ಸಾರಾಂಶ
ಮೂಡಲಗಿ ಪಟ್ಟಣದ ದಿ.ಮೂಡಲಗಿ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಶನಿವಾರ ಜರುಗಿದ ಚುನಾವಣೆಯಲ್ಲಿ ಆಢಳಿತಾರೂಢ ಸುಭಾಸ ಢವಳೇಶ್ವರ ಗುಂಪಿನ ಎಲ್ಲ ಅಭ್ಯರ್ಥಿಗಳು ಚುನಾಯಿತರಾದರು.
ಮೂಡಲಗಿ: ಪಟ್ಟಣದ ದಿ.ಮೂಡಲಗಿ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಶನಿವಾರ ಜರುಗಿದ ಚುನಾವಣೆಯಲ್ಲಿ ಆಢಳಿತಾರೂಢ ಸುಭಾಸ ಢವಳೇಶ್ವರ ಗುಂಪಿನ ಎಲ್ಲ ಅಭ್ಯರ್ಥಿಗಳು ಚುನಾಯಿತರಾದರು.
ಒಟ್ಟು 1520 ಮತದಾರರಲ್ಲಿ 1360 ಜನ ಮತದಾರರು ಮತ ಚಲಾಯಿಸಿದರು. ಸಾಮಾನ್ಯ ಕ್ಷೇತ್ರದಿಂದ ಶಿವಲಿಂಗಪ್ಪ ಮಲ್ಲಪ್ಪ ಗಾಣಿಗೇರ, ಮಹಮದ್ ರಫೀಕ್ ಕುತುಬುದ್ದಿನ್ ತಾಂಬೊಳಿ, ಹರೀಶ ಅಂಗಡಿ, ಡಾ.ಕೃಷ್ಣಾಜಿ ದಂತಿ, ನವೀನ ಬಡಗಣ್ಣವರ, ಸುಭಾಸ ಢವಳೇಶ್ವರ, ರುದ್ರಪ್ಪ ವಾಲಿ, ಹಿಂದುಳಿದ ಅ ವರ್ಗದಿಂದ ರಾಚಪ್ಪ ಬೆಳಕೂಡ, ಪ. ಜಾತಿಯಿಂದ ಮಲಬಾಯಿ ಪೋಳ ಆಯ್ಕೆಗೊಂಡರು. ಸಹಕಾರ ಬ್ಯಾಂಕಿಗೆ 13 ಅಭ್ಯರ್ಥಿಗಳ ಆಯ್ಕೆಯ ಚುನಾವಣೆಯಲ್ಲಿ ಹಿಂದುಳಿದ ವರ್ಗ-ಬದಿಂದ ರಾಚರ್ಯ ಬಸಯ್ಯ ನಿರ್ವಾಣಿ, ಮಹಿಳಾ ಕ್ಷೇತ್ರದಿಂದ ಪ್ರಭಾವತಿ ಪ್ರಕಾಶ ಮುಧೋಳ, ದಾನೇಶ್ವರಿ ವೆಂಕಟೇಶ ಸತರಡ್ಡಿ, ಪ.ಪಂಗಡ ವರ್ಗದಿಂದ ಗಿರೀಶ ಅಂಬಿ ಒಟ್ಟು ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದರು. ಚುನಾವಣಾಧಿಕಾರಿಯಾಗಿ ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ್ ಕಾರ್ಯ ನಿರ್ವಹಿಸಿದ್ದರು. ವಿಜಯೋತ್ಸವ: ಚುನಾವಣೆಯಲ್ಲಿ ಆಯ್ಕೆಗೊಂಡವರ ಬೆಂಬಲಿಗರು ಪಟಾಕಿಸಿ ಸಿಡಿ, ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿ ಪಟ್ಟಣದ ವಿವಿಧ ದೇವಸ್ಥಾನಗಳಿಗೆ ತೇರಳಿ ದೇವರ ದರ್ಶನ ಪಡೆದರು.