ವ್ಯವಸಾಯ ಸೇವಾ ಸಂಘಕ್ಕೆ ನಿರ್ದೇಶಕರ ಆಯ್ಕೆ

| Published : Mar 10 2025, 12:20 AM IST

ಸಾರಾಂಶ

ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ವಿಎಸ್ ಎಸ್ ಎಸ್ ಎನ್ ಸಂಘಕ್ಕೆ ಭಾನುವಾರ ಚುನಾವಣೆ ನಡೆದಿದ್ದು ಆರು ಮಂದಿ ಚುನಾಯಿತ ಹಾಗೂ ಆರು ಅವಿರೋಧ ಸೇರಿ ಒಟ್ಟು 12 ಮಂದಿ ಜೆಡಿಎಸ್‌ ಬೆಂಬಲಿತರು ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ಪಾವಗಡ ವಾರ್ತೆ

ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ವಿಎಸ್ ಎಸ್ ಎಸ್ ಎನ್ ಸಂಘಕ್ಕೆ ಭಾನುವಾರ ಚುನಾವಣೆ ನಡೆದಿದ್ದು ಆರು ಮಂದಿ ಚುನಾಯಿತ ಹಾಗೂ ಆರು ಅವಿರೋಧ ಸೇರಿ ಒಟ್ಟು 12 ಮಂದಿ ಜೆಡಿಎಸ್‌ ಬೆಂಬಲಿತರು ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಇದೇ ದಿನ ಮಧ್ಯಾಹ್ನ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೆ ಮಾಜಿ ಶಾಸಕ ಕೆ.ಎಂ‌.ತಿಮ್ಮರಾಯಪ್ಪ ಹರ್ಷ ವ್ಯಕ್ತಪಡಿಸಿದರು. ಜೆಡಿಎಸ್ ಕಾರ್ಯಕರ್ತರು ಜೈಕಾರ ಮೊಳಗಿಸಿ ಸಂಭ್ರಮ ವ್ಯಕ್ತಪಡಿಸಿದರು.

ತಾಲೂಕಿನ ಕೆ.ಟಿ.ಹಳ್ಳಿಯ ಕೆ.ಎಲ್‌.ನಾಗರಾಜು, ದೇವಲಕೆರೆ ಮಧುಶಾ, ಅಂಜಪ್ಪ,ಲೋಕೇಶ್,ಗುಜ್ಜನಡು ಭೀಮಣ್ಣ, ದೇವರಬೆಟ್ಟ ಶಿವಣ್ಣ ಈ ಆರು ಮಂದಿ ನೂತನ ಚುನಾಯಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ದೇವಲಕೆರೆ ಲೋಕೇಶ್ ಪಾಳೇಗಾರ,ಕೆ.ಟಿ.ಹಳ್ಳಿ ಗ್ರಾಮದ ವರಲಕ್ಷ್ಮೀ ಜಯರಾಮ್ ನಾಗಮಣಿ ಚಂದ್ರಣ್ಣ, ಬಿಸಿಎಂ ಬಿ ಮೀಸಲು ರಂಗಸ್ವಾಮಿ, ಬಿಸಿಎಂ ಎ.ಮುದ್ದಯ್ಯ, ಸಾಲಗಾರರಲ್ಲದ ಕ್ಷೇತ್ರದಿಂದ ರಾಮಯ್ಯನಪಾಳ್ಯದ ಆರ್.ಎಚ್.ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾಯಿತ ಹಾಗೂ ಅವಿರೋಧ ಸೇರಿ ಒಟ್ಟು 12ಮಂದಿ ಜೆಡಿಎಸ್ ಬೆಂಬಲದಿಂದ ಕೆ.ಟಿ.ಹಳ್ಳಿ ವಿಎಸ್ ಎಸ್ ಎಸ್ ಎನ್ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಚುನಾಯಿತ ಹಾಗೂ ಅವಿರೋಧ ಆಯ್ಕೆಯಾದ ಸಂಘದ ಎಲ್ಲ 12ಮಂದಿ ನೂತನ ನಿರ್ದೇಶಕರಿಗೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ವೇಳೆ ಹಿರಿಯರಾದ ಬೆಟ್ಟದ ಈರಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ದಾಸಣ್ಣ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ನಾಗಣ್ಣ,ಚಂದ್ರಣ್ಣ, ಗ್ರಾಪಂ ಅಧ್ಯಕ್ಷ ನರಸಿಂಹಮೂರ್ತಿ, ಭಾಸ್ಕರನಾಯಕ ದೇವರಬೆಟ್ಟ ಮಂಜಣ್ಣ, ಪ್ರಸಾದ್ ಗ್ರಾಪಂ ಸದಸ್ಯ ಶ್ರೀನಿವಾಸ್‌, ಗ್ರಾಪಂ ಮಾಜಿ ಸದಸ್ಯ ಮೊಟಾ ಹನುಮಂತರಾಯಪ್ಪ, ಅಶೋಕ್ ನಾಗಣ್ಣ ಹಾಗೂ ಇತರೆ ಅನೇಕ ಮಂದಿ ಸ್ಥಳೀಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.