ರಾಜ್ಯದಲ್ಲಿರುವ ಪ್ರತಿಯೊಬ್ಬ ರೈತನ ಸ್ವಾಭಿಮಾನದ ಚುನಾವಣೆ: ಸಂಯುಕ್ತಾ ಪಾಟೀಲ

| Published : Apr 28 2024, 01:16 AM IST

ರಾಜ್ಯದಲ್ಲಿರುವ ಪ್ರತಿಯೊಬ್ಬ ರೈತನ ಸ್ವಾಭಿಮಾನದ ಚುನಾವಣೆ: ಸಂಯುಕ್ತಾ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ಸಂಯುಕ್ತಾ ಪಾಟೀಲ ಅವರ ಚುನಾವಣೆಯಲ್ಲ, ಜನರಿಗೆ ಪಂಚಗ್ಯಾರಂಟಿ ನೀಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಮತಗಿ ಲೋಕಸಭೆ ಚುನಾವಣೆ ಸಂಯುಕ್ತ ಪಾಟೀಲ ಅವರ ಚುನಾವಣೆಯಲ್ಲ, ಈ ಚುನಾವಣೆ ರಾಜ್ಯದಲ್ಲಿರುವ ಪ್ರತಿಯೊಬ್ಬ ಸ್ವಾಭಿಮಾನಿ ರೈತನ ಚುನಾವಣೆಯಾಗಿದೆ. ರಾಜ್ಯದಲ್ಲಿರುವ ಪ್ರತಿಯೊಬ್ಬ ಮಹಿಳೆ ಸ್ವಾಭಿಮಾನದಿಂದ ಬದುಕು ನಡೆಸುವ ಜವಾಬ್ದಾರಿ ಕೊಟ್ಟಿರುವ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದು ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಪಟ್ಟಣದಲ್ಲಿನ ಪಾರ್ವತಿ ಪರಮೇಶ್ವರ ಕಲ್ಯಾಣಮಂಟಪದ ಆವರಣದಲ್ಲಿ ಕಮತಗಿ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ರಾಜ್ಯದಲ್ಲಿರುವ ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ನೀಡಿದ್ದು, ಅವುಗಳಿಂದ ಜನರಿಗೆ ಸಾಕಷ್ಟು ಅನಕೂಲವಾಗಿದೆ, ಆದರೆ ಬಿಜೆಪಿಯವರು ಗ್ಯಾರಂಟಿಗಳನ್ನು ನೀಡಿರುವುದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಹೇಳಿದರು.

ಕಳೆದ 20 ವರ್ಷಗಳಿಂದ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುತ್ತ ಬರುತ್ತಿದ್ದೀರಿ. ಈ ಬಾರಿ ಬದಲಾವಣೆ ಮಾಡುವ ಮೂಲಕ ಒಂದು ಅವಕಾಶ ನೀಡಿದರೆ ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡಿ ಅರ್ಧಕ್ಕೆ ನಿಂತ ಕುಡಚಿ ರೈಲ್ವೆ ಕಾಮಗಾರಿ, ಕಳಸಾ-ಬಂಡೂರಿ ಯೋಜನೆ, ಯುಕೆಪಿ ಯೋಜನೆ ಅಲ್ಲದೆ ಸಣ್ಣ ಕೈಗಾರಿಕೆಗಳನ್ನು ತರಲು ಪ್ರಾಮಾಣಿಕ ಕೆಲಸ ಮಾಡುವೆ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಮಾತನಾಡಿ, ಕಮತಗಿ ಪಟ್ಟಣಕ್ಕೆ ಸಂಸದ ಪಿ.ಸಿ ಗದ್ದಿಗೌಡರ ಅವರು ಅವರ ಕೊಡುಗೆ ಏನು, ಅವರು ತಮ್ಮ 20 ವರ್ಷದ ಅವಧಿಯಲ್ಲಿ ಯಾವ ಯೋಜನೆಗಳಿಗೆ ಅನುದಾನ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ, ಕಮತಗಿ ಪಟ್ಟಣಕ್ಕೆ ಐದು ವರ್ಷಕ್ಕೊಮ್ಮೆ ಮತ ಕೇಳಲು ಮಾತ್ರ ಬರುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆ ? ಎಂದು ಪ್ರಶ್ನಿಸಿದ ಅವರು, ಈ ಬಾರಿ ಬದಲವಾಣೆ ಮಾಡುವ ಮೂಲಕ ಸದಾ ಜನರ ಧ್ವನಿಯಾಗಿ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಂಯುಕ್ತಾ ಪಾಟೀಲರಿಗೆ ಮತ ನೀಡುವ ಮೂಲಕ ಆಯ್ಕೆ ಮಾಡಬೇಕು ಎಂದರು.

ಪ್ರಚಾರ ಸಭೆಯಲ್ಲಿ ಶಾಸಕ ಎಚ್.ವೈ.ಮೇಟಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡರಾದ ರಕ್ಷಿತಾ ಈಟಿ, ಶಿವಲಿಂಗಪ್ಪ ರಾಂಪೂರ,ಎಸ್ ಎಸ್ ಮಂಕಣಿ , ರಮೇಶ ಎಸ್ . ಜಮಖಂಡಿ, ಬಸವರಾಜ ಕುಂಬಳಾವತಿ, ಯಲ್ಲಪ್ಪ ವಡ್ಡರ, ಮಹಾಂತೇಶ ಅಂಗಡಿ, ಎನ್ .ಎಲ್. ತಹಸೀಲ್ದಾರ್‌, ಗಂಗಪ್ಪ ಬೂತಲ, ಹುಚ್ಚಪ್ಪ ಸಿಂಹಾಸನ, ದೇವಿಪ್ರಸಾದ ನಿಂಬಲಗುಂದಿ, ಗುರುಲಿಂಗಪ್ಪ ಪಾಟೀಲ, ಲಕ್ಷ್ಮಣ ದ್ಯಾಮಣ್ಣವರ, ಲಕ್ಷ್ಮಣ ಮಾದರ, ನೇತ್ರಾವತಿ ನಿಂಬಲಗುಂದಿ, ಹುಚ್ಚವ್ವ ಹಗೇದಾಳ, ನಂದಾ ದ್ಯಾಮಣ್ಣವರ, ರಮೇಶ ಲಮಾಣಿ, ವಿದ್ಯಾಧರ ಮಳ್ಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.