ ಉಳಿದಿರುವುದು ರಾಜಕೀಯ ನಾಯಕರು ಮಾತ್ರವಲ್ಲದೆ ಕಾರ್ಯಕರ್ತರಿಗೂ ಸವಾಲಿನ ಪರಿಸ್ಥಿತಿ ಎದುರಾಗಿದೆ.ಕ್ಷೇತ್ರ ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದ ಪ್ರಮುಖ ನಾಯಕರು ಹಾಗೂ ಅವರ ಬೆಂಬಲಿಗರು ಗೂಡಿಗೆ ಮರಳುತ್ತಿದ್ದಾರೆ. ಎಲ್ಲೆಡೆ ಚುನಾವಣೆ ಬಗ್ಗೆ ಚರ್ಚೆ ಆರಂಭವಾಗಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಿದೆ.
ಕಳೆದ ಒಂದು ತಿಂಗಳಿಂದಲೇ ಜಿಲ್ಲೆಯಲ್ಲಿ ರಾಜಕೀಯ ನಾಯಕರು ಹಾಗೂ ಆಕಾಂಕ್ಷಿತ ಅಭ್ಯರ್ಥಿಗಳ ಓಡಾಟ, ಒಬ್ಬರ ಮೇಲೊಬ್ಬರ ವಾಗ್ದಾಳಿ, ಕೆಸರೆರಚಾಟ ಆರಂಭವಾಗಿದೆಯಾದರೂ ಇದೀಗ ಅದಕ್ಕೆಲ್ಲ ಅಧಿಕೃತವಾಗಿ ವೇದಿಕೆ ಹಾಗೂ ಸಮಯ ಸಿಕ್ಕಂತಾಗಿದೆ.ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ - ಜೆಡಿಎಸ್ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆಗಳು ಕಾಣಿಸಿಕೊಂಡಿದೆ. ಭಣಭಣ ಎನ್ನುತ್ತಿದ್ದ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಸಾಕಷ್ಟು ಲವಲವಿಕೆ ಕಂಡು ಬಂದಿದೆ. ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿರುವುದರಿಂದ ಬೆಂಬಲಿಗರು ಚುನಾವಣೆ ಗೆಲುವಿನ ಲೆಕ್ಕಚಾರದಲ್ಲಿ ತೊಡಗಿದ್ದಾರೆ.
ಡಿ.ಕೆ.ಸುರೇಶ್ - ಮಂಜುನಾಥ್ ಮುಖಾಮುಖಿ :ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಾ.ಸಿ.ಎನ್ .ಮಂಜುನಾಥ್ ಸ್ಪರ್ಧೆ ಮಾಡುವುದು ಅಂತಿಮಗೊಂಡಿದೆ. ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ)ಯಿಂದ ಡಾ.ಚಿನ್ನಪ್ಪ ಚಿಕ್ಕ ಹಾಗಡೆ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರವರ ಅಳಿಯ ಡಾ.ಸಿ.ಎನ್ .ಮಂಜುನಾಥ್ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ನಡುವಿನ ಕದನದಿಂದಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಅಖಾಡವಾಗಲಿದೆ. ಈಗಾಗಲೇ ಪರಸ್ಪರ ರಾಜಕೀಯ ರಾಡಿ ಎರೆಚಾಟ ಪ್ರಾರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರು ಏಟು ಎದಿರೇಟು ನೀಡುವಂತೆ ಪೋಸ್ಟ್ ವಾರ್ ನಲ್ಲಿ ತೊಡಗಿದ್ದಾರೆ.ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬಗಳ ನಡುವೆಯೇ ನಾಲ್ಕು ಚುನಾವಣೆಗಳು ನಡೆದಿವೆ. ಕಡು ವೈರಿಗಳಂತೆ ಕಾದಾಡಿರುವ ಉಭಯ ನಾಯಕರು ಕೆಲವೊಮ್ಮೆ ಒಬ್ಬರನ್ನೊಬ್ಬರು ಬೆಂಬಲಿಸಿದ ಉದಾಹರಣೆಗಳು ಇವೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಾಗಿರುವ ಸೋಲಿನ ಸೇಡಿಗೆ ಜೆಡಿಎಸ್ ಪ್ರತೀಕಾರಕ್ಕೆ ಹವಣಿಸುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.
