ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

| Published : Mar 12 2025, 12:49 AM IST

ಸಾರಾಂಶ

ವಿಜಯಪುರ: ಪುರಸಭೆ ಅಧ್ಯಕ್ಷೆಯಾಗಿ ಭವ್ಯಮಧು ಹಾಗೂ ಉಪಾಧ್ಯಕ್ಷೆಯಾಗಿ ತಾಜುನ್ನೀಸಾ ಮಹಬೂಬ್ ಪಾಷಾ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಬಾಲಕೃಷ್ಣ ಘೋಷಿಸಿದರು.

ವಿಜಯಪುರ: ಪುರಸಭೆ ಅಧ್ಯಕ್ಷೆಯಾಗಿ ಭವ್ಯಮಧು ಹಾಗೂ ಉಪಾಧ್ಯಕ್ಷೆಯಾಗಿ ತಾಜುನ್ನೀಸಾ ಮಹಬೂಬ್ ಪಾಷಾ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಬಾಲಕೃಷ್ಣ ಘೋಷಿಸಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಭವ್ಯಮಧು, ಜೆಡಿಎಸ್‌ ಬೆಂಬಲಿತ ವಿಮಲಾ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸಲ್ಮಾಖಾನಂ, ಜೆಡಿಎಸ್ ತಾಜುನ್ನೀಸಾ ಮಹಬೂಬ್ ಪಾಷಾ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಭವ್ಯಮಧು ೧೭ ಮತ ಪಡೆದು ಗೆದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ತಾಜುನ್ನಿಸಾ ಮಹಬೂಬ್ ಪಾಷಾ ೧೯ ಮತ ಪಡೆದು ಆಯ್ಕೆಯಾದರು.

ಪಟ್ಟಣದ ಅಭಿವೃದ್ಧಿಗಾಗಿ ೨೩ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಇಲ್ಲಿ ಯಾರ ಪ್ರತಿಷ್ಠೆಯೂ ಇಲ್ಲ. ನಾವೆಲ್ಲರೂ ಒಂದಾಗಿ ಪಟ್ಟಣಾಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ನೂತನ ಅಧ್ಯಕ್ಷೆ ಭವ್ಯಮಧು ಹೇಳಿದರು.

ಪುರಸಭಾ ಸದಸ್ಯ ಸತೀಶ್ ಕುಮಾರ್ ಮಾತನಾಡಿ, ಪುರಸಭೆಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರ ಕಾರ್ಯವೈಖರಿ ಮೆಚ್ಚಿಕೊಂಡು ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಭವ್ಯಮಧುಗೆ ಮತ ಚಲಾಯಿಸಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ತಿಳಿಸಿದರು. ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ಮುಖಂಡ ಬಿ.ಚೇತನ್ ಗೌಡ, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಎಂ.ಸತೀಶ್ ಕುಮಾರ್, ವಿ.ನಂದಕುಮಾರ್, ಸಂಪತ್ ಕುಮಾರ್, ವಿ.ರಾಮಚಂದ್ರಪ್ಪ, ಮಾಜಿ ಪುರಸಭೆ ಸದಸ್ಯ ಮುನಿಚಿನ್ನಪ್ಪ, ಕೆ.ಎಂ.ಮಧುಮಹೇಶ್, ಆರ್.ಮುನಿರಾಜು, ಸೊಣ್ಣೇಗೌಡ, ಆರ್.ಎಂ.ಸಿಟಿ ಮಂಜುನಾಥ್, ಸೈಪುಲ್ಲಾ, ಸಜ್ಜದ್, ಮುನಿಕೃಷ್ಣಪ್ಪ, ಪ್ರಕಾಶ್, ಸಂಪತ್ ಕುಮಾರ್ ಹಾಜರಿದ್ದರು.