ಮನ್ಮುಲ್ ನಿರ್ದೇಶಕ ಸ್ಥಾನಗಳಿಗೆ ಫೆ.2ರಂದು ಚುನಾವಣೆ

| Published : Jan 24 2025, 12:47 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನಿಂದ ಹಾಲಿ ಅಧ್ಯಕ್ಷ ಬೋರೇಗೌಡ, ಕೆ.ಆರ್.ಪೇಟೆ ತಾಲೂಕಿನಿಂದ ಹಾಲಿ ನಿರ್ದೇಶಕ ಡಾಲು ರವಿ, ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಮಳವಳ್ಳಿ ತಾಲೂಕಿನಿಂದ ಕೆಎಂಎಫ್ ನಿರ್ದೇಶಕ ಹಾಗೂ ಮನ್ಮುಲ್ ನಿರ್ದೇಶಕ ವಿ.ಎಂ. ವಿಶ್ವನಾಥ್ ಹಾಗೂ ಮಂಡ್ಯ ತಾಲೂಕಿನಿಂದ ಬಿ.ಚಂದ್ರು ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಹಾಲಿ ಮಾಜಿ ಅಧ್ಯಕ್ಷರು, ನಿರ್ದೇಶಕರು ನಾಮಪತ್ರ ಸಲ್ಲಿಸಿದರು.

ಶ್ರೀರಂಗಪಟ್ಟಣ ತಾಲೂಕಿನಿಂದ ಹಾಲಿ ಅಧ್ಯಕ್ಷ ಬೋರೇಗೌಡ, ಕೆ.ಆರ್.ಪೇಟೆ ತಾಲೂಕಿನಿಂದ ಹಾಲಿ ನಿರ್ದೇಶಕ ಡಾಲು ರವಿ, ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಮಳವಳ್ಳಿ ತಾಲೂಕಿನಿಂದ ಕೆಎಂಎಫ್ ನಿರ್ದೇಶಕ ಹಾಗೂ ಮನ್ಮುಲ್ ನಿರ್ದೇಶಕ ವಿ.ಎಂ. ವಿಶ್ವನಾಥ್ ಹಾಗೂ ಮಂಡ್ಯ ತಾಲೂಕಿನಿಂದ ಬಿ.ಚಂದ್ರು ನಾಮಪತ್ರ ಸಲ್ಲಿಸಿದರು.

ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಮುಂದಿನ 5 ವರ್ಷಗಳ ಅವಧಿಗೆ ಫೆ.2 ರಂದು ಚುನಾವಣೆ ನಡೆಯಲಿದ್ದು, ಜ.25 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಜ.27ರಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ.

ಫೆ.2ರಂದು ಭಾನುವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮಂಡ್ಯದ ಮೈಷಗರ್ ಪ್ರೌಢಶಾಲೆದಲ್ಲಿ ಮತದಾನ ನಡೆಯಲಿದೆ. ಮತದಾನ ಬಳಿಕ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಅಂದೇ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಚುನಾವಣಾಕಾರಿಯೂ ಆದ ಅಪರ ಜಿಲ್ಲಾಕಾರಿ ಬಿ.ಸಿ. ಶಿವಾನಂದ ಮೂರ್ತಿ ತಿಳಿಸಿದರು.