ಮತದಾರರನ್ನು ಸೆಳೆಯುವ ಪ್ರಯತ್ನ :ಆಡಳಿತ ರೂಢ ಕಾಂಗ್ರೆಸ್ ಪಕ್ಷ ತನ್ನ ಸರ್ಕಾರದ ಸಾಧನೆಗಳು - ಗ್ಯಾರಂಟಿಗಳ ಮೂಲಕ ಮತದಾರರನ್ನು ಸೆಳೆಯಲು ಸಿದ್ಧತೆ ನಡೆಸುತ್ತಿದೆ. ಬಿಜೆಪಿ - ಜೆಡಿಎಸ್ ಮೈತ್ರಿಕೂಟ ಎನ್ ಡಿಎ ಹಾಗೂ ತಮ್ಮ ಪಕ್ಷಗಳ ಅಧಿಕಾರವಧಿಯಲ್ಲಿ ಸಾಧನೆಗಳನ್ನು ಮುಂದಿಟ್ಟು ಮತದಾರರ ಮನಗೆಲ್ಲಲು ರಣತಂತ್ರ ರೂಪಿಸುತ್ತಿದೆ.
ಇದುವರೆಗೂ ಚುನಾವಣೆ ಆಯೋಗ ಯಾವಾಗ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ ಎನ್ನುವ ಬಗ್ಗೆ ಜನರು ಕಾತರದಿಂದ ಕಾಯುತ್ತಿದ್ದರು. ಇದೀಗ ಆಯೋಗ ದಿನಾಂಕ ಪ್ರಕಟಿಸಿದ್ದು ರಾಜಕೀಯ ಲೆಕ್ಕಚಾರಗಳು ಒಂದಡೆ ತೀವ್ರಗೊಂಡಿವೆ. ಜತೆಗೆ ಜಿಲ್ಲಾಡಳಿತ ಚುನಾವಣೆಗಳನ್ನು ಶಾಂತಿಯುತವಾಗಿ ನಡೆಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಜರುಗಿಸುವತ್ತ ಚಿತ್ತ ಹರಿಸಿದೆ.ಬಾಕ್ಸ್ ............ಸಾಧನೆಯ ಫ್ಲೆಕ್ಸ್ ಗಳ ತೆರವು:
ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರ್ಕಾರದ ಸಾಧನೆಯನ್ನು ಬಿಂಬಿಸುವ ಫ್ಲೆಕ್ಸ್ , ಬೋರ್ಡ್, ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಚುನಾವಣೆ ಆಯೋಗ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವುಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.ರಾಮನಗರ, ಕನಕಪುರ, ಮಾಗಡಿ ಹಾಗೂ ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಸಾಧನೆಯನ್ನು ಬಿಂಬಿಸುವ ಫ್ಲೆಕ್ಸ್ , , ಬೋರ್ಡ್, ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯಗಳನ್ನು ಆಯಾಯ ಸ್ಥಳೀಯ ಸಂಸ್ಥೆಗಳ ವತಿಯಿಂದ ನಡೆಸಲಾಯಿತು.ಬಾಕ್ಸ್........
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮತದಾರರ ವಿವರವಿಧಾನಸಭಾ ಕ್ಷೇತ್.ಪುರುಷರ.
ಮಹಿಳೆಯರ.ಇತರ.
ಒಟ್ಟುಮಾಗಡ.
1,15,50.1,17,57.
2.2,33,104
ರಾಮನಗ.1,06,68.
1,10,79.1.
2,17,498ಕನಕಪು.
1,11,76.1,15,70.
0.2,27,481
ಚನ್ನಪಟ್ಟ.1,10,42.
1,18,33.0.
2,28,768ಕುಣಿಗಲ.
1,00,06.99,96.
0.2,00,029
ರಾಜರಾಜೇಶ್ವರ.2,52,64.
2,38,34.8.
4,91,069ಬೆಂಗಳೂರು ದಕ್ಷಿ.
3,76,91.3,40,18.
10.7,17,201
ಆನೇಕಲ.2,14,72.
1,96,59.8.
4,11,409ಒಟ್ಟ.
13,88,73.13,37,50.
32.27,26,559
16ಕೆಆರ್ ಎಂಎನ್ 9,10.ಜೆಪಿಜಿ9.ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಫ್ಲೆಕ್ಸ್ ಗಳನ್ನು ತೆರವು ಮಾಡುತ್ತಿರುವುದು.
10.ರಾಜಕೀಯ ಪಕ್ಷಗಳ ಪೋಸ್ಟರ್ ಹಾಗೂ ಗೋಡೆ ಬರಹ ತೆರವು ಮಾಡುತ್ತಿರುವುದು.