ಕೊಡಗಿಗೆ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ದೀಪ್ ಮಾಲಾ, ತಂಡ ಭೇಟಿ

| Published : Sep 03 2025, 01:02 AM IST

ಕೊಡಗಿಗೆ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ದೀಪ್ ಮಾಲಾ, ತಂಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ದೀಪ್‌ ಮಾಲಾ ನೇತೃತ್ವದ ತಂಡವು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ದೀಪ್ ಮಾಲಾ ನೇತೃತ್ವದ ತಂಡವು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ತಂಡವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಿದರು.

ತಂಡದಲ್ಲಿ ದೀಪ್ ಮಾಲಾ (ಅಧೀನ ಕಾರ್ಯದರ್ಶಿ), ಸಹಾಯಕ ವಿಭಾಗಾಧಿಕಾರಿಗಳಾದ ಜ್ಯೋತ್ಸಾನಾ ಮಿಗ್ಲಾನಿ, ಶುಭಮ್ ಮಿಶ್ರಾ (ಎಸ್‍ಒ) ಪ್ರಿನ್ಸ್ ರೈ (ಪಿಎಸ್), ಜಾವೇದ್ ಖಾನ್ (ಎಎಸ್‍ಒ), ಅಂಕುರ್ ಮಲಿಕ್(ಎಎಸ್‍ಒ), ಪ್ರದೀಪ್ ಕೌರ್ (ಎಸ್‍ಎಸ್‍ಒ), ಆಯುಷಿ ನಾಯಕ್(ಎಎಸ್‍ಒ) ಮತ್ತು ಮೊಹಮ್ಮದ್ ಅರ್ಷದ್(ಜೆಎಸ್‍ಎ) ಎಂಬ 9 ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಅವರು ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.

"ಭಾರತದ ವಿಶಿಷ್ಟ/ ದೂರಸ್ಥ ಮತಗಟ್ಟೆಗಳಿಗೆ ಭೇಟಿ ನೀಡುವುದು " ಎಂಬ ಈ ಉಪಕ್ರಮವು ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವುದರೊಂದಿಗೆ ಸವಾಲಿನ ಭೌಗೋಳಿಕ ಪ್ರದೇಶಗಳಲ್ಲಿ ಪ್ರಜಾಪ್ರಭುತ್ವ ಭಾಗವಹಿಸುವಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಈ ಸಂಘಟಿತ ಪ್ರಯತ್ನವು, ಭೌಗೋಳಿಕ ಸ್ಥಳವನ್ನು ಲೆಕ್ಕಿಸದೆ, ಎಲ್ಲಾ ನಾಗರಿಕರಿಗೂ ಸಮಗ್ರ ಮತ್ತು ಪ್ರವೇಶಿಸಬಹುದಾದ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವ ಇಸಿಐನ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ವಿವರಿಸಿದರು.

ಕಾರುಗುಂದ ಮತ್ತು ಕುಂದಚೇರಿ ಹಾಗೂ ಕೋಪಟ್ಟಿ ಮತಗಟ್ಟೆಗಳಿಗೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಇತರರು ಇದ್ದರು.