ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಸಾಂಸ್ಥಿಕ ಚುನಾವಣೆ ನಡೆದಿದ್ದು ಅದರಂತೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ರಾಜ್ಯಪರಿಷತ್ತಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ತಿಳಿಸಿದ್ದಾರೆ.ಮಂಡ್ಯ ವಿಧಾನ ಸಭಾ ಕ್ಷೇತ್ರಕ್ಕೆ ಹಳೇಬೂದನೂರು ಸ್ವಾಮಿ, ರಾಜ್ಯ ಪರಿಷತ್ತಿಗೆ ಬಿ.ಆರ್.ರಾಮಚಂದ್ರು, ಮದ್ದೂರು ಕ್ಷೇತ್ರಕ್ಕೆ ಚಿಕ್ಕತಿಮ್ಮೇಗೌಡ, ರಾಜ್ಯಪರಿಷತ್ತಿಗೆ ಎ.ಬಿ.ಬಿಳಿಗೌಡ, ಮಳವಳ್ಳಿ ಕ್ಷೇತ್ರಕ್ಕೆ ತಳಗವಾಡಿ ಹನುಮಂತು, ರಾಜ್ಯಪರಿಷತ್ತಿಗೆ ಪುಟ್ಟರಾಮು, ನಾಗಮಂಗಲ ಕ್ಷೇತ್ರಕ್ಕೆ ಎಂ.ಸಿ.ಚೆನ್ನಪ್ಪ, ರಾಜ್ಯ ಪರಿಷತ್ತಿಗೆ ಜಿ.ಎಚ್.ಪುಟ್ಟಸ್ವಾಮಿಗೌಡ, ಮೇಲುಕೋಟೆ ಕ್ಷೇತ್ರಕ್ಕೆ ಎಸ್.ಎ.ಮಲ್ಲೇಶ್, ರಾಜ್ಯ ಪರಿಷತ್ತಿಗೆ ಕೆ.ಪುಟ್ಟೇಗೌಡ, ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ದಶರಥ, ರಾಜ್ಯಪರಿಷತ್ತಿಗೆ ಸುರೇಶ್, ಕೆ.ಆರ್.ಪೇಟೆ ಕ್ಷೇತ್ರಕ್ಕೆ ಎಂ.ಮೋಹನ್, ರಾಜ್ಯ ಪರಿಷತ್ತಿಗೆ ಎ.ಆರ್.ರಘು ಅವರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲೆಯ ಕಾರ್ಯಕಾರಿ ಸಮಿತಿಗೆ ೫೧ ಮಂದಿ ಸದಸ್ಯರು ಮತ್ತು ಪ್ರತಿ ಕ್ಷೇತ್ರಕ್ಕೆ ೧೫ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಮಂಡ್ಯ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಡಿ.ರಮೇಶ್, ಸದಸ್ಯರಾಗಿ ಎಸ್.ಮಹೇಶ್, ಆರ್.ಎಂ.ಪ್ರಕಾಶ್, ಬಿ.ಎಂ.ಕಿರಣ್, ಕೃಷ್ಣೇಗೌಡ, ಧನಂಜಯಕುಮಾರ್, ಹೇಮಂತ್, ಡಿ.ಸಿ.ಮಹೇಂದ್ರ, ಆರ್.ಜಿ. ಮನುಕುಮಾರ್, ಕೆ.ಟಿ.ಶೇಖರ್, ದಯಾನಂದ, ಕೆ.ಎಲ್.ಶಿವರಾಮು, ನಾಗೇಶ್, ಎಚ್.ಲೋಕೇಶ್, ಜವರೇಗೌಡ, ಬಸಪ್ಪದೇವರು, ಡಿ.ಸಿದ್ದಾಚಾರಿ, ಡಿ.ಎಸ್.ನಾಗರಾಜು, ಪುಟ್ಟಯ್ಯ, ಜವರೇಗೌಡ, ಶೋಭಾ, ವಿ.ಎಂ.ವಿಶ್ವನಾಥ್, ಎ.ಕುಮಾರ್, ಚಂದ್ರೇಗೌಡ, ರಾಮಸ್ವಾಮಿಗೌಡ, ಶಿವರಾಮಯ್ಯ, ಡಿ.ಕೆ.ಶಿವಪ್ರಕಾಶ್, ನರಸಿಂಹಯ್ಯ, ಎಸ್.ಸಿ.ರಾಜು, ಶಂಕರೇಗೌಡ, ಅನಂತ, ಶ್ರೀಕಂಠೇಗೌಡ, ಯೋಗೇಶ್, ಬೆಟ್ಟಸ್ವಾಮಿಗೌಡ, ರಾಧಾಕೃಷ್ಣ, ಪ್ರವೀಣ್, ಯಶವಂತ್, ಎಂ.ಎಸ್.ಆನಂದ, ಮಹೇಶ್, ಜಯಶೀಲಮ್ಮ, ತಿಮ್ಮೇಗೌಡ, ಎಸ್.ಬಿ.ಶಂಕರ್, ಜಿ.ಸಿ.ಆನಂದ, ದೇವೇಗೌಡ, ಮರೀಗೌಡ, ಲೋಕೇಶ್, ಪುಟ್ಟಸ್ವಾಮಿ, ಆದರ್ಶಗೌಡ, ಕುಮಾರ್, ನರಸಿಂಹಚಾರ್, ಗುಂಡಪ್ಪ ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಂದು ಪೂರ್ವಭಾವಿ ಸಭೆ
ಮದ್ದೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಮಂಡ್ಯ ತಾಲೂಕಿನ ವಿ.ಸಿ ಫಾರ್ಮ್ ನಲ್ಲಿ ಮಾ.14 ರಂದು ಹಮ್ಮಿಕೊಂಡಿರುವ ಕ್ರೀಡಾಂಗಣ ಮೇಲ್ದರ್ಜೆಗೇರಿಸಲು ಭೂಮಿ ಪೂಜೆ ಹಾಗೂ ಅಂಗವಿಕಲರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಲು ಮಾ.11 ರಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ಮದ್ದೂರಿನ ನಿವಾಸದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸುವಂತೆ ತಾಲೂಕು ಘಟಕ ಮನವಿ ಮಾಡಿದೆ.