ಸಾರಾಂಶ
ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಈ. ಜಯೇಂದ್ರ ಹಾಗೂ ನಿರ್ದೇಶಕರಾದ ಕೆ. ಆರ್. ಶಿವಕುಮಾರ್ ಮತ್ತು ಅನಿತಾ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಈ. ಜಯೇಂದ್ರ ಹಾಗೂ ನಿರ್ದೇಶಕರಾದ ಕೆ.ಆರ್. ಶಿವಕುಮಾರ್ ಮತ್ತು ಅನಿತಾ ಇವರನ್ನು ಅಂಬೇಡ್ಕರ್ ಭವನದಲ್ಲಿ ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಯು. ಲವಕುಶ, ಕಾರ್ಯದರ್ಶಿ ಬಿ.ಸಿ. ಜಗದೀಶ್, ಮಾನವತಾ ಯುವಕ ಸಂಘದ ಅಧ್ಯಕ್ಷ ಬಿ.ಕೆ. ನವೀನ್ ಕುಮಾರ, ಪ್ರಮುಖರಾದ ಬಿ.ಬಿ. ಆನಂದ, ಬಿ.ವಿ. ರಾಜು, ಬಿ.ಆರ್. ಯೋಗೇಶ, ಬಿ.ಕೆ. ದೇವರಾಜ್ ಹಾಗೂ ಬಿ.ಆರ್. ಧರ್ಮೇಂದ್ರ ಇದ್ದರು.