ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರಸಭೆಯ ೨ನೇ ಅವಧಿ ಅಧ್ಯಕ್ಷರಾಗಿ ಜಗನ್ನಾಥ್ ಮತ್ತು ಉಪಾಧ್ಯಕ್ಷೆಯಾಗಿ ರಾಣಿಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನವಣಾಧಿಕಾರಿಯೂ ಆದ ಜಿಲ್ಲಾ ಉಪ ವಿಭಾಗಾಧಿಕಾರಿ ಅಶ್ವಿನ್ ಘೋಷಿಸಿದರು.ಉನ್ನತ ಶಿಕ್ಷಣ ಮತ್ತು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ಕಾಂಗ್ರೆಸ್ ಒಗ್ಗಟ್ಟಿನಿಂದ ನಗರಸಭೆಯ ಅಧಿಕಾರಿಯ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ ಎಂದರು.
ಪ್ಲಾಸ್ಟಿಕ್ ಮುಕ್ತ ನಗರವಾಗಲಿನಗರದ ೩೧ವಾರ್ಡ್‌ಳಲ್ಲೂ ಕಸ ವಿಲೇವಾರಿ ವಿಳಂಬವಾಗುತ್ತಿದ್ದು, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ನನ್ನ ಕನಸು ಇನ್ನೂ ಸಾಕಾರಗೊಂಡಿಲ್ಲ. ನಗರಸಭೆಯ ನಮ್ಮ ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಹಾಗೂ ನಗರಸಭೆಯ ಎಲ್ಲ ಸದಸ್ಯರೂಗಳ ಸಹಕಾರದಿಂದ ನಗರವನ್ನು ಪ್ಲಾಸ್ಟಿಕ್ ಹಾಗೂ ಕಸ ಮುಕ್ತ ನಗರವನ್ನಾಗಿಸುವುದರ ಜೊತೆಗೆ ಸಮರ್ಪಕ ನೀರು ಪೂರೈಕೆ, ಸ್ವಚ್ಛತೆ, ನೈರ್ಮಲ್ಯ, ಶುಚಿತ್ವ, ಸಮರ್ಪಕ ರಸ್ತೆ, ಒಳಚರಂಡಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವುದು ನಮ್ಮ ಮುಖ್ಯ ಧ್ಯೇಯವೆಂದರು.
ಅಧ್ಯಕ್ಷ ಆರ್.ಜಗನಾಥ್ ಮಾತನಾಡಿ, ಸಚಿವ ಡಾ ಎಂ.ಸಿ.ಸುಧಾಕರ್‌ರ ಮಾರ್ಗದರ್ಶನದಲ್ಲಿ ಮಾದರಿನಗರವನ್ನಾಗಿಸಿ ಅಭಿವೃದ್ಧಿಯೆಡೆಗೆ ನಡೆಸುವುದಾಗಿ ಭರವಸೆ ನೀಡಿದರು.ಸಚಿವರಿಗೆ, ಮತದಾರರಿಗೆ ಚಿರಋಣಿ
ಉಪಾಧ್ಯಕ್ಷೆ ರಾಣಿಯಮ್ಮ ಮಾತನಾಡಿ, ತಾವು ಮನೆ-ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಪ್ರವೃತ್ತಿಯಲ್ಲಿ ಇದ್ದೆ. ಕಳೆದ ನಗರಸಭಾ ಚುನಾವಣೆಯಲ್ಲಿ ಸಚಿವರಾದ ಡಾ.ಎಂ. ಸಿ ಸುಧಾಕರ್ ಅವಕಾಶ ಮಾಡಿಕೊಟ್ಟರು, ನನ್ನ ವಾರ್ಡಿನ ಜನತೆ ನನ್ನ ಕೈ ಹಿಡಿದು ಚುನಾವಣೆಯಲ್ಲಿ ಗೆಲ್ಲಿಸಿದ್ದರ ಫಲವಾಗಿ ನಾನು ಇಂದು ಉಪಾಧ್ಯಕ್ಷೆಯಾಗಿದ್ದೇನೆ. ನನ್ನ ವಾರ್ಡಿನ ಜನತೆ ಮತ್ತು ಸಚಿವರಿಗೆ ಚಿರಋಣಿಯಾಗಿರುತ್ತೇನೆಂದರು.ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಾಜಾಚಾರಿ, ರೆಡ್ಡಪ್ಪ, ಜೈಭೀಮ್ ಮುರಳಿ, ಜಗದೀಶ್, ಹರೀಶ್, ಅಕ್ಷಯ್‌ಕುಮಾರ್, ಶಬ್ಬೀರ್, ಮಹಮ್ಮದ್ ಶಪೀಕ್, ರೇಖಾಉಮೇಶ್, ಸುಹಾಸಿನಿಶೇಷುರೆಡ್ಡಿ, ಗೀತಾ, ಸುಮಿತ್ರಾ, ಆಶಿಯಾ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.