ಸಾರಾಂಶ
ವಿಶ್ವ ಪ್ರಸಿದ್ಧಿ ಪಡೆದಿರುವ ಶುದ್ಧ ಬಂಡೂರು ತಳಿಯನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಮಾದರಿ ಸಂಘವನ್ನಾಗಿ ಶ್ರಮಿಸಿ ರೈತಪರವಾಗಿ ಸೇವೆ ಸಲ್ಲಿಸಲಿ.
ಕನ್ನಡಪ್ರಭವಾರ್ತೆ ಮಳವಳ್ಳಿ
ಕಿರುಗಾವಲು ಹೋಬಳಿ ಎರಡನೇ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶೆಟ್ಟಹಳ್ಳಿ ಲಿಂಗರಾಜು, ಉಪಾಧ್ಯಕ್ಷರಾಗಿ ಸಿ.ಜ್ಯೋತಿಮಣಿ ಅವಿರೋಧವಾಗಿ ಆಯ್ಕೆಯಾದರು.ನೂತನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಿಂಗರಾಜು, ಜ್ಯೋತಿಮಣಿ ಇಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಚುನಾವಣಾ ಅಧಿಕಾರಿ ರಾಮಕೃಷ್ಣ ಘೋಷಣೆ ಮಾಡಿದರು.
ಕುರುಬರ ಸಂಘದ ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ ಮಾತನಾಡಿ, ವಿಶ್ವ ಪ್ರಸಿದ್ಧಿ ಪಡೆದಿರುವ ಶುದ್ಧ ಬಂಡೂರು ತಳಿಯನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಮಾದರಿ ಸಂಘವನ್ನಾಗಿ ಶ್ರಮಿಸಿ ರೈತಪರವಾಗಿ ಸೇವೆ ಸಲ್ಲಿಸಲಿ ಎಂದು ಆಶಿಸಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಏಷ್ಯದಲ್ಲಿಯೇ ಬಂಡೂರು ಕುರಿ ತಳಿ ಹೆಸರು ಮಾಡಿದೆ. ತಳಿಯ ಮೂಲ ಬಂಡೂರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳೇ ಆಗಿರುವುದರಿಂದ ಬಂಡೂರು ಕುರಿ ತಳಿಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಸಹಕಾರ ಸಂಘ ಯಶಸ್ವಿಯಾಗಿ ಮುಂದುವರೆಯಲಿ ಸರ್ಕಾರವು ಹೆಚ್ಚಿನ ಅನುದಾನ ನೀಡಲಿ ಎಂದರು.
ನೂತನ ಅಧ್ಯಕ್ಷ ಲಿಂಗರಾಜು ಮಾತನಾಡಿ, ಬಂಡೂರು ತಳಿ ಉಳಿಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಕಿರುಗಾವಲು ಹೋಬಳಿ ಎರಡನೇ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ಜನಪ್ರತಿನಿಧಿಗಳು ಹಾಗೂ ರೈತರ ಸಹಕಾರದೊಂದಿಗೆ ಉತ್ತಮವಾಗಿ ಮುನ್ನೇಡಿಸಿಕೊಂಡು ಹೋಗುತ್ತೇನೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸುತ್ತೇನೆಂದು ಭರವಸೆ ನೀಡಿದರು.ಇದೇ ವೇಳೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲಾಯಿತು. ಈರಮಾದಯ್ಯ ನಾಗರಾಜು ಬಿ.ಪುಟ್ಟಬಸವಯ್ಯ ಕೆ. ಮಹದೇವಯ್ಯ ಡಿ.ಕೆ ಮಹಲಿಂಗು ರುದ್ರಯ್ಯ ಶ್ರೀನಿವಾಸ್ ಮಂಟೇಲಿಂಗಯ್ಯ ಜ್ಯೋತಿ ಮಣಿ ಸೌಭಾಗ್ಯ ಶಶಿಧರ್, ಅಧ್ಯಕ್ಷ ನಾಗರಾಜು ಸೇರಿದಂತೆ ಇತರರು ಇದ್ದರು.