ಸಾರಾಂಶ
ದಾಬಸ್‌ಪೇಟೆ: ಸೋಂಪುರದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ದಾಬಸ್‌ಪೇಟೆಯ ಜಿ.ಅಶೋಕ್ ಹಾಗೂ ಉಪಾಧ್ಯಕ್ಷರಾಗಿ ನಿಜಗಲ್ ಕೆಂಪೋಹಳ್ಳಿಯ ಗಂಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಾಬಸ್‌ಪೇಟೆ: ಸೋಂಪುರದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ದಾಬಸ್‌ಪೇಟೆಯ ಜಿ.ಅಶೋಕ್ ಹಾಗೂ ಉಪಾಧ್ಯಕ್ಷರಾಗಿ ನಿಜಗಲ್ ಕೆಂಪೋಹಳ್ಳಿಯ ಗಂಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಜಿ.ಅಶೋಕ್ ಮಾತನಾಡಿ, ನನ್ನನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಿರ್ದೇಶಕರುಗಳಿಗೆ ಅಭಿನಂದಿಸುತ್ತಾ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಹಾಗೂ ಸಹಕಾರ ಸಂಘದಿಂದ ರೈತರಿಗೆ ಸಿಗಬೇಕಾದ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತೇವೆ. ಸಹಕಾರ ಸಂಘವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ ಎಂದರು.ಉಪಾಧ್ಯಕ್ಷ ಗಂಗರಾಜು ಮಾತನಾಡಿ, ಗ್ರಾಮದ ಪ್ರಮುಖರು ಸೇರಿ ಚರ್ಚಿಸಿ ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಸಿದ್ದೇವೆ. ಮುಂದೆಂದೂ ಸಹಕಾರ ಸಂಘಗಳಿಗೆ ಚುನಾವಣೆ ನಡೆಯಬಾರದು, ಚುನಾವಣಾ ವೆಚ್ಚವನ್ನೆಲ್ಲಾ ಕಡಿಮೆಗೊಳಿಸಿ, ಆದಾಯದ ಮೂಲವನ್ನು ಹುಡುಕಿ ಎಲ್ಲಾ ರೈತರಿಗೂ ಮಾದರಿಯಾಗುವಂತೆ ಅಭಿವೃದ್ಧಿಪಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರುದ್ರಪ್ಪ, ತಾಪಂ ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿ, ಮಾಜಿ ಸದಸ್ಯ ಶ್ರೀನಿವಾಸಯ್ಯ, ಮಾಜಿ ಅಧ್ಯಕ್ಷರಾದ ಲೋಕೇಶ್, ಲಕ್ಕೂರು ಸಿದ್ದರಾಜು, ಗಂಗರುದ್ರಯ್ಯ, ಮಾದೇನಹಳ್ಳಿ ರಾಜಶೇಖರಯ್ಯ, ಗ್ರಾಪಂ ಸದಸ್ಯಶಿವಕುಮಾರ್, ಮುಖಂಡರಾದ ಎಡೇಹಳ್ಳಿ ಶಶಿಧರ್, ಮಂಜುನಾಥ್, ಕೆಂಚಪ್ಪ ಹಾಗು ಕಾರ್ಯನಿರ್ವಹಣಾದಿಕಾರಿ ಭಾನುಪ್ರಕಾಶ್, ಹಾಗೂ ನಿರ್ದೇಶಕರಾದ ಉದಯಕುಮಾರ್, ನಾರಾಯಣಪ್ಪ, ಮಹದೇವಯ್ಯ, ಶ್ರೀನಿವಾಸಯ್ಯ, ಪದ್ಮಾವತಿ, ಶಾಂತಮ್ಮ, ಬಸವರಾಜು, ಚಿಕ್ಕಣ್ಣ, ನಾಗರಾಜು, ರಂಗಸ್ವಾಮಯ್ಯ, ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದರು.ಪೋಟೋ 3 :ಸೋಂಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಅಶೋಕ್ ಹಾಗೂ ಉಪಾಧ್ಯಕ್ಷರಾಗಿ ಗಂಗರಾಜು ಅವಿರೋದವಾಗಿ ಆಯ್ಕೆಯಾಗಿದ್ದಕ್ಕೆ ಮುಖಂಡರು ಅಭಿನಂದಿಸಿದರು.